ವರ್ಲ್ಡ್ ಟೆಸ್ಟ್: ಧೋನಿ ಅನುಪಸ್ಥಿತಿಯಲ್ಲಿ ಜೆರ್ಸಿ ನಂ.7 ಧರಿಸೋರ್ಯಾರು?!

ನವದೆಹಲಿ, ಜುಲೈ 24: ಸಚಿನ್ ತೆಂಡೂಲ್ಕರ್ ಅವರ ಫೇಮಸ್ ಜೆರ್ಸಿ ನಂ.10, ಬಿಸಿಸಿಐನಿಂದ 'ಅನಧಿಕೃತವಾಗಿ ನಿವೃತ್ತಿಯಾಗಿದೆ' ಎಂದು ಪರಿಗಣಿಸಲ್ಪಟ್ಟಿದೆ. ಅಂದರೆ ನಂ.10 ಜೆರ್ಸಿ ಭವಿಷ್ಯದಲ್ಲೂ ಯಾವುದೇ ಭಾರತೀಯ ಆಟಗಾರ ಧರಿಸಲು ಅವಕಾಶವಿಲ್ಲ. ಹಾಗಾದರೆ ಎಂಎಸ್ ಧೋನಿಯ ಜೆರ್ಸಿ ನಂ.7 ಕತೆಯೇನು?
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಚಿನ್ ನಿವೃತ್ತಿ ನೀಡಿದ್ದರಿಂದ ಏಕದಿನ ಪಂದ್ಯ ಒಂದರ ವೇಳೆ ನಂ.10 ಜೆರ್ಸಿಯನ್ನು ವೇಗಿ ಶಾರ್ದೂಲ್ ಠಾಕೂರ್‌ಗೆ ನೀಡಲಾಗಿತ್ತು. ಆದರೆ ಈ ವೇಳೆ ಠಾಕೂರ್ ಅವರನ್ನು ಸಾಮಾಜಿಕ ಜಾಲತಾಣ ಭಾರೀ ಗೇಲಿ ಮಾಡಿತ್ತು.
ಈ ಘಟನೆ ಬಳಿಕ ಸಚಿನ್ ಜೆರ್ಸಿ ನಂಬರನ್ನು ಇನ್ಯಾರಿಗೂ ಧರಿಸಲು ಬಿಸಿಸಿಐ ಅವಕಾಶ ನೀಡಿಲ್ಲ. ಮುಂದಿನ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಧೋನಿ ಪಾಲ್ಗೊಳ್ಳುತ್ತಿಲ್ಲ. ಇಲ್ಲಿ ಧೋನಿ ಜೆರ್ಸಿ ನಂಬರ್ ಯಾರ ಪಾಲಾಗಲಿದೆ?!

ಧೋನಿ ಅನುಪಸ್ಥಿತಿ
ಟೆಸ್ಟ್ ಕ್ರಿಕೆಟ್‌ಗೆ 2014ರ ಡಿಸೆಂಬರ್‌ನಲ್ಲೇ ನಿವೃತ್ತಿ ಘೋಷಿಸಿರುವ ಧೋನಿ, ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಭಾಗವಾಗಿ ವೆಸ್ಟ್ ಇಂಡೀಸ್‌ನ ಆ್ಯಂಟಿಗುವಾದಲ್ಲಿ ಆಗಸ್ಟ್ 22ರಿಂದ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಹೇಗೂ ಪಾಲ್ಗೊಳ್ಳುತ್ತಿಲ್ಲ. ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಿಂದಲೇ ಹೊರಗುಳಿದಿರುವ ಧೋನಿ ಭಾರತೀಯ ಆರ್ಮಿಯ ಸೇವೆಯಲ್ಲಿ ಎರಡು ತಿಂಗಳು ತರಬೇತಿ ಪಡೆಯಲಿದ್ದಾರೆ.

ಬಿಸಿಸಿಐನಿಂದ ಮಾಹಿತಿ
'ಏಕದಿನ ಕ್ರಿಕೆಟ್ ಮತ್ತು ಟಿ20ಯಲ್ಲಿ ಧರಿಸುವಂತೆ ವಿರಾಟ್ ಕೊಹ್ಲಿ 18 ನಂಬರ್‌ನ ಜೆರ್ಸಿ ಧರಿಸೋದು ನಿರೀಕ್ಷಿತ. ರೋಹಿತ್ 45 ನಂಬರ್ ದಿರಿಸು ಧರಿಸಲಿದ್ದಾರೆ. ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್ ಇನ್ನು ಆಡುತ್ತಿಲ್ಲ, ಅವರ ಜೆರ್ಸಿ ನಂ.7 ಲಭ್ಯವಿದೆ. ಆದರೆ ಈ ಜೆರ್ಸಿ ಸಂಖ್ಯೆ ಯಾರೂ ಧರಿಸುವ ಸಾಧ್ಯತೆ ಕಡಿಮೆಯಿದೆ,' ಎಂದು ಬಿಸಿಸಿಐಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿನ್‌ಗೆ ವಿಶೇಷ ಗೌರವ
ಶಾರ್ದೂಲ್ ಟೀಕೆಗೊಳಗಾದ ಬಳಿಕ ಸಚಿನ್ ಧರಿಸಿದ್ದ ಜೆರ್ಸಿ ನಂ.10ನ್ನು ಯಾರಿಗೂ ಧರಿಸಲು ಬಿಸಿಸಿಐ ಅವಕಾಶ ನೀಡಿಲ್ಲ. ಸಚಿನ್ ಸಾಧನೆಗೆ ಗೌರವಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ನಿರ್ಧಾರ ತಾಳಿತ್ತು. ಧೋನಿ ಜೆರ್ಸಿ ಸಂಖ್ಯೆಗೂ ಇದೇ ಗೌರವ ಸಿಗಲಿದೆ. ಈ ಸಂಖ್ಯೆಯ ಜೆರ್ಸಿ ಯಾವ ಆಟಗಾರರೂ ಧರಿಸದಿರುವ ಸಾಧ್ಯತೆಯಿಲ್ಲ ಎನ್ನುತ್ತಿದೆ ಮೂಲಗಳು.

ಟೆಸ್ಟ್ ಜೆರ್ಸಿಯಲ್ಲಿ ನಂಬರ್
'ಜೆರ್ಸಿ ನಂ.7ರಲ್ಲಿ ಜನ ಧೋನಿಯನ್ನು ಕಾಣುತ್ತಾರೆ. ಸಂಖ್ಯೆಗಳಿರುವ ಜೆರ್ಸಿಗಳು ವೆಸ್ಟ್ ಇಂಡೀಸ್‌ಗೆ ಏಕದಿನ ಸರಣಿಯ ಬಳಿಕ ಬರಲಿವೆ,' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಬಿಳಿ ಜೆರ್ಸಿಗಳ ಮೇಲೆ ಇದೇ ಮೊದಲಬಾರಿಗೆ ಆಟಗಾರರ ಹೆಸರು ಮತ್ತು ಸಂಖ್ಯೆಗಳು ಕಾಣಿಸಿಕೊಳ್ಳಲಿವೆ. ಟೀಮ್ ಇಂಡಿಯಾದ ಹೆಚ್ಚಿನ ಆಟಗಾರರು ಟಿ20 ಮತ್ತು ಏಕದಿನದಲ್ಲಿನ ಜೆರ್ಸಿ ಸಂಖ್ಯೆಯನ್ನೇ ಧರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications