For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಪಡೆಗೆ ಕುಲ್‌ದೀಪ್ ಆಘಾತ: ಯಶಸ್ಸಿಗೆ ಕಾರಣ ಏನ್‌ಗೊತ್ತಾ?

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ಇಂಡಿಯಾ ಪರವಾಗಿ ಅಮೋಘ ಪ್ರದರ್ಶನ ನೀಡಿದ ಬೌಲರ್ ಕುಲ್‌ದೀಪ್ ಯಾದವ್. ಕೇವಲ ಮೂರು ಓವರ್‌ಗಳ ಬೌಲಿಂಗ್ ದಾಳಿ ನಡೆಸಿದ ಕುಲ್‌ದೀಪ್ ಭರ್ಜರಿ ನಾಲ್ಕು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂ ಕೇವಲ ಆರು ರನ್‌ಗಳನ್ನು ನೀಡಿ. ಈ ಅದ್ಭುತ ಬೌಲಿಂಗ್‌ನಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಲು ಸಾಧ್ಯವಾಯಿತು.

ವೆಸ್ಟ್ ಇಂಡಿಸ್ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ ತಂಡ ಕೇವಲ 114 ರನ್‌ಗಳಿಗೆ ಎದುರಾಳಿಯನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ವಿಂಡೀಸ್ ಪಡೆ ಕೇವಲ 23 ಓವರ್‌ಗಳಲ್ಲಿ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸಿದ್ದು ಭಾರತದ ಪಾರಮ್ಯಕ್ಕೆ ಸಾಕ್ಷಿ. ಇದು ಏಕದಿನ ಮಾದರಿಯಲ್ಲಿ ತವರಿನಲ್ಲಿ ವೆಸಟ್ ಇಂಡೀಸ್ ಗಳಿಸಿದ ಎರಡನೇ ಅತಿ ಕನಿಷ್ಠ ಸ್ಕೋರ್ ಎನಿಸಿಕೊಂಡಿದೆ.

WI vs IND 1st ODI: Kuldeep Yadav explain the key of success against West Indies

ಇನ್ನು ಈ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಉತ್ತಮ ವೇಗ ಹಾಗೂ ಅದ್ಭುತ ಲಯದೊಂದಿಗೆ ಬೌಲಿಂಗ್ ದಾಳಿ ನಡೆಸಿ ಮೇಲುಗೂ ಸಾಧಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನ ಮುಕ್ತಾಯದ ಬಳಿಕ ಮಾತನಾಡಿದ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ ಸಾಧಿಸಿದ ಈ ಯಶಸ್ಸಿನ ಬಗ್ಗೆ ಮಾತನಾಡಿದ್ದು ಸಂತಸ ಹಂಚಿಕೊಂಡಿದ್ದಾರೆ. ಲೆಂತ್ ಕಳೆದುಕೊಳ್ಳದೆ ವೇಗವಾಗಿ ಬೌಲಿಂಗ್ ನಡೆಸಲು ಯಶಸ್ವಿಯಾಗಿದ್ದು ಇದಕ್ಕೆ ಕಾರಣವಾಯಿತು ಎಂದು ವಿವರಿಸಿದ್ದಾರೆ ಕುಲ್‌ದೀಪ್ ಯಾದವ್.

ಮೊದಲಿಗೆ ವೇಗದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ಮೇಲುಗೈ ಒದಗಿಸಿದರು. ಅದಾದ ಬಳಿಕ ರವೀಂದ್ರ ಜಡೇಜಾ ಹಾಗೂ ಕುಲ್‌ದೀಪ್ ಯಾದವ್ ವಿಂಡೀಸ್ ಲೈನ್‌ಅಪ್‌ಗೆ ಆಘಾತ ನೀಡಿದರು. "ಹೊಸ ಚೆಂಡಿನಲ್ಲಿ ವೇಗದ ಬೌಲರ್‌ಗಳು ನೀಡಿದ ಪ್ರದರ್ಶನ ನಿಜಕ್ಕೂ ಅದ್ಭುತವಾಗಿತ್ತು. ಮುಕೇಶ್, ಶಾರ್ದೂಲ್ ಹಾಗೂ ಹಾರ್ದಿಕ್ ಉತ್ತಮವಾದ ಆರಂಭವನ್ನು ನೀಡಿದರು. ಉಮ್ರಾನ್ ಮಲಿಕ್ ಕೂಡ ಉತ್ತಮ ವೇಗದೊಂದಿಗೆ ಕೆಲ ಓವರ್‌ಗಳ ಬೌಲಿಂಗ್ ನಡೆಸಿದರು. ಅದಾದ ಬಳಿಕ ನಾನು ಮತ್ತು ಜಡೇಜಾ ಕಣಕ್ಕಿಳಿದೆವು" ಎಂದಿದ್ದಾರೆ ಕುಲ್‌ದೀಪ್ ಯಾದವ್.

ವೆಸ್ಟ್ ಇಂಡೀಸ್ ಆಡುವ ಬಳಗ: ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಅಲಿಕ್ ಅಥಾನಾಜೆ, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಯಾನಿಕ್ ಕ್ಯಾರಿಯಾ, ಡೊಮಿನಿಕ್ ಡ್ರೇಕ್ಸ್, ಜೇಡನ್ ಸೀಲ್ಸ್, ಗುಡಾಕೇಶ್ ಮೋಟಿ
ಬೆಂಚ್: ಕೀಸಿ ಕಾರ್ಟಿ, ಅಲ್ಜಾರಿ ಜೋಸೆಫ್, ಒಶಾನೆ ಥಾಮಸ್, ಕೆವಿನ್ ಸಿಂಕ್ಲೇರ್

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್
ಬೆಂಚ್: ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್, ಜಯದೇವ್ ಉನದ್ಕತ್, ಅಕ್ಷರ್ ಪಟೇಲ್, ಋತುರಾಜ್ ಗಾಯಕ್ವಾಡ್

Story first published: Thursday, July 27, 2023, 22:55 [IST]
Other articles published on Jul 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+