ಪಾಕ್ ನ ಯೂನಿಸ್ ಖಾನ್, ಮಿಸ್ಬಾ ಟೆಸ್ಟ್ ಕ್ರಿಕೆಟಿಗೆ ವಿದಾಯ
ಮುಂಬೈ, ಮೇ 16 : ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ವಿದಾಯ ಹೇಳಿದ್ದ ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ ಗಳಾದ ಯೂನಿಸ್ ಖಾನ್ ಮತ್ತು ಮಿಸ್ಬಾ ಉಲ್ ಹಕ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದರು.
ಪಾಕಿಸ್ತಾನ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಐತಿಹಾಸಿಕ ಜಯ ಸಾಧಿಸುವ ಮೂಲಕ ಈ ಇಬ್ಬರು ಆಟಗಾರರಿಗೆ ಬಿಳ್ಕೊಟ್ಟರು.

2000ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ 39 ವರ್ಷದ ಯೂನಿಸ್ ಖಾನ್, ಈವರೆಗೆ 118 ಪಂದ್ಯಗಳ 213 ಇನಿಂಗ್ಸ್‌ಗಳಲ್ಲಿ 52.05 ಸರಾಸರಿಯಲ್ಲಿ 10099 ರನ್ ಕಲೆ ಹಾಕಿದ್ದಾರೆ.
34 ಶತಕ ಮತ್ತು 33 ಅರ್ಧಶತಕಗಳನ್ನು ಬಾರಿಸಿದ್ದು 313 ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಯೂನಿಸ್ ಖಾನ್ 2015ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.
ಇನ್ನು 42 ವರ್ಷದ ಮಿಸ್ಬಾ ಉಲ್ ಹಕ್ 2001ರಲ್ಲಿ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದು 75 ಪಂದ್ಯಗಳ 132 ಇನಿಂಗ್ಸ್‌ಗಳಲ್ಲಿ 46.62 ಸರಾಸರಿಯಲ್ಲಿ 5222 ರನ್ ಗಳಿಸಿದ್ದು 161 ರನ್ ಅವರ ವೈಯಕ್ತಿಕ ಅತ್ಯಧಿಕ ಮೊತ್ತವಾಗಿದೆ.
2015ರ ವಿಶ್ವಕಪ್ ಟೂರ್ನಿಯ ನಂತರ ಮಿಸ್ಬಾ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications