ಬುಧವಾರ, ಡಿಸೆಂಬರ್ 6ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಬುಧವಾರ, ಡಿಸೆಂಬರ್ 6ರಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಏಕದಿನ ಇತಿಹಾಸದಲ್ಲಿ ಇಂಗ್ಲೆಂಡ್ ಪರ ಅತ್ಯಂತ ದುಬಾರಿ ಸ್ಪೆಲ್ ಬೌಲಿಂಗ್ ಮಾಡಿದ್ದ ಮಾಡಿದ ಸ್ಯಾಮ್ ಕರ್ರಾನ್ ಎರಡನೇ ಪಂದ್ಯದಲ್ಲಿ ಸುಧಾರಿಸಿದರು.

ವಿಂಡೀಸ್‌ನ ಬ್ರ್ಯಾಂಡನ್ ಕಿಂಗ್, ಕೀಸಿ ಕಾರ್ಟಿ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರ ನಿರ್ಣಾಯಕ ವಿಕೆಟ್‌ಗಳನ್ನು ಪಡೆದು 7 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್‌ಗಳೊಂದಿಗೆ ಮುಗಿಸಿದ ಬಳಿಕ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದರು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಶಾಯ್ ಹೋಪ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಅರ್ಧಶತಕಗಳ ನೆರವಿನಿಂದ 39.4 ಓವರ್‌ಗಳಲ್ಲಿ ಕೇವಲ 202 ರನ್‌ಗಳಿಗೆ ಸರ್ವಪತನ ಕಂಡಿತು.
ಪ್ರತ್ಯುತ್ತರವಾಗಿ, 203 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ವಿಲ್ ಜಾಕ್ಸ್ ಅವರ ಅಮೋಘ ಅರ್ಧಶತಕದ ಸಹಾಯದಿಂದ 32.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿ 6 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
ವೆಸ್ಟ್ ಇಂಡೀಸ್ ತಂಡ ಆರಂಭಿಕ 7 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 23 ರನ್‌ಗೆ ಕುಸಿದ ನಂತರ, ಶಾಯ್ ಹೋಪ್ ಮತ್ತು ಶೆರ್ಫೇನ್ ರುದರ್‌ಫೋರ್ಡ್ ಕ್ರಮವಾಗಿ 68 ಮತ್ತು 63 ರನ್ ಗಳಿಸುವ ಮೂಲಕ ಕುಸಿದಿದ್ದ ತಂಡಕ್ಕೆ ಆಸರೆಯಾದರು.
ಈ ಜೋಡಿ ಐದನೇ ವಿಕೆಟ್‌ಗೆ 129 ರನ್‌ಗಳ ಜೊತೆಯಾಟ ನಿರ್ಮಿಸಿ ಕೆರಿಬಿಯನ್ ಇನ್ನಿಂಗ್ಸ್‌ಗೆ ಒಂದು ರೀತಿಯ ವೇಗವನ್ನು ನೀಡಿದರು. ಇವರ ಪ್ರಯತ್ನದ ಹೊರತಾಗಿಯೂ, ಆತಿಥೇಯ ವೆಸ್ಟ್ ಇಂಡೀಸ್ 39.4 ಓವರ್‌ಗಳಲ್ಲಿ 202 ರನ್ ಗಳಿಸಲಷ್ಟೇ ಶಕ್ತರಾದರು.
ರೊಮಾರಿಯೊ ಶೆಫರ್ಡ್ ಮತ್ತು ಅಲ್ಜಾರಿ ಜೋಸೆಫ್ ಕ್ರಮವಾಗಿ 19 ಮತ್ತು 14 ರನ್ ಗಳಿಸಿ ವೆಸ್ಟ್ ಇಂಡೀಸ್ ತಂಡವನ್ನು 200ರ ರನ್‌ಗಳ ಗಡಿ ದಾಟಿಸಿದರು.
ವಿಲ್ ಜ್ಯಾಕ್ಸ್, ಜೋಸ್ ಬಟ್ಲರ್ ಸ್ಫೋಟಕ ಬ್ಯಾಟಿಂಗ್
ಪವರ್‌ಪ್ಲೇನಲ್ಲಿ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಆಟವಾಡಿ 74 ರನ್ ಗಳಿಸಿದರು. ಈ ವೇಳೆ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡರು. ನಂತರದ 10 ರನ್ ಗಳಿಸುವುದರೊಳಗೆ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರನ್ನು ಕಳೆದುಕೊಂಡರು. ಆ ಬಳಿಕ ವೆಸ್ಟ್ ಇಂಡೀಸ್‌ಗೆ ಅವಕಾಶ ನೀಡಲಿಲ್ಲ.
72 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 73 ರನ್ ಬಾರಿಸಿದ ವಿಲ್ ಜಾಕ್ಸ್ ಅವರು ರುದರ್‌ಫೋರ್ಡ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಇಂಗ್ಲೆಂಡ್ 116 ರನ್ ಗಳಿಸಿದಾಗ ನಾಲ್ಕು ವಿಕೆಟ್ ಕಳೆದುಕೊಂಡಿತು. ಹ್ಯಾರಿ ಬ್ರೂಕ್ ಮತ್ತು ಜೋಸ್ ಬಟ್ಲರ್ 90 ರನ್‌ಗಳ ಅಜೇಯ ಜೊತೆಯಾಟದ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಗೆರೆಯನ್ನು ದಾಟಿಸಿದರು.
ಆರಂಭಿಕ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಹ್ಯಾರಿ ಬ್ರೂಕ್ 49 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 43 ರನ್ ಗಳಿಸಿದರು.
ನಾಯಕ ಜೋಸ್ ಬಟ್ಲರ್ 45 ಎಸೆತಗಳಲ್ಲಿ 58 ರನ್ ಗಳಿಸುವುದರೊಂದಿಗೆ ತಮ್ಮ ಫಾರ್ಮ್ ಅನ್ನು ಮರಳಿ ಕಂಡುಕೊಂಡರು. ಅವರು ಏಕದಿನ ಪಂದ್ಯಗಳಲ್ಲಿ 5000 ರನ್‌ಗಳ ಗಡಿ ದಾಟಿದ ಐದನೇ ಇಂಗ್ಲೆಂಡ್ ಆಟಗಾರರಾದರು.
ಶನಿವಾರ, ಡಿಸೆಂಬರ್ 9ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಸರಣಿಯ ನಿರ್ಣಾಯಕ ಪಂದ್ಯ ನಡೆಯಲಿದೆ.