ವಿಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲೂ ಗೆಲುವು: ಐತಿಹಾಸಿಕ ಸಾಧನೆ ಮಾಡಿದ ಬಾಂಗ್ಲಾದೇಶ

ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಪ್ರವಾಸಿ ಬಾಂಗ್ಲಾದೇಶ ಅಮೋಘ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಕೆರಿಬಿಯನ್ ನಾಡಿನಲ್ಲಿ ಬಾಂಗ್ಲಾದೇಶ ಇದೇ ಮೊದಲ ಬಾರಿಗೆ ಸರಣಿ ಗೆದ್ದಿದೆ.
ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಪಡೆಯ ಯಾವ ಬ್ಯಾಟರ್‌ಗಳು ಕೂಡ ಕ್ರೀಸ್‌ನಲ್ಲಿ ನೆಲೆಯೂರದಂತೆ ಮಾಡುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಯಿತು. ವೆಸ್ಟ್ ಇಂಡೀಸ್ ತಂಡ ಕೇವಲ 108 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸುಲಭ ಸವಾಲನ್ನು ಮುಂದಿಟ್ಟಿತ್ತು.

ಬಾಂಗ್ಲಾ ಬೌಲರ್‌ಗಳ ಮೇಲುಗೈ
ವೆಸ್ಟ್ ಇಂಡೀಸ್ ತಂಡದ ಬ್ಯಾಟರ್‌ಗಳ ವಿರುದ್ಧ ಬಾಂಗ್ಲಾದೇಶ ಬೌಲರ್‌ಗಳು ಅದ್ಭುತ ಯಶಸ್ಸು ಸಾಧಿಸಿದರು. ಅದರಲ್ಲೀ ಮೆಹಿದಿ ಹಸನ್ ಹಾಗೂ ನಸುಮ್ ಅಹ್ಮದ್ ದಾಳಿಗೆ ವಿಂಡೀಸ್ ದಾಂಡಿಗರಲ್ಲಿ ಉತ್ತರನೇ ಇರಲಿಲ್ಲ. ಹಸನ್ ನಾಲ್ಕು ವಿಕೆಟ್ ಪಡೆದರೆ ಅಹ್ಮದ್ ಮೂರು ವಿಕೆಟ್ ಸಂಪಾದಿಸಿದರು. ವೆಸ್ಟ್ ಇಂಡೀಸ್ ತಂಡ ಕೇವಲ 108 ರನ್ ಗಳಿಸಲಷ್ಟೇ ಶಕ್ತವಾಯಿತು.

ಬಾಂಗ್ಲಾ ಭರ್ಜರಿ ಬ್ಯಾಟಿಂಗ್
ಇನ್ನು ಬಾಂಗ್ಲಾದೇಶ ತಂಡ ಈ ಅಲ್ಪ ಮೊತ್ತವನ್ನು ಎಚ್ಚರಿಕೆಯಿಂದ ಬೆನ್ನಟ್ಟಲು ಆರಂಭಿಸಿತು. ನಜ್ಮುಲ್ಲಾ ಹುಸೈನ್ ವಿಕೆಟ್ ಮಾತ್ರವೇ ಕಳೆದುಕೊಂಡ ಬಾಂಗ್ಲಾ ಭರ್ಜರಿ 9 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ನಾಯಕ ತಮೀಮ್ ಇಕ್ಬಾಲ್ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಲಿಟನ್ ದಾಸ್ 32 ರನ್ ಗಳಿಸಿದರು

ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದ ಬಾಂಗ್ಲ
ಈ ಸರಣಿಯ ಮೊದಲ ಪಂದ್ಯದಲ್ಲಿ ಕೂಡ ಬಾಂಗ್ಲಾದೇಶದ ಬೌಲಿಂಗ್ ಅದ್ಭುತವಾಗಿತ್ತು. ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಯಶ್ಸಸು ಸಾಧಿಸಿದ್ದರು. ಮಳೆಯಿಂದ ಅಡಚಣೆಗೊಳಗಾದ ಪಂದ್ಯದಲ್ಲಿ 149 ರನ್‌ಗಳಿಗೆ 9 ವಿಕೆಟ್ ಕಬಳಿಸಿತ್ತು ಪ್ರವಾಸಿ ಬಾಂಗ್ಲ. ಬಳಿಕ ಡಕ್‌ವರ್ತ್ ಲೂಯಿಸ್ ನಿಯಮಲ್ಲಿ ರನ್ ಬೆನ್ನಟ್ಟಿದ ಬಾಂಗ್ಲಾದೇಶ 7 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು

ಇತ್ತಂಡಗಳ ಪ್ಲೇಯಿಂಗ್ XI
ವೆಸ್ಟ್ ಇಂಡಿಸ್: ಕೈಲ್ ಮೇಯರ್ಸ್, ಶಾಯ್ ಹೋಪ್ (ವಿಕೆಟ್ ಕೀಪರ್), ಶಮರ್ಹ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಕೀಮೋ ಪಾಲ್, ರೊಮಾರಿಯೋ ಶೆಫರ್ಡ್, ಅಕೆಲ್ ಹೊಸೈನ್, ಗುಡಾಕೇಶ್ ಮೋಟಿ, ಅಲ್ಜಾರಿ ಜೋಸೆಫ್
ಬೆಂಚ್: ಆಂಡರ್ಸನ್ ಫಿಲಿಪ್, ಜೇಡನ್ ಸೀಲ್ಸ್, ಕೀಸಿ ಕಾರ್ಟಿ
ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮೆಹಿದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ
ಬೆಂಚ್: ತಸ್ಕಿನ್ ಅಹ್ಮದ್, ಅನಾಮುಲ್ ಹಕ್, ತೈಜುಲ್ ಇಸ್ಲಾಂ, ಎಬಾಡೋತ್ ಹೊಸೈನ್ .
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications