MI vs GT: ವಿಲ್ ಜಾಕ್ಸ್ ಅರ್ಧಶತಕ: ಗುಜರಾತ್‌ಗೆ 156 ರನ್ ಗುರಿ ನೀಡಿದ ಮುಂಬೈ
ಮಧ್ಯಮ ಕ್ರಮಾಂಕದ ಬ್ಯಾಟರ್ ವಿಲ್ ಜಾಕ್ಸ್ ಅರ್ಧಶತಕ ನೆರವಿನಿಂದ ಮುಂಬೈ ಇಂಡಿಯನ್ಸ್ 18ನೇ ಆವೃತ್ತಿಯ ಐಪಿಎಲ್‌ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.
ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ರಯಾನ್ ರಿಕಲ್ಟನ್ ಅವರಿಗೆ ಸಿರಾಜ್ ಖೆಡ್ಡಾ ತೋಡಿದರು ವೇಗಿ ಎಸೆದ ಔಟ್ ಸೈಡ್ ಆಫ್ ಸ್ಟಂಪ್ ಡಿಲೇವರಿಯನ್ನು ಕವರ್ಸ್ ಮೇಲೆ ಸಿಕ್ಸರ್ ಬಾರಿಸಲು ಹೋಗಿ ಸಾಯಿ ಸುದರ್ಶನ್‌ಗೆ ಕ್ಯಾಚ್ ನೀಡಿದರು. ಇನ್ನು ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ, ಅರ್ಷದ್ ಖಾನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಮಿಡ್ ಆಫ್‌ನಲ್ಲಿ ಪ್ರಸಿದ್ಧ್ ಕೃಷ್ಣಾಗೆ ಕ್ಯಾಚ್ ನೀಡಿದರು. ಮುಂಬೈ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು.

26 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ವಿಲ್ ಜಾಕ್ಸ್ ಆಧಾರವಾದರು. ಈ ಜೋಡಿ ಪವರ್ ಪ್ಲೇನಲ್ಲಿ ಮತ್ತೆ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿತು. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಿದ ಜೋಡಿ ಕೊಂಚ ಗುಜರಾತ್ ಬೌಲರ್‌ಗಳನ್ನು ಕಾಡಿತು. ಇದೇ ವೇಳೆ ವಿಲ್ ಜಾಕ್ಸ್ ಗೆ ಹಲವು ಜೀವದಾನಗಳು ಸಹ ಸಿಕ್ಕವು. ಈ ಜೋಡಿ 43 ಎಸೆತಗಳಲ್ಲಿ 71 ರನ್ ಸಿಡಿಸಿತು. 35 ರನ್ ಬಾರಿಸಿ ಉತ್ತಮ ಲಯದಲ್ಲಿ ಕಂಡು ಬಂದಿದ್ದ ಸೂರ್ಯಕುಮಾರ್ ಯಾದವ್ ಇಲ್ಲದ ಶಾಟ್‌ಗೆ ಮುಂದಾಗಿ ಲಾಂಗ್ ಅಫ್‌ನಲ್ಲಿ ಶಾರುಖ್ ಖಾನ್‌ಗೆ ಕ್ಯಾಚ್ ನೀಡಿದರು.
ವಿಲ್ ಜಾಕ್ಸ್ ಅರ್ಧಶತಕ
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿಲ್ ಜಾಕ್ಸ್ ಅಬ್ಬರಿಸಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸೇರಿದಂತೆ 53 ರನ್ ಬಾರಿಸಿದ್ದಾಗ ರಶೀದ್ ಖಾನ್ ಎಸೆತದಲ್ಲಿ ಬಿಗ್ ಹಿಟ್‌ಗೆ ಮುಂದಾಗಿ ಔಟ್ ಆದರು. ಮುಂಬೈ ತಂಡದ ಭರವಸೆಯ ಬ್ಯಾಟರ್‌ಗಳಾದ ತಿಲಕ್ ವರ್ಮಾ (7), ಹಾರ್ದಿಕ್ ಪಾಂಡ್ಯ (1), ನಮನ್ ಧಿರ್ (7) ದೊಡ್ಡ ಇನಿಂಗ್ಸ್ ಕಟ್ಟಲೇ ಇಲ್ಲ.

30 ವರ್ಷದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಕೆಳ ಕ್ರಮಾಂಕದಲ್ಲಿ ಮುಂಬೈ ತಂಡಕ್ಕೆ ಆಧಾರವಾದರು. ಇವರು 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್ ಬಾರಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಇವರ ಬ್ಯಾಟಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಕಲೆ ಹಾಕಿತು.
ಗುಜರಾತ್ ತಂಡದ ಪರ ಸಾಯಿ ಕಿಶೋರ್ 2, ಮೊಹಮ್ಮದ್ ಸಿರಾಜ್, ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣಾ, ರಶೀದ್ ಖಾನ್, ಜೆರಾಲ್ಡ್ ಕೋಟ್ಜೀ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications