WI vs ENG: ಇಂಗ್ಲೆಂಡ್ ವಿರುದ್ಧ ವಿಂಡೀಸ್‌ಗೆ 10 ರನ್‌ಗಳ
ಇಂಗ್ಲೆಂಡ್ ತಂಡ ಎಲ್ಲಿ ಎಡವುತ್ತಿದೆಯ ಎಂದು ನಿಜಕ್ಕೂ ಅದಕ್ಕೂ ಮನವರಿಕೆ ಆದಂತೆ ಕಾಣುತ್ತಿಲ್ಲ. ಸಾಲು ಸಾಲು ಸೋಲುಗಳು ತಂಡಕ್ಕೆ ಹತಾಶೆ ಈಡುಮಾಡಿದೆ. ಗೆಲುವು ಅನ್ನುವುದು ಮಾಯಾಜಿಂಕೆಯಂತೆ ಇಂಗ್ಲೆಂಡ್ ತಂಡಕ್ಕೆ ಭಾಸವಾಗುತ್ತಿದೆ. ಸ್ಟಾರ್ ಬ್ಯಾಟರ್‌ಗಳು ಇದ್ದರೂ ತಂಡದ ನೆರವಿಗೆ ಬಾರದೇ ಇರುವುದು ತಂಡಕ್ಕೆ ನುಂಗಲಾಗದ ತುತ್ತಾಗುತ್ತಿದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇಂಗ್ಲೆಂಡ್ ಆಡಿದ ಎರಡನೇ ಟಿ20 ಪಂದ್ಯವನ್ನು ಕೈ ಚೆಲ್ಲಿದೆ. ಸರಣಿ ವಶಕ್ಕೆ ಪಡೆಯಬೇಕೆಂದರೆ ಇಂಗ್ಲೆಂಡ್ ಮುಂದಿನ ಮೂರು ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಇಂಗ್ಲೆಂಡ್ ತಂಡ ತೆಗೆದುಕೊಂಡ ಕೆಲವು ನಿರ್ಣಯಗಳು ತಂಡಕ್ಕೆ ಮುಳುವಾಗುತ್ತಿವೆ.

ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭಿಕರಾದ ಬ್ರೆಂಡನ್ ಕಿಂಗ್, ಕೈಲ್ ಮೆಯರ್ಸ್ (17) ತಂಡಕ್ಕೆ 43 ರನ್ ಗಳ ಜೊತೆಯಾಟವನ್ನು ನೀಡಿದರು. ಉಳಿದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ನಿಕೋಲಸ್ ಪೂರನ್, ಶಾಯ್ ಹೋಪ್, ಶಿಮ್ರೋನ್ ಹೆಟ್ಮೆಯರ್ ಒಂದಂಕಿಯಲ್ಲಿ ಆಟ ಮುಗಿಸಿದರು.
ಐದನೇ ವಿಕೆಟ್‌ಗೆ ರೋವನ್ ಪೊವೆಲ್ ಹಾಗೂ ಕಿಂಗ್ ಜೊತೆಗೂಡಿ ಅಮೋಘ ಆಟದ ಪ್ರದರ್ಶನ ನೀಡಿದರು. ಈ ಜೋಡಿ 46 ಎಸೆತಗಳಲ್ಲಿ 80 ರನ್ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಪೊವೆಲ್ 50 ರನ್ ಸಿಡಿಸಿದರು.

ಕಿಂಗ್ 82 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ. ಆಂಡಿ ರಸೆಲ್ 14 ರನ್ ಬಾರಿಸಿದರು. ಅಂತಿಮವಾಗಿ ವಿಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176 ರನ್ ಸೇರಿಸಿತು. ಇಂಗ್ಲೆಂಡ್ ಪರ ಆದಿಲ್ ರಾಶೀದ್ ಹಾಗೂ ಟೈಮಲ್ ಮಿಲ್ಸ್ ತಲಾ ಎರಡು ವಿಕೆಟ್ ಪಡೆದರು.
ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಜೋಸ್ ಬಟ್ಲರ್ 5ರನ್ ಗಳಿಗೆ ಆಟ ಮುಗಿಸಿದರು. ಫಿಲ್ ಸಾಲ್ಟ್ 25, ವಿಲ್ ಜಾಕ್ಸ್ 24 ರನ್ ಬಾರಿಸಿ ಔಟ್ ದರು. ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಮೋಯಿನ್ ಅಲಿ 22 ರನ್ ಬಾರಿಸಿ ತಂಡಕ್ಕೆ ನೆರವಾದರು.
ಬೇರೆಯಾವೊಬ್ಬ ಬ್ಯಾಟರ್ ತನ್ನ ಜವಾಬ್ದಾರಿಯನ್ನು ಅರಿತು ಆಡಲಿಲ್ಲ. ಪರಿಣಾಮ ಇಂಗ್ಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್‌ಗೆ 166 ರನ್ ಸೇರಿಸಲು ಅಷ್ಟೇ ಸಾಧ್ಯವಾಗಿ ಸೋಲು ಕಂಡಿತು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 176
ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications