Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WI vs UAE 3rd ODI: ಚೊಚ್ಚಲ ಪಂದ್ಯದಲ್ಲೇ ಕೃನಾಲ್ ಪಾಂಡ್ಯ ದಾಖಲೆ ಸರಿಗಟ್ಟಿದ ವಿಂಡೀಸ್‌ನ ಯುವ ಬ್ಯಾಟರ್

ದುಬೈನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದು ವೆಸ್ಟ್ ಇಂಡೀಸ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು.

ವೆಸ್ಟ್ ಇಂಡೀಸ್ ತಂಡದ ಗೆಲುವಿನಲ್ಲಿ ಕೆವಿನ್ ಸಿಂಕ್ಲೇರ್ ಮತ್ತು ಅಲಿಕ್ ಅಥಾನಾಜೆ ಈ ಇಬ್ಬರು ಪ್ರಮುಖ ಪಾತ್ರ ವಹಿಸಿದರು. ಕೆವಿನ್ ಸಿಂಕ್ಲೇರ್ 7.1 ಓವರ್‌ಗಳಲ್ಲಿ 24 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದರೆ, ಬ್ಯಾಟಿಂಗ್‌ನಲ್ಲಿ ಅಲಿಕ್ ಅಥಾನಾಜೆ 45 ಎಸೆತಗಳಲ್ಲಿ 65 ರನ್ ಗಳಿಸಿ ತಮ್ಮ ತಂಡ 185 ರನ್ ಗುರಿಯನ್ನು ಸುಲಭವಾಗಿ ಬೆನ್ನಟ್ಟಲು ನೆರವಾದರು.

WI vs UAE 3rd ODI

65 ರನ್‌ಗಳ ಹಾದಿಯಲ್ಲಿ ಅಲಿಕ್ ಅಥಾನಾಜೆ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಜಂಟಿ ವೇಗದ ಅರ್ಧಶತಕ ಬಾರಿಸಿದರು. ಅರ್ಧಶತಕವನ್ನು ಕೇವಲ 24 ಎಸೆತಗಳಲ್ಲಿ ಪೂರ್ಣಗೊಳಿಸಿದರು.

ಭಾರತದ ಕೃನಾಲ್ ಪಾಂಡ್ಯ 2021ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ 24 ಎಸೆತಗಳಲ್ಲಿಯೇ ಅರ್ಧಶತಕವನ್ನು ಸಿಡಿಸಿದ್ದರು. ಕೃನಾಲ್ ಮತ್ತು ಅಥಾನಾಜೆ ಇಬ್ಬರೂ ಈಗ ಜಂಟಿ ದಾಖಲೆಯನ್ನು ಹೊಂದಿದ್ದಾರೆ.

ಮಾರಕ ಬೌಲಿಂಗ್ ಮಾಡಿದ ಕೆವಿನ್ ಸಿಂಕ್ಲೇರ್

ವೆಸ್ಟ್ ಇಂಡೀಸ್ ತಂಡಕ್ಕೆ ಪುನರಾಗಮನ ಮಾಡಿದ ಸ್ಪಿನ್ನರ್ ಕೆವಿನ್ ಸಿಂಕ್ಲೇರ್ ನಾಲ್ಕು ವಿಕೆಟ್‌ಗಳೊಂದಿಗೆ ಯುಎಇ ತಂಡದ ಬ್ಯಾಟಿಂಗ್ ಲೈನ್‌ಅಪ್‌ ಮುರಿದರು. ಈ ಆಫ್ ಬ್ರೇಕ್ ಬೌಲರ್ 70 ರನ್ ಗಳಿಸಿ ಯುಎಇ ಪರ ಗರಿಷ್ಠ ಸ್ಕೋರರ್ ಆಗಿದ್ದ ವೃತ್ಯ ಅರವಿಂದ್ ಅವರ ವಿಕೆಟ್ ಪಡೆದರು.

WI vs UAE 3rd ODI

ಆ ವಿಕೆಟ್ ವೆಸ್ಟ್ ಇಂಡೀಸ್‌ಗೆ ನಿರ್ಣಾಯಕವಾಗಿತ್ತು. ವೃತ್ಯ ಅರವಿಂದ್ ಅವರು ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಆಡುತ್ತಿದ್ದರು ಮತ್ತು ಯುಎಇ ತಂಡದ ಮೊತ್ತ ಹೆಚ್ಚಿಸುತ್ತಿದ್ದರು. ಅವರ ವಿಕೆಟ್ ಬಿದ್ದ ನಂತರ ಯುಎಇ ಅಂತಿಮವಾಗಿ 184 ರನ್‌ಗಳಿಗೆ ಆಲೌಟ್ ಆಯಿತು.

ಬ್ಯಾಟಿಂಗ್‌ನಲ್ಲಿ ಸಿಡಿದ ಅಲಿಕ್ ಅಥಾನಾಜೆ

ಅಲಿಕ್ ಅಥಾನಾಜೆ ಕೇವಲ 45 ಎಸೆತಗಳಲ್ಲಿ 65 ರನ್‌ ಬಾರಿಸಿ ಬ್ಯಾಟ್‌ನೊಂದಿಗೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳು ಒಳಗೊಂಡಿದ್ದವು. ಅಲಿಕ್ ಅಥಾನಾಜೆ ಅವರು ಲೆಜೆಂಡ್ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರ ಅಪ್ಪಟ ಅಭಿಮಾನಿ. ಈ ಎಡಗೈ ಯುವ ಬ್ಯಾಟರ್‌ನ ಸೊಗಸಾದ ಹೊಡೆತಗಳು ವೆಸ್ಟ್ ಇಂಡಿಯನ್ ಮಾಜಿ ಕ್ರಿಕೆಟಿಗನನ್ನು ನೆನಪಿಸುತ್ತಿದ್ದವು.

ಅಲಿಕ್ ಅಥಾನಾಜೆ ನಿರ್ಗಮಿಸಿದ ನಂತರ ಮಧ್ಯಮ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ರೋಸ್ಟನ್ ಚೇಸ್ (ಅಜೇಯ 27 ರನ್) ಮತ್ತು ಕೀಮೊ ಪೌಲ್ (ಅಜೇಯ 2) ಹೆಚ್ಚಿನ ಓವರ್‌ಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.

ವೆಸ್ಟ್ ಇಂಡೀಸ್‌ನ ಈ ಇಬ್ಬರು ಅತ್ಯುತ್ತಮ ಪ್ರದರ್ಶನಕಾರರು ಜಿಂಬಾಬ್ವೆಯಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಗಳ ತಂಡದಲ್ಲಿ ಅವರನ್ನು ಆಯ್ಕೆ ಮಾಡದಿರುವುದು ಸಾಕಷ್ಟು ವಿಪರ್ಯಾಸವಾಗಿದೆ.

2016ರ ಆವೃತ್ತಿಯ ಫೈನಲ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ವೆಸ್ಟ್ ಇಂಡೀಸ್‌ ತಂಡಕ್ಕೆ 2ನೇ ಟಿ20 ವಿಶ್ವಕಪ್ ಗೆದ್ದುಕೊಟ್ಟ ಕಾರ್ಲೋಸ್ ಬ್ರಾಥ್‌ವೈಟ್ ಅವರು ಅಲಿಕ್ ಅಥಾನಾಜೆ "ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಭವಿಷ್ಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Story first published: Saturday, June 10, 2023, 15:49 [IST]
Other articles published on Jun 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+