For Quick Alerts
ALLOW NOTIFICATIONS  
For Daily Alerts
 

3ನೇ ಏಕದಿನ: ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾಕ್ಕೆ 6 ವಿಕೆಟ್ ಗೆಲುವು

Wi vs Ind, 3rd Odi Live: West Indies Opt to Bat First

ಪೋರ್ಟ್‌ ಆಫ್‌ ಸ್ಪೇನ್‌, ಆಗಸ್ಟ್‌ 14: ಟ್ರಿನಿಡಾಡ್‌ನ ಪೋರ್ಟ್ ಆಫ್‌ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಬುಧವಾರ (ಆಗಸ್ಟ್ 14) ನಡೆದ ಭಾರತ vs ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 6 ವಿಕೆಟ್ ಗೆಲುವು (ಡಕ್ವರ್ಥ್ ಲೂಯೀಸ್ ನಿಯಮದ ಪ್ರಕಾರ) ದಾಖಲಿಸಿದೆ. ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದ ಕ್ರಿಸ್‌ ಗೇಲ್ ಸ್ಫೋಟಕ ಅರ್ಧ ಶತಕ ಸಿಡಿಸಿದರಾದರೂ ವಿಂಡೀಸ್‌ಗೆ ಗೆಲುವು ಒಲಿಯಲಿಲ್ಲ.

ಮಳೆ ಸುರಿದಿದ್ದರಿಂದ ಪಂದ್ಯವನ್ನು 35 ಓವರ್‌ ಗಳಿಗೆ ಕಡಿತ ಗೊಳಿಸಲಾಯ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್, ಕ್ರಿಸ್‌ ಗೇಲ್ 72 (41 ಎಸೆತ), ಎವಿನ್ ಲೆವಿಸ್ 43 (29 ಎಸೆತ) ರನ್‌ನೊಂದಿಗೆ 35 ಓವರ್‌ಗೆ 7 ವಿಕೆಟ್ ಕಳೆದು 240 ರನ್ ಬಾರಿಸಿತು.

ಬೃಹತ್‌ ಮೊತ್ತ ದಾಖಲಿಸುವುದು ಕೆರಿಬಿಯನ್‌ ಆಟಗಾರರ ಲೆಕ್ಕಾಚಾರವಾಗಿತ್ತು. ಇದಕ್ಕೆ ಪೂರಕವಾಗಿ ಮಳೆಗು ಮೊದಲೇ ಗುಡುಗಲು ಆರಂಭಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್‌ ಗೇಲ್‌ ಮತ್ತು ಎವಿನ್‌ ಲೂಯಿಸ್‌ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.

ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಎವಿನ್‌ ಲೂಯಿಸ್‌, 29 ಎಸೆತಗಳಲ್ಲಿ 5 ಫೋರ್‌ ಮತ್ತು 3 ಸಿಕ್ಸರ್‌ ಒಳಗೊಂಡ 43 ರನ್‌ ಚೆಚ್ಚಿ ಔಟಾದರೆ, ತಮ್ಮ ವೃತ್ತಿ ಬದುಕಿನ ಅಂತಿಮ ಏಕದಿನ ಪಂದ್ಯವನ್ನಾಡಿದ ಕ್ರಿಸ್‌ ಗೇಲ್‌ 41 ಎಸೆತಗಳಲ್ಲಿ 175.60ರ ಸ್ಟ್ರೈಕ್‌ರೇಟ್‌ನೊಂದಿಗೆ 8 ಫೋರ್‌ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡ 72 ರನ್‌ಗಳನ್ನು ಬಾರಿಸಿ ಪೆವಿಲಿಯನ್‌ ಸೇರಿದರು.

ಮಳೆ ಕಾರಣ ಪಂದ್ಯ ಸ್ಥಗಿತಗೊಳ್ಳುವುದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ತಂಡ 2 ವಿಕೆಟ್‌ ನಷ್ಟದಲ್ಲಿ 158 ರನ್‌ಗಳನ್ನು (22 ಓವರ್‌ಗಳಲ್ಲಿ) ದಾಖಲಿಸಿತ್ತು.

ಭಾರತಕ್ಕೆ 35 ಓವರ್‌ಗೆ 255 ರನ್ ಗುರಿ ನೀಡಲಾಗಿತ್ತು. ಗುರಿ ಬೆಂಬತ್ತಿದ ಭಾರತ, ವಿರಾಟ್ ಕೊಹ್ಲಿ ಅಜೇಯ 114 (99 ಎಸೆತ), ಶ್ರೇಯಸ್ ಐಯ್ಯರ್ 65 ರನ್‌ನೊಂದಿಗೆ 32.3 ಓವರ್‌ಗೆ 4 ವಿಕೆಟ್ ಕಳೆದು 256 ರನ್ ಮಾಡಿತು. ಇದರೊಂದಿಗೆ 2-0ಯಿಂದ ಏಕದಿನ ಸರಣಿ ಭಾರತದ ವಶವಾಗಿದೆ. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳು ಕೊಹ್ಲಿಗೊಲಿಯಿತು.

ತಂಡಗಳ ವಿವರ
ವೆಸ್ಟ್‌ ಇಂಡೀಸ್‌: ಕ್ರಿಸ್‌ ಗೇಲ್‌, ಎವಿನ್‌ ಲೂಯಿಸ್‌, ಶೇಯ್‌ ಹೋಪ್‌ (ವಿಕೆಟ್‌ಕೀಪರ್‌), ಶಿಮ್ರಾನ್‌ ಹೆಟ್ಮಾಯೆರ್‌, ನಿಕೋಲಸ್‌ ಪೂರನ್‌, ರಾಸ್ಟನ್‌ ಚೇಸ್‌, ಜೇಸನ್‌ ಹೋಲ್ಡರ್‌ (ನಾಯಕ), ಕಾರ್ಲೋಸ್‌ ಬ್ರಾತ್‌ವೇಟ್‌, ಫೇಬಿಯನ್‌ ಆಲೆನ್‌, ಕೆಮಾರ್‌ ರೋಚ್‌, ಕೀಮೊ ಪೌಲ್‌.

ಭಾರತ: ಶಿಖರ್‌ ಧವನ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಕೇದಾರ್‌ ಜಾಧವ್‌, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಯುಜ್ವೇಂದ್ರ ಚಹಲ್‌, ಖಲೀಲ್‌ ಅಹ್ಮದ್‌.

Story first published: Thursday, August 15, 2019, 12:42 [IST]
Other articles published on Aug 15, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+