ಕೊನೆಯ ದಿನ ಭಾರತವನ್ನು ಗೆಲ್ಲಿಸಲು ಆತ ಇದ್ದಾನಲ್ಲ ಎಂದ ಮೊಹಮ್ಮದ್ ಸಿರಾಜ್
ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಕೊನೆಯ ದಿನಕ್ಕೆ ಕಾಲಿಟ್ಟಿದೆ. ಕೊನೆಯ ದಿನದಾಟದಲ್ಲಿ ಭಾರತಕ್ಕೆ ಗೆಲ್ಲಲು 8 ವಿಕೆಟ್‌ಗಳ ಅಗತ್ಯವಿದ್ದರೆ ವೆಸ್ಟ್ ಇಂಡೀಸ್ 298 ರನ್‌ಗಳನ್ನು ಗಳಿಸುವ ಸವಾಲು ಪಡೆದುಕೊಂಡಿದೆ. ಮಳೆಯ ಆಟದ ಮಧ್ಯೆ ಭಾರತ ಈ ಸವಾಲನ್ನು ಹೇಗೆ ಗೆಲ್ಲಲಿದೆ ಎಂಬ ಕುತೂಹಲದ ಸಂದರ್ಭದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮೇಲೆ ಭಾರ ಹೊರಿಸಿದ್ದಾರೆ.
ನಾಲ್ಕನೇ ದಿನದಾಟದ ಬಳಿಕ ಮಾತನಾಡಿರುವ ಮೊಹಮ್ಮದ್ ಸಿರಾಜ್ ಅನುಭವಿ ಆಟಗಾರ ಆರ್ ಅಶ್ವಿನ್ ಅಂತಿಮ ದಿನದಾಟದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದು ಈ ಮೂಲಕ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ ಎಂದಿದ್ದಾರೆ. ವೆಸ್ಟ್ ಇಂಡೀಸ್ ತಂಡಕೆ ಭಾರತ ಕೊನೆಯ ಇನ್ನಿಂಗ್ಸ್‌ನಲ್ಲಿ 365 ರನ್‌ಗಳ ಗುರಿಯನ್ನು ನಿಗದಿಪಡಿಸಿದ್ದು ವಿಂಡೀಸ್ ಪಡೆ ಈಗಾಗಲೇ 76 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

ಭಾರತದ ವಿರುದ್ಧ ಸೋಮವಾರ ಗೆಲುವು ಸಾಧಿಸಬೇಕಾದರೆ 289 ರನ್‌ಗಳನ್ನು ಕೊನೆಯ ದಿನದಾಟದಲ್ಲಿ ಗಳಿಸುವ ಸವಾಲು ಹೊಂದಿದೆ. ಸದ್ಯ ಪಿಚ್ ಸ್ಪಿನ್ನರ್‌ಗಳಿಗೆ ಉತ್ತಮವಾಗಿ ನೆರವು ನೀಡುತ್ತಿರುವ ಕಾರಣ ವಿಂಡೀಸ್ ದಾಂಡಿಗರು ಕೊನೆಯ ದಿನ ಭಾರೀ ಸವಾಲನ್ನು ಎದುರಿಸುವುದು ನಿಶ್ಚಿತ. ಇದೇ ಕಾರಣಕ್ಕೆ ಸಿರಾಜ್ ಅನುಭವಿ ಆಟಗಾರ ಆರ್ ಅಶ್ವಿನ್ ವಿಂಡೀಸ್ ತಂಡಕ್ಕೆ ಕಂಟಕವಾಗುವ ಸೂಚನೆ ನೀಡಿದ್ದಾರೆ.
"ಪಿಚ್ ಈಗ ವರ್ತಿಸುತ್ತಿರುವ ರೀತಿ ನೋಡಿದರೆ ಚೆಂಡು ತಿರುವು ಪಡೆದುಕೊಳ್ಳುತ್ತಿರುವ ಕಾರಣ ಅಶ್ವಿನ್ ಅವರು ವೆಸ್ಟ ಇಂಡೀಸ್ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸುವ ವಿಶ್ವಾಸವಿದೆ" ಎಂದಿದ್ದಾರೆ ಮೊಹಮ್ಮದ್ ಸಿರಾಜ್. ವಿಂಡೀಸ್ ತಂಡದ ನಾಯಕ ಕ್ರೆಗ್ ಬ್ರಾಥ್‌ವೇಟ್ ಹಾಗೂ ಕಿರ್ಕ್ ಮಕೆಂಜಿ ಈಗಾಗಲೇ ವಿಕೆಟ್ ಕಳೆದುಕೊಂಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸಿರಾಜ್ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿಯಾಗಿ ಆಡಿ ಎದುರಾಳಿಗೆ ದೊಡ್ಡ ಮೊತ್ತದ ಗುರಿಯನ್ನು ನೀಡಲು ನಿರ್ಧರಿಸಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಇಶಾನ್ ಕಿಶನ್ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸಿದ್ದು ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿದರು. 34 ಎಸೆತಗಳಲ್ಲಿ 52 ರನ್ ಬಾರಿಸಿ ಚೊಚ್ಚಲ ಅ್ಧ ಶತಕ ಸಿಡಿಸಿದ್ದಾರೆ.
"ಹೌದು ಇಶಾನ್ ಆಕ್ರಮಣಕಾರಿ ಆಟಗಾರ. ರಿಷಭ್ ಪಂತ್ ಆಡುತ್ತಿಲ್ಲವಾದ ಕಾರಣ ವಿಕೆಟ್ ಕೀಪರ್ ಆಗಿ ಸಂಪೂರ್ಣವಾಗಿ ಅಲ್ಲದಿದ್ದರೂ ಒಂದು ಹಂತದಲ್ಲಿ ಅವರ ಸ್ಥಾನವನ್ನು ತುಂಬಲು ಯಶಸ್ವಿಯಾಗಿದ್ದಾರೆ. ಆತ ಚೆಂಡನ್ನು ಬಲವಾಗಿ ಬಾರಿಸುವ ಸಾಮರ್ಥ್ಯ ಹೊಂದಿದ್ದು ಮೈದಾನದ ಸುತ್ತಲೂ ಬಾರಿಸುವ ಕೌಶಲ್ಯವನ್ನು ಕೂಡ ಹೊಂದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆಯ ಕಾರಣ ಸಾಕಷ್ಟು ರನ್‌ಗಳನ್ನು ಹೊಂದಿದ್ದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸುವುದು ನಮ್ಮ ಗುರಿಯಾಗಿತ್ತು. ನಂತರ ಡಿಕ್ಲೇರ್ ಮಾಡಿ ವೆಸ್ಟ್ ಇಂಡೀಸ್ ಆಲೌಟ್ ಮಾಡಲು ಹೆಚ್ಚಿನ ಓವರ್‌ಗಳು ದೊರೆಯುತ್ತದೆ ಎಂಬುದು ನಮ್ಮಲೆಕ್ಕಾಚಾರವಾಗಿತ್ತು" ಎಂದಿದ್ದಾರೆ ಸಿರಾಜ್.
ಇನ್ನು ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬೌಲಿಂಗ್ ದಾಳಿ ನಡೆಸಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡ 255 ರನ್‌ಗಳಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಗಿದ್ದು ಭಾರತದ ಮುನ್ನಡೆಗೆ ಕಾರಣವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications