ಭಾರತ ಹಾಗೂ ಪಾಕ್ ನಡುವೆ ಅಘೋಷಿತ ಯುದ್ಧ ಆರಂಭವಾದ ಹಾಗೆ ಕಾಣುತ್ತಿದೆ. ಭಾರತ 26 ಜಯ ಅಮಾಯಕರ ಪ್ರಾಣತೆಗೆದೆ ಉಗ್ರರರಿಗೆ ಪಾಠ ಕಲಿಸಲು ಭರ್ಜರಿ ಬೇಟೆ ನಡೆಸಿದೆ. ಈ ಬೇಟೆ ಆಪರೇಷನ್ ಸಿಂಧೂರ್ ಎಂದು ಹೆಸರು ಇಟ್ಟಿದೆ. ಏಪ್ರಿಲ್ 22 ರಂದು ನಡೆದ ದಾಳಿಗೆ ಪ್ರತಿಕಾರವಾಗಿ ಭಾರತ ಸಹ ಈಗ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿಯನ್ನು ನಡೆಸಿದೆ. ಆದರೆ ಪಾಪಿ ಪಾಕಿಸ್ತಾನ ಇದಕ್ಕೆ ಸುಮ್ಮನೆ ಕುಳಿತುಕೊಳ್ಳದೇ ಗುರುವಾರ ರಾತ್ರಿ ಆಗುತ್ತಿದ್ದಂತೆ ಗಡಿ ಭಾಗದಲ್ಲಿ ಮಿಸೈಲ್ ದಾಳಿ ನಡೆಸಿದೆ.
ಜಮ್ಮು ಕಣಿವೆ, ಪಂಜಾಬ್, ರಾಜಸ್ಥಾನಗಳನ್ನು ಟಾರ್ಗೆಟ್ ಮಾಡಿ ಪಾಕ್ ಮಿಸೈಲ್ ದಾಳಿಯನ್ನು ನಡೆಸಿದೆ. ಆದರೆ ಈ ಮಿಸೈಲ್‌ಗಳನ್ನು ಹೊಡೆದುರುಳಿಸುವಲ್ಲಿ ಭಾರತದ ಸೇನೆ ಸಫಲವಾಗಿದೆ. ಈ ಎಲ್ಲ ಬೆಳವಣಿಗೆಗಳು ಗಡಿಯಲ್ಲಿ ನಡೆಯುತ್ತಿದ್ದರೆ, ಧರ್ಮಶಾಲಾದಲ್ಲಿ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಪಂದ್ಯಗಳು ನಡೆದಿವೆ. ಈ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಹುಟ್ಟಿಕೊಳ್ಳುವ ಪ್ರಶ್ನೆ ಒಂದೆ ಐಪಿಎಲ್ ನಡೆಯುತ್ತದಾ ಎಂದು. ಭಾರತ ಹಾಗೂ ಪಾಕ್ ನಡುವಣ ಉದ್ವಿಗ್ನತೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಐಪಿಎಲ್ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆ ಐಪಿಎಲ್ ಅಧ್ಯಕ್ಷರು ಬಿಗ್ ಅಪ್ ಡೇಟ್ ನೀಡಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿರುವ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಐಪಿಎಲ್ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆ ಬಿಸಿಸಿಐ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರದ ವರೆಗೆ ಅಭಿಮಾನಿಗಳು ಕಾಯಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 58 ಪಂದ್ಯಗಳು ಮುಗಿದಿವೆ. ಇನ್ನು ಲೀಗ್, ಪ್ಲೇ ಆಫ್, ಕ್ವಾಲಿಫೈರ್, ಫೈನಲ್ ಪಂದ್ಯ ಸೇರಿದಂತೆ 16 ಪಂದ್ಯಗಳು ನಡೆಯಬೇಕಿದೆ. ಈಗ ಉಳಿದ ಪಂದ್ಯಗಳ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
ಧರ್ಮಶಾಲಾದಲ್ಲಿ ಐಪಿಎಲ್‌ನ 58ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ಆರಂಭಿಕರಾದ ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 122 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಪ್ರಿಯಾಂಶ್ ಆರ್ಯ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿ ಔಟ್ ಆದರು. ಪ್ರಭಸಿಮ್ರನ್ ಸಿಂಗ್ ಅಜೇಯ 50 ರನ್ ಸಿಡಿಸಿದ್ದರು. 10.1 ಓವರ್‍ಗಳ ಪಂದ್ಯ ನಡೆದಾಗ ರದ್ದು ಮಾಡಲಾಯಿತು. ಮೈದಾನದಲ್ಲಿನ ದೀಪಗಳನ್ನು ಆರಿಸಿ ಅಭಿಮಾನಿಗಳಿಗೆ ಮನೆಗೆ ಹೋಗುವಂತೆ ಸೂಚಿಸಲಾಯಿತು.
ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವಣ ಪಂದ್ಯ ಶುಕ್ರವಾರ ಏಕಾನ ಮೈದಾನದಲ್ಲಿ ನಡೆಯಬೇಕಿದೆ. ಈ ಪಂದ್ಯದ ಮೇಲೂ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.