ಸಚಿನ್ ತೆಂಡೂಲ್ಕರ್ ಹುಟ್ಟು ಹಬ್ಬಕ್ಕೆ ಶುಭ ಕೋರಿದವರು ಯಾರು?

ಮುಂಬಯಿ, ಏಪ್ರಿಲ್ 24: ಗಾಡ್ ಆಫ್ ಕ್ರಿಕೆಟ್ ಎಂದೇ ಖ್ಯಾತಿ ಪಡೆದ ಮಾಜಿ ಆಟಗಾರ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರ 46ನೇ ಜನ್ಮದಿನದ ಸಂಭ್ರಮಾಚರಣೆಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ತೆಂಡೂಲ್ಕರ್, 2013ರಲ್ಲಿ ತಮ್ಮ ನಿವೃತ್ತಿಗೂ ಮೊದಲೇ ಭಾರತ ರತ್ನ ಪ್ರಶಸ್ತಿ ಪಡೆದರು. ಈ ಗೌರವ ಪಡೆದ ಏಕಮಾತ್ರ ಕ್ರೀಡಾಪಟು ಎಂಬ ಹೆಗ್ಗಳಿಕೆ ಅವರದ್ದು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಮತ್ತು ಶತಕಗಳನ್ನು ಸಿಡಿಸಿರುವ ದಾಖಲೆ ಮುಂಬೈಕರ್ ಅವರದ್ದು. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಕಗಳ ಶತಕ ಸಿಡಿಸಿದ ಏಕಮಾತ್ರ ಕ್ರಿಕೆಟಿಗ ಕೂಡ.
ಏಕದಿನ ಕ್ರಿಕೆಟ್‌ನಲ್ಲಿ 18,426 ರನ್‌ಗಳ ಶಿಖರ ನಿರ್ಮಿಸಿರುವ ತೆಂಡೂಲ್ಕರ್, ಟೆಸ್ಟ್ ಕ್ರಿಕೆಟ್‌ನಲ್ಲೂ 15,921 ರನ್‌ಗಳನ್ನು ಗಳಿಸಿದ್ದಾರೆ. 1992ರಿಂದ ಮೊದಲುಗೊಂಡು ಒಟ್ಟಾರೆ 6 ವಿಶ್ವಕಪ್‌ಗಳಲ್ಲಿ ಆಡಿರುವ ಸಚಿನ್, 2011ರ ವಿಶ್ವಕಪ್‌ನಲ್ಲಿ ಟ್ರೋಫಿಗೆ ಮುತ್ತಿಟ್ಟರು.
ಅಂದಹಾಗೆ ಸಾಮಾಜಿಕ ಜಾಲತಾಣ ಟ್ವಿಟ್ ಮೂಲಕ ಮಾಸ್ಟರ್ ಬ್ಲಾಸ್ಟರ್‌ಗೆ ಯಾರೆಲ್ಲಾ ಶುಭ ಕೋರಿದ್ದಾರೆ ಎಂಬುದರ ವಿರವ ಇಲ್ಲಿದೆ.
ಶುಭಕೋರಿದ ಬಿಸಿಸಿಐ
"ಮಾಸ್ಟರ್ ಬ್ಲಾಸ್ಟರ್‌ಗೆ ಹುಟ್ಟು ಹಬ್ಬದ ಶುಭಾಶಯಗಳು. ಈ ಸಂತಸದ ದಿನದಂದು ಸಚಿನ್ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಿಸಿದ ಒಡಿಐ ದ್ವಿಶತಕದ ಝಲಕ್ ವೀಕ್ಷಿಸೋಣ,'' ಎಂದು ವಿಡಿಯೊ ಮೂಲಕ ಬಿಸಿಸಿಐ ಟ್ವೀಟ್ ಮಾಡಿದೆ.
ವೆರಿ ವೆರಿ ಸ್ಪೆಷಲ್ ಶುಭಾಶಯ
ವೆರಿ ವೆರಿ ಸ್ಪೆಷಲ್ ಖ್ಯಾತಿಯ ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಕೂಡ ಟ್ವಿಟರ್ ಮೂಲಕ ಸಚಿನ್‌ಗೆ ಶುಭಕೋರಿದ್ದಾರೆ. "ನಮ್ಮೆಲ್ಲರಿಗೂ ಅವಿಸ್ಮರಣೀಯ ನೆನಪುಗಳನ್ನು ನೀಡಿದ ವೆರಿ ಸ್ಪೆಷಲ್ ಕ್ರಿಕೆಟಿಗ ಮತ್ತು ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರು ಎಂದೆಂದಿಗೂ ಸ್ಫೂರ್ತಿಯ ಸೆಲೆ ಹಾಗೂ ನಮ್ಮೆಲ್ಲರ ಹೀರೊ,'' ಎಂದು ಟ್ವೀಟ್ ಮಾಡಿದ್ದಾರೆ.
ಸೆಹ್ವಾಗ್ 4-6 ಟ್ವೀಟ್
ತೆಂಡೂಲ್ಕರ್ ಅವರೊಟ್ಟಿಗೆ ದೀರ್ಘ ಕಾಲ ಆರಂಭಿಕ ಬ್ಯಾಟಿಂಗ್ ಜೋಡಿಯಾಗಿ ಆಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ವಿಭಿನ್ನ ಟ್ವೀಟ್ ಮೂಲಕ ತಮ್ಮ ನೆಚ್ಚಿನ ಕ್ರಿಕೆಟಿಗ ಸಚಿನ್‌ಗೆ ಶುಭ ಕೋರಿದ್ದಾರೆ.
ಸಲಹೆಯನ್ನು ಮರೆಯಲಾರೆ: ರಹಾನೆ
ಮುಂಬೈ ಮೂಲದ ಕ್ರಿಕೆಟಿಗ ಹಾಗೂ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, "ನಿಮ್ಮ ಸ್ವಭಾವವೇ ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ. ನೀವು ನೀಡಿದ ಅತ್ಯಮೂಲ್ಯ ಸಲಹೆಗಳನ್ನು ನಾನೆಂದಿಗೂ ಮರೆಯಲಾರೆ. ಹುಟ್ಟು ಹಬ್ಬದ ಶುಭಾಶಯಗಳು ಸಚಿನ್ ಸರ್,'' ಎಂದು ಟ್ವೀಟ್ ಮಾಡಿದ್ದಾರೆ.
ಸಚಿನ್‌ರಿಂದ ಕ್ರಿಕೆಟ್ ಫೇಮಸ್
ವಿಶ್ವದ ಮಾಜಿ ನಂ.1 ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್, "ಪ್ರತಿಯೊಬ್ಬ ಕ್ರಿಕೆಟಿಗ ಕ್ರಿಕೆಟ್ ಆಡಿ ಜನಪ್ರಿಯರಾಗಿದ್ದಾರೆ. ಆದರೆ, ಸಚಿನ್ ಕ್ರಿಕೆಟ್ ಆಡಿದ್ದರಿಂದ ಕ್ರಿಕೆಟ್ ಜನಪ್ರಿಯವಾಗಿದೆ. ಹ್ಯಾಪಿ ಬರ್ತ್‌ಡೇ ಸಚಿನ್ ಸರ್,'' ಎಂದು ಶುಭಕೋರಿದ್ದಾರೆ.
ಕೋಟ್ಯಂತರ ಜನರ ಹೃದಯ ಕದ್ದ ಹುಡುಗ
ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್, "ಅಮೋಘ ಪ್ರತಿಭೆಯ ಮೂಲಕ ಕೋಟ್ಯಂತರ ಜನರ ಹೃದಯ ಕದ್ದ ಹುಡುಗನಿಗೆ ಹುಟ್ಟುಹಬ್ಬದ ಶುಭಾಶಯಗಳು,'' ಎಂದು ಟ್ವೀಟ್ ಮಾಡಿದ್ದಾರೆ.
ಹ್ಯಾಪಿ ಬರ್ತ್‌ಡೇ ಪಾ ಜೀ..
ಟರ್ಬನೇಟರ್ ಖ್ಯಾತಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, "ಕ್ರಿಕೆಟಿಗನಿಗಿಂತಲೂ ಮಿಗಿಲಾದ ಉತ್ತಮ ಮನುಷ್ಯ. ಪಾ ಜೀ ವೀ ಲವ್ ಯೂ. ಹ್ಯಾಪಿ ಬರ್ತ್‌ಡೇ ಪಾ ಜೀ,'' ಎಂದು ಶುಭಾಶಯ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications