Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗೆಲುವಿಗಾಗಿ ಹಪಹಪಿಸುತ್ತಿರುವ ಪಾಕಿಸ್ತಾನ: 76 ದಿನದಿಂದ ಕಂಡಿದೆ ಬರೀ ಸೋಲು

ಸೋಲು. ಸೋಲು.. ಸೋಲು.. ಸೋಲಿನ ಸರಪಳಿ ಪಾಕಿಸ್ತಾನ ತಂಡವನ್ನು ಬಿಗಿದು ಅಪ್ಪಿಕೊಂಡಿದೆ. ಒಂದು ದೊಡ್ಡ ಟೂರ್ನಿಯಲ್ಲಿ ಆದ ನಿರಾಸೆ ಒಂದು ತಂಡವನ್ನು ಎಷ್ಟು ದಿನಗಳ ಕಾಲ ಕಾಡುತ್ತದೆ ಎನ್ನಲು ಪಾಕಿಸ್ತಾನ ಉತ್ತಮ ಉದಾಹರಣೆ. ಪಾಕಿಸ್ತಾನ, ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ನಿರಾಸೆ ಅನುಭವಿಸಿದ ಬೆನ್ನಲ್ಲೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದೆ. ಒಂದೇ ಒಂದು ಗೆಲುವಿನ ರುಚಿ ಇನ್ನು ಪಾಕ್‌ ತಂಡಕ್ಕೆ ಸಿಕ್ಕಿಲ್ಲ.

ಗೋಡೆಯ ಮೇಲೆ ಹಾಕಿದ್ದ ಕ್ಯಾಲೆಂಡರ್‌ ಬದಲಾಗಿದೆ. ಪಾಕಿಸ್ತಾನ ತಂಡದ ನಾಯಕತ್ವವೂ ಬದಲಾಗಿದೆ. ಆದರೆ ತಂಡದ ನಸೀಬು ಬದಲಾಗಲೇ ಇಲ್ಲ. ಟೆಸ್ಟ್‌ನಲ್ಲಿ ವಿಭಿನ್ನ ನಾಯಕನಿದ್ದರೂ ಮತ್ತು ಟಿ20ಯಲ್ಲಿ ವಿಭಿನ್ನ ಸೂತ್ರವನ್ನು ಅನುಸರಿಸಿದ್ದರೂ, ಪಾಕಿಸ್ತಾನ ಇನ್ನೂ ಗೆಲುವಿನ ಹುಡುಕಾಟದಲ್ಲಿದೆ. ಪಾಕಿಸ್ತಾನದ ನೂತನ ನಾಯಕ ಶಹೀನ್ ಶಾ ಆಫ್ರಿದಿ ನಾಯಕರಾದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಪಾಕಿಸ್ತಾನದ ನೂತನ ನಾಯಕರಿಗೆ ಇನ್ನು ಒಂದು ಗೆಲುವಿನ ಸಿಹಿ ಸಿಕ್ಕಿಲ್ಲ.

Winless Pakistan: For 76 days they have seen only defeat

ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಇನ್ನೂ ಮೊದಲ ಗೆಲುವು ಸಿಕ್ಕಿಲ್ಲ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಂಡವು ಈಗಾಗಲೇ ಮೂರು ಪಂದ್ಯಗಳನ್ನು ಸತತವಾಗಿ ಸೋತಿದೆ ಮತ್ತು ಸರಣಿಯನ್ನು ಸಹ ಕಳೆದುಕೊಂಡಿದೆ. ಆದರೆ ಈಗಲಾದರೂ ಶಾಹೀನ್ ಗೆಲುವಿನ ಖಾತೆ ತೆರೆಯುತ್ತಾರೆ ಎಂಬ ನಿರೀಕ್ಷಿಕ್ಷೆಯನ್ನೇ ಇಟ್ಟುಕೊಳ್ಳಲಾಗಿದೆ.

ಹೊಸ ನಾಯಕರಿಗೆ ಇನ್ನು ಸಿಗದ ಸಿಹಿ

ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಏಳು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಕಳೆದ ವರ್ಷ ನವೆಂಬರ್ 4 ರಂದು ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದಿತ್ತು. ಇದರ ನಂತರ, ಪಾಕಿಸ್ತಾನಿ ತಂಡವು ಆಸ್ಟ್ರೇಲಿಯಾಕ್ಕೆ ತೆರಳಿತು, ಅಲ್ಲಿ ಕಾಂಗರೂಗಳು ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅವರನ್ನು ಸೋಲು ಕಂಡಿತು. ಅಂದರೆ ನೂತನ ನಾಯಕ ಶಾನ್ ಮಸೂದ್ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ತಂಡವು ಆಸ್ಟ್ರೇಲಿಯಾದಿಂದ ನೇರವಾಗಿ ನ್ಯೂಜಿಲೆಂಡ್ ತಲುಪಿತು. ಸತತ ನಾಲ್ಕು ಪಂದ್ಯಗಳಲ್ಲಿ ಒಂದರ ಹಿಂದೆ ಒಂದರಂತೆ ಸೋಲು ಕಂಡಿವೆ.

Winless Pakistan: For 76 days they have seen only defeat

ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 158 ರನ್ ಗಳಿಸಿತು. ಆರಂಭಿಕ ಮೊಹಮ್ಮದ್ ರಿಜ್ವಾನ್ 63 ಎಸೆತಗಳಲ್ಲಿ 90 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಉಳಿದ ಬ್ಯಾಟ್ಸ್‌ಮನ್‌ಗಳು ಯಾರೂ ತಂಡಕ್ಕೆ ನೆರವಾಗಲಿಲ್ಲ. ಕಳೆದ ಮೂರು ಪಂದ್ಯಗಳಲ್ಲಿ ಸತತ ಅರ್ಧಶತಕ ಬಾರಿಸುತ್ತಿರುವ ಮಾಜಿ ನಾಯಕ ಬಾಬರ್ ಅಜಂ ಅವರ ಬ್ಯಾಟ್ ಇಂದು ಮೌನಕ್ಕೆ ಶರಣಾಗಿತ್ತು. ಅವರು 11 ಎಸೆತಗಳಲ್ಲಿ 19 ರನ್ ಗಳಿಸಲಷ್ಟೇ ಶಕ್ತರಾದರು. ರಿಜ್ವಾನ್ ನಂತರ, ಮೊಹಮ್ಮದ್ ನವಾಜ್ 21 ರನ್ ಗಳಿಸಿದ್ದೆ ಎರಡನೇ ಬೆಸ್ಟ್ ಸ್ಕೋರ್.

ಇದಾದ ಬಳಿಕ ನಾಯಕ ಶಾಹೀನ್ ಶಾ ಆಫ್ರಿದಿ ಮೊದಲ ಓವರ್‌ನಲ್ಲಿಯೇ ಎರಡು ವಿಕೆಟ್‌ಗಳನ್ನು ಕಬಳಿಸಿ, ಪಂದ್ಯದ ರೋಕಚತೆ ಹೆಚ್ಚಿಸಿದರು. ಶಾಹೀನ್ ಮೊದಲು ಫಿಲ್ ಅಲೆನ್ ಅವರನ್ನು ಎಂಟು ರನ್‌ಗಳಲ್ಲಿ ಔಟ್ ಮಾಡಿದರು ಮತ್ತು ನಂತರ ಅದೇ ಓವರ್‌ನಲ್ಲಿ ಟಿಮ್ ಸೆಫೋರ್ಡ್ ಅವರನ್ನು ಔಟ್ ಮಾಡಿದರು. ಇನಿಂಗ್ಸ್‌ನ ಎರಡನೇ ಮತ್ತು ಮೂರನೇ ಓವರ್‌ನಲ್ಲಿ ಶಾಹೀನ್ ಅಫ್ರಿದಿ ಮತ್ತೊಮ್ಮೆ ಸ್ಫೋಟಿಸಿದರು. ಈ ವೇಳೆ ಅವರು ಕೇವಲ ನಾಲ್ಕು ರನ್‌ಗಳಿಗೆ ವಿಲ್ ಯಂಗ್ ಅವರನ್ನು ಔಟ್ ಮಾಡಿದರು.

ನ್ಯೂಜಿಲೆಂಡ್ ಮೂರು ವಿಕೆಟ್ ಕಳೆದುಕೊಂಡ ನಂತರ, ಗ್ಲೆನ್ ಫಿಲಿಪ್ಸ್ ಮತ್ತು ಡೇರಿಲ್ ಮಿಚೆಲ್ ಜವಾಬ್ದಾರಿ ವಹಿಸಿಕೊಂಡರು. ಮೊದಲಿಗೆ ಇಬ್ಬರೂ ಎಚ್ಚರಿಕೆಯ ಆಟವಾಡಿದ್ದರಿಂದ ಹೆಚ್ಚಿನ ವಿಕೆಟ್ ಬೀಳದಂತೆ ಕಾಯ್ದುಕೊಂಡರು. ನ್ಯೂಜಿಲೆಂಡ್‌ಗೆ ಗೆಲುವಿನ ವಾಸನೆ ಬಂದ ತಕ್ಷಣ ಫಿಲಿಪ್ಸ್ ಮತ್ತು ಮಿಚೆಲ್ ಬಿರುಸಿನ ಬ್ಯಾಟಿಂಗ್ ಆರಂಭಿಸಿದರು. ತಂಡವು ಕೇವಲ 18.1 ಓವರ್‌ಗಳಲ್ಲಿ ಗೆಲುವಿನ ಗೆರೆ ದಾಟಿತು.

Story first published: Saturday, January 20, 2024, 11:13 [IST]
Other articles published on Jan 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+