ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಹೀಗಾಗಿ ಭರ್ಜರಿ 200 ರನ್‌ಗಳ ಅಂತರದಿಂದ ಟೀಮ್ ಇಂಡಿಯಾ ಪಂದ್ಯವನ್ನು ಗೆದ್ದಿದ್ದು ಸರಣಿ ವಶಕ್ಕೆ ಪಡೆದುಕೊಂಡಿದೆ. ಇನ್ನು ಈ ಸರಣಿಯಲ್ಲಿ ಕಳಗುಂದಿಂತೆ ಕಂಡುಬಂದಿದ್ದ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಬೃಜತ್ ಮೊತ್ತಕ್ಕೆ ಕಾರಣವಾದರು. ಈ ಅದ್ಭುತ ಇನ್ನಿಂಗ್ಸ್ ಬಳಿಕ ಮಾತನಾಡಿದ ಹಾರ್ದಿಕ್ ಬ್ಯಾಟಿಂಗ್‌ನಲ್ಲಿ ತನ್ನ ಯಶಸ್ಸಿಗೆ ವಿರಾಟ್ ಕೊಹ್ಲಿ ನೀಡಿದ ಸಲಹೆ ಕಾರಣ ಎಂದಿದ್ದಾರೆ.
ಅಂದಹಾಗೆ ಟೀಮ್ ಇಂಡಿಯಾ ವೆಸ್‌ಟ ಇಂಡಿಸ್ ವಿರುದ್ಧದ ಅಂತಿಮ ಹಾಗೂ ನಿರಣಾಯಕ ಪಂದ್ಯದಲ್ಲಿ ಅಂಘಟಿತ ಪ್ರದರ್ಶಣ ನೀಡಿತ್ತು ಎಂಬುದು ಗಮನಾರ್ಹ ಅಂಶ. ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್, ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸಿದರೆ ಬೌಲಿಂಗ್‌ನಲ್ಲಿ ಮುಕೇಶ್ ಕುಮಾರ್ ಹಾಗೂ ಶಾರ್ದೂಲ್ ಠಾಕೂರ್ ಅಬ್ಬರಿಸಿದ್ದಾರೆ. ಹೀಗಾಗಿಯೇ ಭಾರತ ಭಾರೀ ಅಂತರದ ಗೆಲುವು ಸಾಧಿಸಲು ಸಾಧ್ಯವಾಯಿತು.

ಈ ಗೆಲುವಿನ ಬಳಿಕ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಈ ರೀತಯ ಪಂದ್ಯಗಳು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚುಗೊಳಿಸುತ್ತದೆ ಎಂದಿದ್ದಾರೆ. "ಇಂಥಾ ಪಂದ್ಯಗಳನ್ನು ನಾನು ಆನಂದಿಸುತ್ತೇನೆ. ಇಲ್ಲಿ ಸಾಕಷ್ಟು ಪೈಪೋಟಿಯಿತ್ತು. ಇಲ್ಲಿ ಸೋಲು ಅನುಭವಿಸಿದ್ದರೆ ಬಹಳ ಬೇಸರವಾಗುತ್ತಿತ್ತು. ಹಾಗಾಗಿ ಇಂದು ಆಡಿದ ರೀತಿ ನಮ್ಮ ಹುಡುಗರು ನೀಡಿದ ಪ್ರದರ್ಶನ, ತಮ್ಮಲ್ಲಿನ ಸಾಮರ್ಥ್ಯವನ್ನು ವ್ಯಕ್ತಪಡಿಸಿದ ರೀತಿ ಖುಷಿ ನೀಡುತ್ತದೆ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ".
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಘೂ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಆಡದೆ ವಿಶ್ರಾಂತಿ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೋಚ್ ಆಗಿ ದ್ರಾವಿಡ್ ಅವರು ಕೆಲ ಆಟಗಾರರ ಆಯ್ಕೆಯನ್ನು ಪರೀಕ್ಷಿಸಬೇಕಲಾಗಿತ್ತು ಎಂದಿದ್ದಾರೆ. "ವಿರಾಟ್ ಹಾಗೂ ರೋಹಿತ್ ನಮ್ಮ ತಂಡದ ಪ್ರಮುಖ ಭಾಗ. ಋತು, ಅಕ್ಷರ್ ಪಟೇಲ್ ಅವರಂತಾ ಯುವ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ದೊರೆಯುವುದು ಬಹಳ ಮುಖ್ಯವಾಗಿತ್ತು. ಸುದೀರ್ಘ ಕಾಲದಿಮದ ರೋಹಿತ್ ಹಾಗೂ ಕೊಹ್ಲಿ ಆಡುತ್ತಿರುವ ಕಾರಣದಿಂದಾಗಿ ಈ ರೀತಿಯ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದು ತಿಳಿಸಿರುತ್ತದೆ ಹಾಗಾಗಿ ಯುವ ಆಟಗಾರರಿಗೆ ಅಂತಾ ಅವಕಾಶ ನೀಡುವುದು ಮುಖ್ಯ" ಎಂದಿದ್ದಾರೆ ಹಾರ್ದಿಕ್.
ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ನಡೆಸಿದ ಸಂವಾದ ತನ್ನ ಬ್ಯಾಟಿಂಗ್‌ಗೆ ಬಹಳ ಸಹಕಾರಿಯಾಯಿತು ಎಂದು ಹೇಳಿಕೊಂಡಿದ್ದಾರೆ ಹಾರ್ದಿಕ್ ಪಾಂಡ್ಯ. "ಒಂದೆರಡು ದಿನಗಳ ಹಿಂದೆ ವಿರಾಟ್ ಜೊತೆಗೆ ಉತ್ತಮವಾದ ಸಂವಾದ ನಡೆಸಿದೆ. ಆತ ನನ್ನನ್ನು ಬಹಳ ವರ್ಷಗಳಿಂದ ನೋಡುತ್ತಿರುವ ಕಾರಣ ಕೆಲ ಅಮೂಲ್ಯ ಸಲಹೆಗಳನ್ನು ನೀಡಿದರು. ಆತ ನೀಡಿದ ಕೆಲ ವಿಚಾರಗಳು ನನಗೆ ಬಹಳ ಪರಿಣಾಮಕಾರಿಯಾಗಿದೆ. ನಾನು 7-8 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದು ಆವರು ನನ್ನನ್ನು ಆರಂಭಿಕ ದಿನದಿಂದಲೂ ನೊಡುತ್ತಿದ್ದಾರೆ. ನನಗೆ ನಿಜಕ್ಕೂ ಸಹಾಯಕವಾಗುವ ವಿಚಾರಗಳ ಬಗ್ಗೆ ಅವರು ಬೊಟ್ಟು ಮಾಡಿದರು. ಅವರಿಗೆ ನಾನು ಬಹಳ ಧನ್ಯವಾದ ಹೇಳುತ್ತಿದ್ದೇನೆ. ಅಂಥಾ ಅನುಭವವನ್ನು ಹಂಚಿಕೊಂಡಿರುವುದಕ್ಕೆ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 52 ಎಸೆತಗಳನ್ನು ಎದುರಿಸಿದ ಪಾಂಡ್ಯ 70 ರನ್‌ಗಳನ್ನು ಬಾರಿಸಿದ್ದು ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ಸಿಡಿಸಿದ್ದಾರೆ.