Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್‌ ಅವರ 25 ವರ್ಷದ ಹಳೆಯ ದಾಖಲೆ ಮುರಿಯಲು ಅಸಾಧ್ಯವೇ? ಈ ದಾಖಲೆ ಸನಿಹಕ್ಕೆ ಎರಡು ಬಾರಿ ಬಂದಿದ್ದರು ವಿರಾಟ್‌

ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್‌ ಸಚಿನ್ ತೆಂಡೂಲ್ಕರ್‌ ಅವರು ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳಿಗೆ ತಮ್ಮ ಹೆಸರು ನಮೂದಿಸಿದ್ದಾರೆ. ಅವರ ಅದೆಷ್ಟೋ ದಾಖಲೆಗಳು ಮುರಿಯಲು ಸಾಧ್ಯವೇ ಇಲ್ಲ ಎಂಬಂತೆ ಕಾಣುತ್ತವೆ. ಅದರಲ್ಲಿ ಅವರು ನಿರ್ಮಿಸಿದ ಈ ದಾಖಲೆ ಅಳಿಸುವುದು ಕಷ್ಟ ಎಂಬಂತೆ ಕಾಣುತ್ತದೆ. ಅಲ್ಲದೆ ಮೈದಾನದಲ್ಲಿ ಆಟಗಾರರಿಗೆ ಈ ದಾಖಲೆ ಅಳಿಸುವುದು ಕಬ್ಬಿಣದ ಕಡಲೆಯಂತೆ ಕಾಣಿಸಿಕೊಳ್ಳುತ್ತಿದೆ.

ಸಚಿನ್ ತೆಂಡೂಲ್ಕರ್ 1998 ರಲ್ಲಿ ಅದ್ಭುತ ಫಾರ್ಮ್‌ ಹೊಂದಿದ್ದರು. ಇದು ಯಾವುದೇ ಕ್ರಿಕೆಟಿಗನ ಕನಸು. ಒಂದು ಕ್ಯಾಲೆಂಡರ್ ವರ್ಷದಲ್ಲಿ ಅವರು 12 ಶತಕಗಳನ್ನು ಗಳಿಸಿದ್ದಾರೆ. ಇದು ಕ್ಯಾಲೆಂಡರ್ ವರ್ಷದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಬಾರಿಸಿದ ಹೆಚ್ಚು ಶತಕಗಳ ಸಂಖ್ಯೆ ಆಗಿದೆ. ಇದು 25 ವರ್ಷಗಳ ನಂತರವೂ ಅಳಿಯದೆ ಉಳಿದಿದೆ. ವಿರಾಟ್ ಕೊಹ್ಲಿಯಿಂದ ರಿಕಿ ಪಾಂಟಿಂಗ್‌ವರೆಗಿನ ಹಲವು ಕ್ರಿಕೆಟಿಗರು ಈ ದಾಖಲೆಯ ಸಮೀಪ ಬಂದರೂ ಅದನ್ನು ಅಳಿಸಲು ಸಾಧ್ಯವಾಗಲಿಲ್ಲ. ಒಂದು ಕ್ಯಾಲೆಂಡರ್ ವರ್ಷದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಎಷ್ಟು ಬ್ಯಾಟ್ಸ್‌ಮನ್‌ಗಳು ಇದ್ದಾರೆ ಇಲ್ಲಿದೆ ಮಾಹಿತಿ.

Will Sachins 25 year old record never be broken? Kohli came close twice but..

ಒಂದು ಕ್ಯಾಲೆಂಡರ್ ವರ್ಷದಲ್ಲಿ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ್ದಾರೆ. 1998 ರಲ್ಲಿ ಸಚಿನ್ 12 ಶತಕಗಳನ್ನು ಗಳಿಸುವ ಮೂಲಕ, ಅರವಿಂದ್ ಡಿ ಸಿಲ್ವಾ ಅವರ 10 ಶತಕಗಳ ದಾಖಲೆಯನ್ನು ಅಳಿಸಿದ್ದರು. ಸಚಿನ್ 1998ರಲ್ಲಿ 39 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 68.67ರ ಸರಾಸರಿಯಲ್ಲಿ 2541 ರನ್ ಗಳಿಸಿದ್ದರು.

ಪಾಂಟಿಂಗ್, ಕೊಹ್ಲಿ ಎರಡು ಬಾರಿ 11 ಶತಕ

ವಿರಾಟ್ ಕೊಹ್ಲಿ ಮತ್ತು ರಿಕಿ ಪಾಂಟಿಂಗ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಸಚಿನ್ ಅವರ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಮುರಿಯುವ ಸಮೀಪಕ್ಕೆ ಬಂದ ಬ್ಯಾಟ್ಸ್‌ಮನ್‌ಗಳು. ವಿರಾಟ್ ಕೊಹ್ಲಿ 2017 ಮತ್ತು 2018 ರಲ್ಲಿ ಸತತ ಎರಡು ವರ್ಷಗಳಲ್ಲಿ 11-11 ಶತಕಗಳನ್ನು ಗಳಿಸಿದ್ದರು. 2003ರಲ್ಲಿ ರಿಕಿ ಪಾಂಟಿಂಗ್ 11 ಶತಕಗಳನ್ನು ಬಾರಿಸಿದ್ದರು.

Will Sachins 25 year old record never be broken? Kohli came close twice but..

ರೋಹಿತ್-ದ್ರಾವಿಡ್ ತಲಾ 10 ಶತಕ

ಒಂದು ಕ್ಯಾಲೆಂಡರ್ ವರ್ಷದಲ್ಲಿ 10 ಶತಕಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಸೇರಿದಂತೆ 5 ಬ್ಯಾಟ್ಸ್‌ಮನ್‌ಗಳಿದ್ದಾರೆ. ರೋಹಿತ್ ಶರ್ಮಾ 2019 ರಲ್ಲಿ ಮತ್ತು ರಾಹುಲ್ ದ್ರಾವಿಡ್ 1999 ರಲ್ಲಿ ಈ ಸಾಧನೆ ಮಾಡಿದ್ದರು. ಅರವಿಂದ್ ಡಿ ಸಿಲ್ವಾ, ಹಾಶಿಮ್ ಆಮ್ಲಾ ಮತ್ತು ತಿಲಕರತ್ನೆ ದಿಲ್ಶಾನ್ ಕೂಡ ಒಂದು ಕ್ಯಾಲೆಂಡರ್ ವರ್ಷದಲ್ಲಿ ತಲಾ 10 ಶತಕಗಳನ್ನು ಗಳಿಸಿದ್ದಾರೆ.

Will Sachins 25 year old record never be broken? Kohli came close twice but..

ಒಂದೇ ಕ್ಯಾಲೆಂಡರ್ ವರ್ಷದಲ್ಲಿ 9 ಶತಕಗಳನ್ನು ಗಳಿಸಿದ 4 ಬ್ಯಾಟ್ಸ್‌ಮನ್‌ಗಳೂ ಇದ್ದಾರೆ. ಇವರಲ್ಲಿ ರಿಕಿ ಪಾಂಟಿಂಗ್, ಡೇವಿಡ್ ವಾರ್ನರ್, ಮೊಹಮ್ಮದ್ ಯೂಸುಫ್ ಮತ್ತು ಗ್ರೇಮ್ ಸ್ಮಿತ್ ಸೇರಿದ್ದಾರೆ. ರಿಕಿ ಪಾಂಟಿಂಗ್ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ಅಂದರೆ 2005 ಮತ್ತು 2006ರಲ್ಲಿ 9 ಶತಕಗಳನ್ನು ಗಳಿಸಿದ್ದರು.

Story first published: Saturday, December 9, 2023, 15:49 [IST]
Other articles published on Dec 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+