For Quick Alerts
ALLOW NOTIFICATIONS  
For Daily Alerts
 

ರವೀಂದ್ರ ಜಡೇಜಾಗೆ 12 ಸಂದೇಶ ಕಳುಹಿಸಿದ್ದ ಇಂಗ್ಲೆಂಡ್‌ ಕ್ರಿಕೆಟ್ ಸುಂದರಿ ಸಾರಾ ಟೇಲರ್: ಟ್ವೀಟ್ ಮತ್ತೆ ವೈರಲ್

jadeja and sara taylor

ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟ್ ಆಟಗಾರ್ತಿ ಸಾರಾ ಟೇಲರ್ ಒಂದು ಗಂಟೆಯಲ್ಲಿ ರವೀಂದ್ರ ಜಡೇಜಾಗೆ 12 ಸಂದೇಶಗಳನ್ನು ಕಳುಹಿಸಿದ್ದ ಟ್ವೀಟ್‌ಗಳು ಇದೀಗ ಮತ್ತೆ ವೈರಲ್ ಆಗಿದೆ. 2014ರಲ್ಲಿ ಜಡ್ಡುಗೆ ಖಾಸಗಿಯಾಗಿ ಸಂದೇಶ ಕಳುಹಿಸಬೇಕಾಗಿದ್ದ ಸಾರಾ ಟೇಲರ್, ಜಡೇಜಾಗೆ ಟ್ಯಾಗ್ ಮಾಡಿದ್ದ ಸಂದೇಶಗಳು ಟ್ವಿಟ್ಟರ್‌ನಲ್ಲಿ ಎಲ್ಲರಿಗೂ ಬಿತ್ತರವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

Ravindra Jadeja ಇನ್ಮುಂದೆ CSKಗೆ ನಾಯಕ | Oneindia Kannada

2014ರಲ್ಲಿ ಜಡೇಜಾ ಸಾರಾ ಟೇಲರ್‌ಗೆ ಸಂದೇಶ ಕಳುಹಿಸಿದ್ದರು. ಇದಕ್ಕೆ ಇನ್‌ಬಾಕ್ಸ್‌ನಲ್ಲಿ ಉತ್ತರಿಸುವ ಬದಲು, ಜಡೇಜಾ ಅವರನ್ನು ಟ್ಯಾಗ್ ಮಾಡುವ ಮೂಲಕ ಸಾರಾ ಪ್ರತಿಕ್ರಿಯಿಸಿದ್ದರು. ಇದರೊಂದಿಗೆ ಇಬ್ಬರ ನಡುವಿನ ಹರಟೆ ಹೊರಬಿದ್ದಿತ್ತು. ಟ್ವಿಟರ್‌ನಲ್ಲಿ ಜಡೇಜಾ ಅವರನ್ನು ಸಾರಾ ಟೇಲರ್ ಫಾಲೋ ಮಾಡಿದ್ದಾರೆ ಆದರೆ ಜಡೇಜಾ ಸಾರಾ ಅವರನ್ನು ಫಾಲೋ ಮಾಡಿಲ್ಲ. ಅದಕ್ಕಾಗಿಯೇ ಟ್ಯಾಗ್ ಮಾಡಿ ಉತ್ತರಿಸಬೇಕಾಯಿತು ಎಂದು ಸಾರಾ ಸಂದೇಶದಲ್ಲಿ ವಿವರಿಸಿದ್ದಾರೆ.

ಜಡೇಜಾ ಅವರ ಸಂದೇಶಕ್ಕೆ ಸಾರಾ ತಡವಾಗಿ ಪ್ರತಿಕ್ರಿಯಿಸಿದರು. ಹಾಗಾಗಿ 10 ಗಂಟೆಗೆ ಪೂಲ್‌ನಲ್ಲಿ ಇರುತ್ತೇನೆ ಎಂದು ಸಾರಾ ಮೊದಲು ಉತ್ತರಿಸಿದಳು. ಎರಡನೇ ಸಂದೇಶದಲ್ಲಿ, ಇನ್‌ಬಾಕ್ಸ್‌ಗೆ ಸಂದೇಶವನ್ನು ಕಳುಹಿಸಲು ನೀವು ನನ್ನನ್ನು ಅನುಸರಿಸಬೇಕು ಎಂದು ಸಾರಾ ನೆನಪಿಸಿದರು. ಹೀಗೆ ಸಾರಾ ಜಡೇಜಾ ಖಾಸಗಿ ಸಂದೇಶಗಳು ಸಾರ್ವಜನಿಕವಾಗಿ ಹರಿದಾಡಿದವು.

ಈ ಟ್ವೀಟ್‌ಗಳು ಇದೀಗ ಮತ್ತೆ ವೈರಲ್ ಆಗಿದ್ದು, ಜಡ್ಡು ಹಾಗೂ ಸಾರಾ ನಡುವೆ ಪ್ರೀತಿ ಮೂಡಿತ್ತಾ ಎಂಬ ಚರ್ಚೆಗೆ ಕಾರಣವಾಗಿದೆ. ಆದ್ರೆ 2016 ರಲ್ಲಿ ಜಡೇಜಾ ರಿವಾ ಸೋಲಂಕಿ ಅವರನ್ನು ವಿವಾಹವಾಗುವ ಮೂಲಕ ಎಲ್ಲಾ ಗಾಸಿಪ್‌ಗಳಿಗೆ ತೆರೆ ಎಳೆದರು.

ಇನ್ನು ವಿಕೆಟ್‌ಕೀಪರ್-ಬ್ಯಾಟ್ಸ್‌ವುಮನ್ ಸಾರಾ ಟೇಲರ್ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಸಾರಾ ಟೇಲರ್ ಖಾಸಗಿ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಎರಡು ಮಕ್ಕಳ ತಾಯಿಯಾಗಿರುವ ಈಕೆ ತನಗೆ ಯಾರೊಂದಿಗೆ ಮದುವೆ ಆಗಿದೆ ಅಥವಾ ಬಾಯ್‌ಫ್ರೆಂಡ್ ಯಾರು ಎಂಬ ವಿಚಾರವನ್ನ ಬಹಿರಂಗಪಡಿಸಿಲ್ಲ.

17ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಸಾರಾ 226 ಪಂದ್ಯಗಳಲ್ಲಿ 6533 ರನ್ ಗಳಿಸಿದ್ದಾರೆ. ಅವರು ಏಕದಿನ ಮತ್ತು ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ಮಹಿಳಾ ತಂಡದ ಸದಸ್ಯರಾಗಿದ್ದರು. ಮಹಿಳಾ ಕ್ರಿಕೆಟ್‌ನಲ್ಲಿ, ಸಾರಾ 232 ಸ್ಟಂಪಿಂಗ್‌ಗಳೊಂದಿಗೆ ಅತಿ ಹೆಚ್ಚು ಸ್ಟಂಪಿಂಗ್‌ಗಳ ದಾಖಲೆಯನ್ನು ಹೊಂದಿದ್ದಾರೆ.

Story first published: Thursday, March 24, 2022, 9:45 [IST]
Other articles published on Mar 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+