25 ಎಸೆತಗಳಿಗೆ ಶತಕ, ಓವರ್‌ಗೆ 6 ಸಿಕ್ಸ್ ಚಚ್ಚಿದ ವಿಲ್ ಜ್ಯಾಕ್ಸ್: ವಿಡಿಯೋ

ಲಂಡನ್, ಮಾರ್ಚ್ 22: ಇಂಗ್ಲೆಂಡ್‌ನ ಯುವ ಕ್ರಿಕೆಟಿಗ ವಿಲ್ ಜ್ಯಾಕ್ಸ್ ಓವರ್‌ನಲ್ಲಿ ಆರು ಸಿಕ್ಸ್ ಬಾರಿಸಿ ಮತ್ತು ಕೇವಲ 25 ಎಸೆತಗಳಿಗೆ ಶತಕ ಚಚ್ಚುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ದುಬೈನಲ್ಲಿ ನಡೆದ ಟಿ10 ಪಂದ್ಯವೊಂದರಲ್ಲಿ ಆಂಗ್ಲ ಕ್ರಿಕೆಟಿಗ ಈ ಅಪರೂಪದ ಸಾಧನೆ ಮೆರೆದರು.
ದುಬೈನಲ್ಲಿ ಗುರುವಾರ (ಮಾರ್ಚ್ 21) ನಡೆದ ಟಿ10 ಟೂರ್ನಿಯಲ್ಲಿ ಲಂಕಾಷೈರ್ ತಂಡದ ವಿರುದ್ಧ ಸರ್ರೆ ತಂಡದ ಆಟಗಾರ ಜ್ಯಾಕ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಜ್ಯಾಕ್ಸ್ ಭರ್ಜರಿ ಬ್ಯಾಟಿಂಗ್‌ನ ಕಾರಣ ಸರ್ರೆ ತಂಡ 176 ರನ್ ಕಲೆ ಹಾಕಿತು. ವಿಲ್ ಸ್ಫೋಟಕ ಬ್ಯಾಟಿಂಗ್ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗುತ್ತಿದೆ.
20ರ ಹರೆಯದ ವಿಲ್ ಜ್ಯಾಕ್ಸ್, ಪಂದ್ಯದಲ್ಲಿ ಒಟ್ಟಾರೆ 30 ಎಸೆತಗಳಿಗೆ 105 ರನ್ ಬಾರಿಸಿದರು. ಇದರಲ್ಲಿ 8 ಫೋರ್ ಮತ್ತು 11 ಸಿಕ್ಸ್‌ಗಳೂ ಸೇರಿದ್ದವು. ಇದು ಪರಿಗಣಿಸಿದ್ದರೆ ವಿಶ್ವದಾಖಲೆಯಾಗುತ್ತಿತ್ತು. ಆದರೆ ಜ್ಯಾಕ್ಸ್ ಸಾಧನೆ, ದಾಖಲೆ ಪುಸ್ತಕ ಸೇರಿಲ್ಲ. ಯಾಕೆಂದರೆ ಇದು ಅಧಿಕೃತ ಪಂದ್ಯವಾಗಿರಲಿಲ್ಲ.
ಅತೀ ವೇಗವಾಗಿ ಶತಕ ಬಾರಿಸಿದ ವಿಶ್ವದಾಖಲೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2013ರಲ್ಲಿ ನಡೆದ ಐಪಿಎಲ್‌ನಲ್ಲಿ ಗೇಲ್ ಕೇವಲ 30 ಎಸೆತಗಳಿಗೆ ಶತಕ ಬಾರಿಸಿದ್ದರು. ಏಕದಿನದಲ್ಲಿ ಅತೀ ವೇಗದ ದಾಖಲೆ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications