For Quick Alerts
ALLOW NOTIFICATIONS  
For Daily Alerts
 

ಪಂಜಾಬ್‌ ಕಿಂಗ್ಸ್‌ಗೆ ಜಯ, ಪ್ಲೇ ಆಫ್ಸ್‌ಗೆ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್!

With the Punjab Kings win, Delhi Capitals officially qualify for playoffs in IPL 2021 after CSK

ದುಬೈ: ಶುಕ್ರವಾರ (ಅಕ್ಟೋಬರ್ 1) ನಡೆದ ಐಪಿಎಲ್ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್ ಜಯ ಗಳಿಸಿದೆ. ಇದರೊಂದಿಗೆ ಐಪಿಎಲ್ 2021ರ ಸೀಸನ್‌ನಲ್ಲಿ ಪಂಜಾಬ್‌ ತಂಡದ ಪ್ರಶಸ್ತಿಯಾಸೆ ಜೀವಂತಾಗಿದೆ. ಪಂಜಾಬ್ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಅಧಿಕೃತವಾಗಿ ಪ್ಲೇ ಆಫ್ಸ್‌ಗೆ ಪ್ರವೇಶಿಸಿದೆ. ಈ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಂತರ ಪ್ಲೇ ಆಫ್ಸ್‌ಗೆ ಪ್ರವೇಶಿಸಿದ ಎರಡನೇ ತಂಡವಾಗಿ ಡೆಲ್ಲಿ ಕ್ಯಾಪಿಟಲ್ಸ್ ಗುರುತಿಸಿಕೊಂಡಿದೆ.

ಶುಕ್ರವಾರ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್‌ನ ಅರ್ಷದೀಪ್ ಸಿಂಗ್ ಬೌಲಿಂಗ್‌ ದಾಳಿ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್‌ ನೆರವಿನೊಂದಿಗೆ ಪಂಜಾಬ್ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬೌಲಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ವೆಂಕಟೇಶ್ ಐಯ್ಯರ್ 67, ಶುಬ್ಮನ್ ಗಿಲ್ 7, ರಾಹುಲ್ ತ್ರಿಪಾಠಿ 34, ನಿರೀಶ್ ರಾಣಾ 31, ಇಯಾನ್ ಮಾರ್ಗನ್ 2, ದಿನೇಶ್ ಕಾರ್ತಿಕ್ 11, ಟಿಮ್ ಸೀಫರ್ಟ್ 2, ಸುನಿಲ್ ನರೈನ್ 3 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ಕಳೆದು 165 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ 67 (55 ಎಸೆತ), ಮಯಾಂಕ್ ಅಗರ್ವಾಲ್ 40, ನಿಕೋಲಸ್ ಪೂರನ್ 12, ಐಡನ್ ಮಾರ್ಕ್ರಮ್ 18, ದೀಪಕ್ ಹೂಡ 3, ಶಾರುಖ್ ಖಾನ್ ಅಜೇಯ 22 ರನ್‌ನೊಂದಿಗೆ 19.3 ಓವರ್‌ಗೆ 3 ವಿಕೆಟ್ ಕಳೆದು 168 ರನ್ ಗಳಿಸಿತು.

ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯೋನ್ ಮಾರ್ಗನ್ (ಸಿ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆ), ಟಿಮ್ ಸೀಫರ್ಟ್, ಸುನಿಲ್ ನರೈನ್, ಶಿವಂ ಮಾವಿ, ಟಿಮ್ ಸೌಥಿ, ವರುಣ್ ಚಕ್ರವರ್ತಿ.
ಬೆಂಚ್: ಲಾಕಿ ಫರ್ಗುಸನ್, ಸಂದೀಪ್ ವಾರಿಯರ್, ಪ್ರಸಿಧ್ ಕೃಷ್ಣ, ಆಂಡ್ರೆ ರಸೆಲ್, ಹರ್ಭಜನ್ ಸಿಂಗ್, ಶಕೀಬ್ ಅಲ್ ಹಸನ್, ಬೆನ್ ಕಟಿಂಗ್, ಕರುಣ್ ನಾಯರ್, ಪವನ್ ನೇಗಿ, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ವೈಭವ್ ಅರೋರಾ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI
ಕೆಎಲ್ ರಾಹುಲ್ (ಸಿ & ವಿಕೆ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಶಾರುಖ್ ಖಾನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ನಾಥನ್ ಎಲ್ಲಿಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.
ಬೆಂಚ್: ಹರ್ ಪ್ರೀತ್ ಬ್ರಾರ್, ಮನ್ ದೀಪ್ ಸಿಂಗ್, ಮೊಯ್ಸಿಸ್ ಹೆನ್ರಿಕ್ಸ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಜಲಜ್ ಸಕ್ಸೇನಾ, ಮುರುಗನ್ ಅಶ್ವಿನ್, ಸರ್ಫರಾಜ್ ಖಾನ್, ಸೌರಭ್ ಕುಮಾರ್, ಇಶಾನ್ ಪೊರೆಲ್, ಉತ್ಕರ್ಶ್ ಸಿಂಗ್, ದರ್ಶನ್ ನಲ್ಕಂಡೆ, ಪ್ರಭಸಿಮ್ರಾನ್ ಸಿಂಗ್.

Story first published: Saturday, October 2, 2021, 0:40 [IST]
Other articles published on Oct 2, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+