Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವನಿತೆಯರ ವಿಶ್ವಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ 95 ರನ್ ವಿಜಯ

ಡರ್ಬಿ, ಜುಲೈ 2: ಸ್ಪಿನ್ನರ್ ಏಕ್ತಾ ಬಿಶ್ತ್ ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದಾಗಿ (10 ಓವರ್, 2 ಮೇಡನ್, 18 ರನ್, 5 ವಿಕೆಟ್) ಭಾರತ ತಂಡ, ಭಾನುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 95 ರನ್ ಗಳ ಭರ್ಜರಿ ಜಯ ಸಂಪಾದಿಸಿತು.

ಇಲ್ಲಿನ ಕಂಟ್ರಿ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ, ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತು.

ಈ ಮೊತ್ತವನ್ನು ಬೆನ್ನಟ್ಟಲು ಕ್ರೀಸ್ ಗೆ ಇಳಿದ ಪಾಕಿಸ್ತಾನ ತಂಡ, ಕೇವಲ 38.1 ಓವರ್ ಗಳಲ್ಲಿ ಕೇವಲ 74 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.

ಪಾಕಿಸ್ತಾನದ ಪರವಾಗಿ ಆರಂಭಿಕ ಆಟಗಾರ್ತಿ ನಾಹಿದಾ ಖಾನ್ ಅವರು 23 ರನ್, ಕೆಳ ಕ್ರಮಾಂಕದ ಬ್ಯಾಟ್ಸ್ ವುಮನ್ ಗಳಲ್ಲಿ ನಾಯಕಿ ಸನಾ ಮಿರ್ ಅವರು 29 ರನ್ ಗಳಿಸಿದ್ದು ಬಿಟ್ಟರೆ, ಮಿಕ್ಕವರ್ಯಾರೂ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ. ನಾಲ್ಕು ಜನ ಡಕ್ ಔಟ್ ಆದರೆ, ಮಿಕ್ಕವರ ಕಾಣಿಕೆ ಒಂದಂಕಿ ಗಳಿಕೆ ಮಾತ್ರ!

ಈ ಗೆಲುವಿನೊಂದಿಗೆ ಐಸಿಸಿ ಟೂರ್ನಿಗಳಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನ ತಂಡದ ವಿರುದ್ಧ ಸೋತಿಲ್ಲ ಎಂಬ ಹೆಗ್ಗಳಿಕೆಯನ್ನು ಭಾರತ ತಂಡ ಮುಂದುವರಿಸಿಕೊಂಡು ಹೋಗಿದೆ.
(ಚಿತ್ರ ಕೃಪೆ: ಪಿಟಿಐ)

ಮೊದಲು ಬ್ಯಾಟಿಂಗ್ ಆಯ್ಕೆ

ಮೊದಲು ಬ್ಯಾಟಿಂಗ್ ಆಯ್ಕೆ

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದಿದ್ದ ಭಾರತ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಪಾಕಿಸ್ತಾನದ ಸ್ಪಿನ್ನರ್ ನಶ್ರಾ ಸಂಧು ಮತ್ತು ಸಾದಿಯೂ ಯೂಸುಫ್ ಅವರ ಬೌಲಿಂಗ್ ಕೈಚಳಕದಿಂದ ರನ್ ಗಳಿಸಲು ಭಾರತ ಕೊಂಚ ತಡಕಾಡಿತು.

ಮಧ್ಯಮ ಕ್ರಮಾಂಕದಲ್ಲಿ ನೆರವಾದ ಸುಷ್ಮಾ

ಮಧ್ಯಮ ಕ್ರಮಾಂಕದಲ್ಲಿ ನೆರವಾದ ಸುಷ್ಮಾ

ಆರಂಭಿಕ ಆಟಗಾರ್ತಿಯಾದ ಪೂನಮ್ ರವೂತ್ (47) ಬಿಟ್ಟರೆ ಮಿಕ್ಕವರ್ಯಾರೂ ಉತ್ತಮವಾಗಿ ಆಡಲಿಲ್ಲ. ಆದರೂ, ಮಧ್ಯಮ ಕ್ರಮಾಂಕದಲ್ಲಿ ಕೊಂಚ ಮಿಂಚಿದ ವಿಕೆಟ್ ಕೀಪರ್ ಸುಷ್ಮಾ ವರ್ಮಾ (33) ಅವರ ಸಮಯೋಚಿತ ಬ್ಯಾಟಿಂಗ್ ನಿಂದಾಗಿ ಭಾರತ 169 ರನ್ ಗಳ ಮೊತ್ತ ಸಂಪಾದಿಸಿತು.

ನೆರವಾದ ಮಾನ್ಸಿ ಜೋಷಿ

ನೆರವಾದ ಮಾನ್ಸಿ ಜೋಷಿ

ಆನಂತರ, ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನವನ್ನು ಕಾಡಿದ ಏಕ್ತಾ ಬಿಶ್ತ್, ಆರಂಭಿಕ ಆಟಗಾರ್ತಿ ಆಯೇಶ್ ಜಾಫರ್ ಅವರನ್ನು ತಂಡದ ಮೊತ್ತ ಕೇವಲ 1 ರನ್ ಆಗಿದ್ದಾಗಲೇ ಪೆವಿಲಿಯನ್ ಗೆ ಕಳುಹಿಸಿದರು.
ಆನಂತರ, ತಮ್ಮ ಸ್ಪಿನ್ ಕೈಚಳಕದಿಂದ ಸಿದ್ರಾ ನವಾಜ್, ಇರಾಮ್ ಜಾವೇದ್ ಹಾಗೂ ನಶ್ರಾ ಸಂಧು ವಿಕೆಟ್ ಉರುಳಿಸಿದರು. ಇವರ ಪ್ರಯತ್ನಕ್ಕೆ ಕೈ ಜೋಡಿಸಿದ ತಂಡದ ಮಧ್ಯಮ ವೇಗಿ ಮಾನ್ಸಿ ಜೋಷಿ, ಅಸ್ಮಾವಿಯಾ ಇಕ್ಬಾಲ್ ಹಾಗೂ ನಾಯಕಿ ಸನಾ ಮಿರ್ ಅವರ ವಿಕೆಟ್ ಕಬಳಿಸಿದರು.
ಇನ್ನು ಮೂರು ವಿಕೆಟ್ ಗಳು ಹರ್ಮನ್ ಪ್ರೀತ್ ಕೌರ್, ಜುಲಾನ್ ಗೋಸ್ವಾಮಿ ಹಾಗೂ ದೀಪ್ತಿ ಶರ್ಮಾ ಅವರ ಪಾಲಾದವು. ಅಂತಿಮವಾಗಿ, ಪಾಕಿಸ್ತಾನ 74 ರನ್ ಮೊತ್ತಕ್ಕೆ ಆಲೌಟ್ ಆಯಿತು.

ಆಸೀಸ್ ಎರಡನೇ ಸ್ಥಾನದಲ್ಲಿ

ಆಸೀಸ್ ಎರಡನೇ ಸ್ಥಾನದಲ್ಲಿ

ಪಾಕಿಸ್ತಾನ ತಂಡದ ವಿರುದ್ಧದ ಜಯದ ಮೂಲಕ ಭಾರತ ಈವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ (ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ) ಜಯ ಸಾಧಿಸಿ ಒಟ್ಟು 6 ಅಂಕಗಳನ್ನು ಪಡೆದು ಅಂಕಪಟ್ಟಿಯ ಮೊದಲ ಸ್ಥಾನದಲ್ಲಿದೆ.
ಇಷ್ಟೇ ಜಯ ಸಂಪಾದಿಸಿ ತಾನೂ 6 ಅಂಕ ಗಳಿಸಿದ್ದರೂ, ನೆಟ್ ರನ್ ರೇಟ್ ನಲ್ಲಿ (+0.724) ಭಾರತಕ್ಕಿಂತ (+1.110) ಹಿಂದಿರುವುದರಿಂದ ಅದು 2ನೇ ಸ್ಥಾನದಲ್ಲಿದೆ. ಇನ್ನು, 5 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ 3ನೇ ಸ್ಥಾನದಲ್ಲಿದೆ.

ಭಾರತಕ್ಕೆ ಅರ್ಹ ಜಯ

ಭಾರತಕ್ಕೆ ಅರ್ಹ ಜಯ

ಭಾರತ 50 ಓವರ್ ಗಳಲ್ಲಿ 9 ವಿಕೆಟ್ ಗೆ 169 (ಪೂನಮ್ ರವೂತ್ 47, ಸುಷ್ಮಾ ವರ್ಮಾ 33; ನಶ್ರಾ ಸಂಧು 26ಕ್ಕೆ 4, ಸಾದಿಯಾ ಯೂಸುಫ್ 30ಕ್ಕೆ 2).
ಪಾಕಿಸ್ತಾನ 38.1 ಓವರ್ ಗಳಲ್ಲಿ 74 (ಅಸ್ಮಾವಿಯಾ ಇಕ್ಬಾಲ್ 29, ನಾಹಿದಾ ಖಾನ್ 23; ಏಕ್ತಾ ಬಿಶ್ತ್ 18ಕ್ಕೆ 5, ಮಾನ್ಸಿ ಜೋಷಿ 9ಕ್ಕೆ 2).
ಪಂದ್ಯ ಶ್ರೇಷ್ಠ: ಏಕ್ತಾ ಬಿಶ್ತ್

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+