ವಿಶ್ವಕಪ್: ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಸರವಣ್ ಮಾರ್ಗದರ್ಶನ

ಬಾರ್ಬೇಡೋಸ್, ಏಪ್ರಿಲ್ 17: ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ರಾಮ್‌ನರೇಶ್ ಸರವಣ್ ಮುಂಬರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಸಲುವಾಗಿ ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್ ತಂತ್ರಗಾರಿಕೆಯ ಮಾರ್ಗದರ್ಶನ ನೀಡುವ ಜವಾಬ್ದಾರಿ ನಿಭಾಯಿಸಲು ಮುಂದಾಗಿದ್ದಾರೆ.
38 ವರ್ಷದ ಬಲಗೈ ಬ್ಯಾಟ್ಸ್‌ಮನ್ ಸರವಣ್, ಕೆರಿಬಿಯನ್ ತಂಡದ ಪರ 2000ದ ಇದವಿಯಿಂದ 2013ರವರೆಗೆ ಒಟ್ಟು 87 ಟೆಸ್ಟ್, 181 ಒಡಿಐ ಹಾಗೂ 18 ಟಿ20-ಐ ಪಂದ್ಯಗಳನ್ನು ಆಡಿದ ಅಪಾರ ಅನುಭವ ಹೊಂದಿದ್ದಾರೆ.
ಆದರೆ, ಮೇ 30ರಂದು ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ವೆಸ್ಟ್ ಇಂಡೀಸ್ ತಂಡದೊಂದಿಗೆ ಸರವಣ್ ಕೂಡ ತೆರಳುತ್ತಾರೆಯೇ ಎಂಬುದರ ಕುರಿತಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿಲ್ಲ.
"ಲಭ್ಯವಿರುವ ಅಲ್ಪ ಸಮಯದಲ್ಲಿ ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಿ ಸುಧಾರಣೆ ತಂದುಕೊಳ್ಳಲು ಅಗತ್ಯದ ಮಾರ್ಗದರ್ಶನ ನೀಡಲು ತಂಡ ಸೇರಿಕೊಂಡಿದ್ದೇನೆ. ಈ ಮೂಲಕ ಪ್ರಮುಖ ಕೋಚ್ ಫ್ಲಾಯ್ಡ್ ರೀಪರ್ ಮತ್ತು ಸಹಾಯಕ ಕೋಚ್‌ಗಳಿಗೆ ನೆರವಾಗಲಿದ್ದೇನೆ,'' ಎಂದು ಸರವಣ್ ಹೇಳಿದ್ದಾರೆ.
ಸರವಣ್, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ ವೆಸ್ಟ್ ಇಂಡೀಸ್ ಪರ 5 ಸಾವಿರಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ
ವೆಸ್ಟ್ ಇಂಡೀಸ್ ತಂಡ ಮೇ.31ರಂದು ಟ್ರೆಂಟ್ ಬ್ರಿಡ್ಜ್‌ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications