'ಹಿಟ್‌ಮ್ಯಾನ್' ರೋಹಿತ್ ಶರ್ಮಾಗೆ ಇವರೆಲ್ಲಾ ಶುಭಕೋರಿದ್ದಾರೆ

ಮುಂಬೈ, ಏಪ್ರಿಲ್ 30: ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಮಂಗಳವಾರ ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿದ ವಿಶ್ವದ ಏಕಮಾತ್ರ ಆಟಗಾರ ಎಂಬ ಖ್ಯಾತಿಯೊಂದಿಗೆ 'ಹಿಟ್‌ಮ್ಯಾನ್' ಎಂದೇ ಕರೆಸಿಕೊಳ್ಳುವ ರೋಹಿತ್‌ಗೆ ಸಾಮಾಜಿಕ ಜಾಲತಾಣಗಳ ಮೂಲ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಶುಭ ಕೋರಿದ್ದಾರೆ.
ಏಕದಿನ ಕ್ರಿಕೆಟ್‌ನ ಪಂದ್ಯವೊಂದರಲ್ಲಿ 264 ರನ್‌ಗಳನ್ನು ಸಿಡಿಸಿ ವಿಶ್ವ ದಾಖಲೆ ಬರೆದಿರುವ ರೋಹಿತ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ನಾಯಕತ್ವದ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೂರು ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಹಾಗೂ ಏಕಮಾತ್ರ ಆಟಗಾರ ಕೂಡ. 2013ರಲ್ಲಿ ವೆಸ್ಟ್ ಇಂಡೀಸ್ ಎದುರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೋಹಿತ್, 177 ರನ್‌ಗಳನ್ನು ಸಿಡಿಸಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿದ್ದರು.
ಹೀಗೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನಾಗಿರುವ ರೋಹಿತ್ ಶರ್ಮಾ ಅವರಿಗೆ ಯಾರೆಲ್ಲಾ ಟ್ವೀಟ್ ಮೂಲಕ ಶುಭಕೋರಿದ್ದಾರೆ ಎಂಬುದರ ಝಲಕ್ ಇಲ್ಲಿದೆ.
ಹ್ಯಾಪಿ ಬರ್ತ್‌ಡೇ ಹಿಟ್‌ಮ್ಯಾನ್
ನಮ್ಮ ಚಾಂಪಿಯನ್ ರೋಹಿತ್ ಶರ್ಮಾಗೆ ಇಂದು 32ರ ಸಂಭ್ರಮ. ಈ ಸಂದರ್ಭದಲ್ಲಿ ಅವರ ವಿಶ್ವ ದಾಖಲೆಯ 264 ರನ್‌ಗಳ ವಿಡಿಯೊ ಹೊರತೆಗೆದಿದ್ದೇವೆ ಎಂದು ಬಿಸಿಸಿಐಟ್ವೀಟ್ ಮೂಲಕ ಶುಭ ಹಾರೈಸಿದೆ.
ನಿನಗೆ ವಿಶೇಷವಾದ ಬರ್ತ್‌ಡೇ
ಹ್ಯಾಪಿ ಬರ್ತ್‌ಡೇ ರೋಹಿತ್. ಪುತ್ರಿ ಸಮೀರಾ ಜೊತೆಗೆ ನಿನಗೆ ಇದೊಂದು ವಿಶೇಷವಾದ ಹುಟ್ಟುಹಬ್ಬ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿಷ್ ಮಾಡಿದ್ದಾರೆ.
ಹಿಟ್ ಥಾ, ಹಿಟ್ ಹೇ, ಹಿಟ್ ರಹೇಗಾ..
ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ರೋಹಿತ್‌ಗೆ ಶುಭ ಹಾರೈಸಿದ್ದಾರೆ. 'ಹಿಟ್ ಥಾ, ಹಿಟ್ ಹೇ, ಹಿಟ್ ರಹೇಗಾ.. ದೇಶ್ ಹಿತ್ ಮೇ. ಹ್ಯಾಪಿ ಬರ್ತ್‌ಡೇ ರೋಹಿತ್' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಈ ವರ್ಷವೂ ಸಿಕ್ಸರ್‌ಗಳು ಸಿಡಿಯಲಿ
ಭಾರತ ಟೆಸ್ಟ್ ತಂಡದ ಮಿಸ್ಟರ್ ಡಿಪೆಂಡಬಲ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ, ರೋಹಿತ್ ಹುಟ್ಟುಹಬ್ಬಕ್ಕೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. "ಹ್ಯಾಪಿ ಬರ್ತ್‌ಡೇ ಹಿಟ್‌ಮ್ಯಾನ್, ಈ ವರ್ಷ ಹೆಚ್ಚು ಹೆಚ್ಚು ಸಂತೋಷ ಮತ್ತು ಸಿಕ್ಸರ್‌ಗಳು ಮೂಡಲಿ,'' ಎಂದು ಪೂಜಾರ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications
