For Quick Alerts
ALLOW NOTIFICATIONS  
For Daily Alerts
 

ಮೊದಲ ಟಿ20: ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ನ್ಯೂಜಿಲೆಂಡ್

WI vs NZ 1st t20: new zealand won the match against west indies

ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ತಂಡಗಳು ಇಂದು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮುಖಾಮುಖಿಯಾದವು. ರೋಚಕವಾಗಿ ನಡೆದ ಈ ಕಾದಾಟದಲ್ಲಿ ನ್ಯೂಜಿಲೆಂಡ್ ತಂಡ ಗೆದ್ದುಬೀಗುವಲಲಿ ಯಶಸ್ವಿಯಾಗಿದೆ. ವಿಂಡಿಸ್ ತಂಡದ ಪರವಾಗಿ ಪೊಲಾರ್ಡ್ ಸಿಡಿಸಿದ ಮಿಂಚಿನ ಸರ್ಧ ಶತಕ ವ್ಯರ್ಥವಾಗಿದೆ.

ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಆಕ್ಲಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಉತ್ತಮ ಆರಂಭದ ಬಳಿಕ ಕುಸಿತವನ್ನು ಕಂಡ ವಿಂಡೀಸ್‌ಗೆ ನಾಯಕ ಕಿರಾನ್ ಪೊಲಾರ್ಡ್ ಅದ್ಭುತ ಪ್ರದರ್ಶನದ ಮೂಲಕ ತಂಡವನ್ನು ಮೇಲೆತ್ತಿದರು. 37 ಎಸೆತಗಳಲ್ಲಿ 75 ರನ್ ಗಳಿಸಿದ ಪೊಲಾರ್ಡ್ ವೆಸ್ಟ್ ಇಂಡೀಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

16 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದ್ದ ವೇಳೆ ಮಳೆ ಸುರಿಯಲು ಆರಂಭಿಸಿತು. ಹೀಗಾಗಿ ಕೆಲ ಕಾಲ ಪಂದ್ಯ ಸ್ಥಗಿತವಾಗಿತ್ತು. ಮತ್ತೆ ಪಂದ್ಯ ಪ್ರಾರಂಭವಾದಾಗ 16 ಓವರ್‌ಗೇ ಪಂದ್ಯವನ್ನು ಪರಿಷ್ಕರಿಸಲಾಯಿತು. ನ್ಯೂಜಿಲೆಂಡ್‌ಗೆ ಡಕ್ವರ್ತ್ ಲೂಯೀಸ್ ನಿಯಮದ ಅನ್ವಯ 16 ಓವರ್‌ಗಳಲ್ಲಿ 179 ರನ್‌ಗಳ ಗುರಿಯನ್ನು ನೀಡಲಾಯಿತು.

ಈ ಮೊತ್ತವನ್ನು ಬೆನ್ನತ್ತಿದ ಕೀವಿಸ್ ಪಡೆಗೆ ಆರಂಭಿಕ ಆಘಾತ ಉಂಟಾಯಿತಾದರೂ ಎದುರಾಳಿಯ ದೊಡ್ಡ ಮೊತ್ತವನ್ನು ಭರ್ಜರಿಯಾಗಿ ಬೆನ್ನತ್ತಲು ಆರಂಭಿಸಿತ್ತು. ಡೆವಾಮ್ ಕಾನ್ವೆ ,ಜೇಮ್ಸ್ ನೀಶಮ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅತ್ಯುತ್ತಮ ಪ್ರದರ್ಶನ ನೀಡಿದರು.

ಈ ಮೂಲಕ ನ್ಯೂಜಿಲೆಂಡ್ ತಂಡ ಎದುರಾಳಿ ವೆಸ್ಟ್ ಇಂಡೀಸ್ ನೀಡಿದ ಬೃಹತ್ ಗುರಿಯನ್ನು 5 ವಿಕೆಟ್ ಕಳೆದುಕೊಂಡು ತಲುಪುವಲ್ಲಿ ಯಶಸ್ವಿಯಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸದ್ಯ ಕೀವಿಸ್ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

Story first published: Friday, November 27, 2020, 17:46 [IST]
Other articles published on Nov 27, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+