'ದೇವರುಗಳು ಸೋತಾಗ ಗೋಡೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ!'

ಬೆಂಗಳೂರು, ಜನವರಿ 11: 'ಗ್ರೇಟ್ ವಾಲ್' ರಾಹುಲ್ ದ್ರಾವಿಡ್ ಇಂದಿಗೆ (ಜನವರಿ 11) 47ನೇ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಟೀಮ್ ಇಂಡಿಯಾದ ಮಿನುಗುತಾರೆ, ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ದ್ರಾವಿಡ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಟ್ವಿಟರ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ಮಾಜಿ ನಾಯಕ, ಟೆಸ್ಟ್ ಸ್ಪೆಶಾಲಿಷ್ಟ್‌ಗೆ ಶುಭ ಕೋರಿದ್ದಾರೆ.
1996ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ರಾಹುಲ್ ದ್ರಾವಿಡ್ ಅಲ್ಲಿಂದ ಸುಮಾರು 16 ವರ್ಷಗಳ ಕಾಲ 164 ಟೆಸ್ಟ್ ಪಂದ್ಯಗಳಲ್ಲಿ 13288 ರನ್, 36 ಶತಕಗಳನ್ನು ಬಾರಿಸಿದ್ದಾರೆ, 344 ಏಕದಿನ ಪಂದ್ಯಗಳಲ್ಲಿ 10889 ರನ್ ಗಳಿಸಿದ್ದಾರೆ.
ರಾಹುಲ್ ದ್ರಾವಿಡ್ ಹುಟ್ಟುಹಬ್ಬದ ಈ ದಿನ ಅವರಿಗೆ ಬಂದ ಶುಭಾಶಯಗಳ ಜೊತೆಗೆ ಅವರ ಸಾಧನೆ-ಸಂಗತಿಗಳ ಸುತ್ತವೊಂದು ರೌಂಡು ಹೊಡೆಯೋಣ (ದ್ರಾವಿಡ್ ಆಡುತ್ತಿದ್ದಾಗ ಕೇಳಿಬರುತ್ತಿದ್ದ ಫೇಮಸ್ ಸಾಲು; 'ದೇವರುಗಳು ಸೋತಾಗ ಗೋಡೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ!').
ಅಭಿಮಾನಿಗಳು ಕಟ್ಟಿದ 'ಪ್ರೀತಿಯ ಗೋಡೆ'
ಟೆಸ್ಟ್ ಕ್ರಿಕೆಟ್‌ನಲ್ಲಿ ಕ್ರೀಸಿಗಂಟಿನಿಂತು ಎದುರಾಳಿ ಬೌಲರ್‌ಗಳನ್ನು ಬೆವರಿಸಳಿಸುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಪ್ರೀತಿಯಿಂದ 'ಗೋಡೆ' ಎಂದು ಕರೆಯುತ್ತಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 3 ಬ್ಯಾಟಿಂಗ್ ಕ್ರಮಾಂಕದಲ್ಲಿದ್ದ ಬೆಸ್ಟ್ ಬ್ಯಾಟ್ಸ್‌ಮನ್ ದ್ರಾವಿಡ್.
ಈಗಲೂ ಮುರಿಯದ ದಾಖಲೆ
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಬಿಟ್ಟರೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 10,000 ಹೆಚ್ಚು ರನ್ ಗಳಿಸಿರುವ ಭಾರತದ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್. ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದವರು ದ್ರಾವಿಡ್.
ಬಿಸಿಸಿಐ ಶುಭಾಶಯ
ರಾಹುಲ್‌ಗೆ ಶುಭಾಶಯ ಕೋರಿರುವ ಬಿಸಿಸಿಐ, ಟ್ವೀಟ್‌ನ ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ದ್ರಾವಿಡ್ 153 ರನ್ ಬಾರಿಸಿರುವ ವೀಡಿಯೋ ಹಾಕಿಕೊಂಡಿದೆ. 1999ರಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರವಾಸ ಬಂದಿದ್ದಾಗ ಹೈದರಾಬಾದ್‌ನಲ್ಲಿ ನಡೆದಿದ್ದ ಪಂದ್ಯವಿದು.
ದ್ರಾವಿಡ್ ಸುದೀರ್ಘ ಆಟ
2002ರಲ್ಲಿ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ದ್ರಾವಿಡ್ 217 ರನ್ ಬಾರಿಸಿದ್ದರು. ಇದು ಟೆಸ್ಟ್ ಕ್ರಿಕೆಟ್ ಸುದೀರ್ಘ ವೈಯಕ್ತಿಕ ಇನ್ನಿಂಗ್ಸ್ ಆಗಿ ಗುರುತಿಸಿಕೊಂಡಿದೆ. ದ್ರಾವಿಡ್ ಈ ಇನ್ನಿಂಗ್ಸ್‌ನಲ್ಲಿ 500+ ನಿಮಿಷ ಕ್ರೀಸ್‌ನಲ್ಲಿದ್ದು, 486 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ 28 ಬೌಂಡರಿಗಳನ್ನು ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications