ಭಾರತ vs ಇಂಗ್ಲೆಂಡ್: ಟೀಕಾಕಾರರ ಬಾಯಿ ಮುಚ್ಚಿಸಲು ಕೊಹ್ಲಿ ಮತ್ತು ಪೂಜಾರ ಈ ಒಂದು ಕೆಲಸ ಮಾಡಬೇಕಿದೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯ ಮಳೆ ಕಾರಣದಿಂದಾಗಿ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು, ನಂತರ ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಗೆಲುವನ್ನು ಸಾಧಿಸುವುದರ ಮೂಲಕ ಹೊಸ ಮೈಲಿಗಲ್ಲನ್ನು ನಿರ್ಮಿಸಿತು.
ಹೀಗೆ ಮೊದಲೆರಡು ಪಂದ್ಯಗಳು ಮುಗಿದ ನಂತರ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 78 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಕಳಪೆ ಪ್ರದರ್ಶನವನ್ನು ನೀಡಿತ್ತು. ಹೀಗೆ ಮೂರನೇ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಮಂಕಾಗಿದ್ದ ಟೀಮ್ ಇಂಡಿಯಾ ಆಟಗಾರರು ಇದೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವುದರ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಅದರಲ್ಲಿಯೂ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಕುರಿತು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ಮುಕ್ತಾಯವಾದ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಕೇವಲ 1 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 7 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ಹೀಗೆ ಸತತವಾಗಿ ಕಳಪೆ ಪ್ರದರ್ಶನವನ್ನು ನೀಡಿದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ ಭಾರತದ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಹಾಗೂ ಚೇತೇಶ್ವರ ಪೂಜಾರರನ್ನು ತಂಡದಿಂದ ಹೊರ ಹಾಕಿ ಎಂದು ಟೀಕಿಸತೊಡಗಿದರು.
ಹೀಗೆ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ ಮುಗಿದ ಬಳಿಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ವಿರುದ್ಧ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾದವು. ನಂತರ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟವನ್ನು ಆಡುವುದರ ಮೂಲಕ ಹಿಂದಿನ ಪಂದ್ಯಗಳಲ್ಲಿ ಮಾಡಿದ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ಮೂರನೆ ದಿನದಾಟದಂತ್ಯಕ್ಕೆ ಚೇತೇಶ್ವರ್ ಪೂಜಾರ ಅಜೇಯ 91 ರನ್ ಮತ್ತು ವಿರಾಟ್ ಕೊಹ್ಲಿ ಅಜೇಯ 45 ರನ್ ಬಾರಿಸಿ ನಾಲ್ಕನೇ ದಿನದಾಟವನ್ನು ಆರಂಭಿಸಲು ಕಾಯುತ್ತಿದ್ದಾರೆ.
ಕಳೆದ ಕೆಲ ಪಂದ್ಯಗಳಿಂದ ಎರಡಂಕಿ ಮುಟ್ಟುವ ಮುನ್ನವೇ ಔಟ್ ಆಗುವುದರ ಮೂಲಕ ಪೆವಿಲಿಯನ್ ಸೇರಿಕೊಳ್ಳುತ್ತಿದ್ದ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಆಟವನ್ನಾಡಿದ್ದು ನಾಲ್ಕನೇ ದಿನವೂ ಸಹ ಇದೇ ರೀತಿಯ ಆಟವನ್ನು ಮುಂದುವರಿಸಿದರೆ ಹಲವಾರು ವರ್ಷಗಳಿಂದ ತಮ್ಮ ಕುರಿತು ಟೀಕಾಕಾರರು ವ್ಯಕ್ತಪಡಿಸುತ್ತಿರುವ ಎಲ್ಲಾ ಟೀಕೆಗಳಿಗೆ ಒಂದೇ ದಿನದಲ್ಲಿ ಉತ್ತರ ನೀಡಬಹುದಾಗಿದೆ. ಅಷ್ಟಕ್ಕೂ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ನಾಲ್ಕನೇ ದಿನದಾಟದಂದು ಟೀಕಾಕಾರರ ದೊಡ್ಡ ಟೀಕೆಗಳಿಗೆ ಪ್ರತ್ಯುತ್ತರವನ್ನು ನೀಡಿ ಬಾಯಿ ಮುಚ್ಚಿಸಲು ಮಾಡಬಹುದಾದ ಆ ನಿರ್ದಿಷ್ಟ ಕೆಲಸ ಮುಂದೆ ಇದೆ ಓದಿ..

968 ದಿನಗಳ ನಂತರ ಶತಕ ಬಾರಿಸಲಿದ್ದಾರಾ ಪೂಜಾರ?
ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ಮೂರನೆ ದಿನದಾಟದಂತ್ಯಕ್ಕೆ 180 ಎಸೆತಗಳಲ್ಲಿ ಅಜೇಯ 91 ರನ್ ಕಲೆಹಾಕಿರುವ ಚೇತೇಶ್ವರ್ ಪೂಜಾರ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಶತಕ ಬಾರಿಸುವ ಹೊಸ್ತಿಲಲ್ಲಿದ್ದಾರೆ. ಚೇತೇಶ್ವರ್ ಪೂಜಾರ ತಮ್ಮ ಟೆಸ್ಟ್ ಶತಕವನ್ನು ಪೂರೈಸಲು 9 ರನ್‌ಗಳ ಅಗತ್ಯತೆಯಿದ್ದು ನಾಲ್ಕನೇ ದಿನದಾಟದಂದು ಶತಕ ಬಾರಿಸಲಿದ್ದಾರಾ ಎಂಬ ಕುತೂಹಲ ಇದೀಗ ಎಲ್ಲರಲ್ಲಿಯೂ ಮೂಡಿದೆ. ಪೂಜಾರ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿ ಇಂದಿಗೆ ಬರೋಬ್ಬರಿ 968 ದಿನಗಳು ಕಳೆದಿದ್ದು, ಇಂದು ಚೇತೇಶ್ವರ್ ಪೂಜಾರ ಶತಕ ಸಿಡಿಸಿದರೆ 968 ದಿನಗಳಿಂದ ಶತಕವಿಲ್ಲದ ಕಾರಣಕ್ಕೆ ತಾವು ಎದುರಿಸುತ್ತಿರುವ ದೊಡ್ಡ ಟೀಕೆಗಳಿಗೆ ಉತ್ತರ ನೀಡಿದಂತಾಗುತ್ತದೆ ಮತ್ತು ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲೂ ಸಹ ನೆರವಾಗಲಿದೆ.

ಕೊಹ್ಲಿ ಕೊನೆಯದಾಗಿ ಶತಕ ಬಾರಿಸಿ 645 ದಿನಗಳೇ ಕಳೆದಿವೆ
ಒಂದೆಡೆ ಚೇತೇಶ್ವರ್ ಪೂಜಾರ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿ 968 ದಿನಗಳು ಕಳೆದಿದ್ದರೆ ಇತ್ತ ರನ್ ಮೆಷಿನ್ ಭಾರತದ ನಾಯಕ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಸಿಡಿಸಿ ಇಂದಿಗೆ 645 ದಿನಗಳು ಕಳೆದಿವೆ. ಕೊಹ್ಲಿ ತಮ್ಮ ಖಾತೆಯಲ್ಲಿ ಈಗಾಗಲೇ 70 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದು 71 ನೇ ಅಂತಾರಾಷ್ಟ್ರೀಯ ಶತಕವನ್ನು ವಿರಾಟ್ ಕೊಹ್ಲಿ ಯಾವಾಗ ಬಾರಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ತಮ್ಮ 71 ನೇ ಶತಕವನ್ನು ಯಾವಾಗ ಬಾರಿಸಲಿದ್ದಾರೆ ಎಂಬುದರ ಕುರಿತು ಸಾಕಷ್ಟು ಟ್ರೋಲ್ ಕೂಡ ನಡೆದಿತ್ತು. ಈ ಹಿಂದೆ ಶತಕದ ಮೇಲೆ ಶತಕ ಬಾರಿಸುತ್ತಿದ್ದ ವಿರಾಟ್ ಕೊಹ್ಲಿ ತಮ್ಮ 71 ನೇ ಶತಕವನ್ನು ಬಾರಿಸಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ಶತಕವನ್ನೇನಾದರೂ ಬಾರಿಸಿದರೆ ತಮ್ಮ ವಿರುದ್ಧ ಎದುರಾಗಿರುವ ಎಲ್ಲಾ ಟೀಕೆಗಳಿಗೂ ಬ್ಯಾಟ್ ಮೂಲಕವೇ ಉತ್ತರ ನೀಡಿದಂತಾಗುತ್ತದೆ. ಸದ್ಯ ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ 94 ಎಸೆತಗಳಲ್ಲಿ ಅಜೇಯ 45 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿ ಈ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಲು ಇನ್ನೂ 55 ರನ್‌ಗಳ ಅಗತ್ಯತೆಯಿದೆ.

ವಿರಾಟ್ ಕೊಹ್ಲಿ ಹೆಡಿಂಗ್ಲೆ ಪಂದ್ಯದಲ್ಲಿ ಶತಕ ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ರಿಯಾನ್ ಪರಾಗ್
ವಿರಾಟ್ ಕೊಹ್ಲಿ ಸತತವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಎಡವುತ್ತಿರುವುದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ರಾಜಸ್ತಾನ್ ರಾಯಲ್ಸ್ ತಂಡದ ಯುವ ಆಟಗಾರ ರಿಯಾನ್ ಪರಾಗ್ ವಿರಾಟ್ ಕೊಹ್ಲಿ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿಯೇ ತಮ್ಮ 71 ನೇ ಶತಕ ಸಿಡಿಸುವುದರ ಮೂಲಕ ತಮ್ಮ ಕಳಪೆ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಎಂದು ರಿಯಾನ್ ಪರಾಗ್ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಇದೀಗ ರಿಯಾನ್ ಪರಾಗ್ ಹೇಳಿದಂತೆಯೇ ವಿರಾಟ್ ಕೊಹ್ಲಿ ಕಳೆದ ಪಂದ್ಯಗಳಿಗೆ ಹೋಲಿಸಿದರೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದು ಶತಕ ಬಾರಿಸುವ ಸಂಭವಗಳು ಹೆಚ್ಚಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications