ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ 'ದಾದಾ'ಗೆ 43
ಕೋಲ್ಕತ್ತಾ, ಜು.08: ಭಾರತ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ ಬುಧವಾರ 43ನೇ ವಸಂತಕ್ಕೆ ಕಾಲಿರಿಸಿದರು. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಗಂಗೂಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ದಾದಾ ಅವರಿಗೆ ಸಾಮಾಜಿಕ ತಾಣದಲ್ಲೂ ಹಾರೈಕೆ, ಶುಭಾಶಯ ಸಲ್ಲಿಕೆಯಾಗುತ್ತಿದೆ.
ವಿಶೇಷವಾದದ್ದು ಏನೂ ಇಲ್ಲ.. ಈ ಬಾರಿ ಹುಟ್ಟುಹಬ್ಬದ ವೇಳೆ ಕೋಲ್ಕತ್ತಾದಲ್ಲೇ ಇದ್ದೇನೆ, ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದೇನೆ ಎಂದು ದಾದಾ ಹುಟ್ಟುಹಬ್ಬದ ಸಂದರ್ಭದಲ್ಲಿ ಹೇಳಿದ್ದಾರೆ.[ಟೀಂ ಇಂಡಿಯಾಕ್ಕೆ ಶಾಸ್ತ್ರಿ, ಸಚಿನ್, ಸೌರವ್ ಗೈಡ್ ಗಳು]

ಬಿಸಿಸಿಐ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಐಸಿಸಿ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ತಂಡಗಳು ಗಂಗೂಲಿ ಅವರಿಗೆ ವಿಶ್ ಮಾಡಿವೆ.
113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳನ್ನು ಆಡಿರುವ ಸೌರವ್ ಗಂಗೂಲಿ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡವರು.ಇಂಗ್ಲೆಂಡ್ ನ ನಾಟ್ ವೆಸ್ಟ್ ಸರಣಿ ಜಯ, 2003 ರ ವಿಶ್ವಕಪ್ ಫೈನಲ್ ತಲುಪಿದ್ದು ದಾದಾ ಇತಿಹಾಸದ ಕೆಲ ಪುಟಗಳು['ದಾದಾ' ಗಿರಿಯ ಆ ದಿನಗಳು]
ತಮ್ಮ ಆಕ್ರಮಣಕಾರಿ ಮನೋಭಾವ ಮತ್ತು ಆತ್ಮವಿಶ್ವಾಸದಿಂದಲೇ ಭಾರತ ತಂಡಕ್ಕೆ ಗೆಲುವಿನ ರುಚಿ ಹತ್ತಿಸಿದ ಸೌರವ್ ಗಂಗೂಲಿಗೆ ನಮ್ಮಿಂದಲೂ ಹುಟ್ಟುಹಬ್ಬದ ಶುಭಾಶಯಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications