For Quick Alerts
ALLOW NOTIFICATIONS  
For Daily Alerts
 

ಥರ್ಡ್ ಅಂಪೈರ್ ತಪ್ಪು ನಿರ್ಧಾರಕ್ಕೆ ಪೂಜಾ ವಸ್ತ್ರಾಕರ್ ಔಟ್‌: ಯುವರಾಜ್ ಸಿಂಗ್‌ ಅಸಮಾಧಾನ!

Pooja vastrakar

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ 2022 ಟೂರ್ನಿಯಲ್ಲಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಪೂಜಾ ವಸ್ತ್ರಾಕರ್ ಅವರ ರನೌಟ್ ಭಾರೀ ಚರ್ಚೆಗೆ ಕಾರಣವಾಗಿದ್ದು, ಥರ್ಡ್ ಅಂಪೈರ್ ನಿರ್ಧಾರದ ಕುರಿತು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಶ್ರೀಲಂಕಾ ವಿರುದ್ಧದ ಮಹಿಳಾ ಏಷ್ಯಾಕಪ್ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತದ ವನಿತೆಯರು ದೊಡ್ಡ ಮೊತ್ತ ಕಲೆಹಾಕುವ ಯೋಜನೆಯಲ್ಲಿದ್ದರು. ಈ ಪಂದ್ಯದಲ್ಲಿ ಥರ್ಡ್ ಅಂಪೈರ್‌ನ ಭಯಾನಕ ನಿರ್ಧಾರಕ್ಕೆ ಪೂಜಾ ವಸ್ತ್ರಾಕರ್ ಬಲಿಯಾಗಿದ್ದಾರೆ.

ಥರ್ಡ್‌ ಅಂಪೈರ್ ಕೆಟ್ಟ ನಿರ್ಧಾರದ ಕುರಿತು ಸಾಕಷ್ಟು ಟೀಕೆಗಳು ಕೇಳಿಬಂದಿದ್ದು, ಅಂಪೈರ್ ಕಣ್ಣು ಕುರುಡಾಗಿದೆಯೇ ಎಂದೆಲ್ಲಾ ಪ್ರಶ್ನೆಗಳು ಕೇಳಿಬಂದಿವೆ. ಈ ಪಂದ್ಯದಲ್ಲಿ ಮೂರನೇ ಅಂಪೈರ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಶಿವಾನಿ ಮಿಶ್ರಾ ಕೆಟ್ಟ ನಿರ್ಧಾರಕ್ಕೆ ಪೂಜಾ ಪೆವಿಲಿಯನ್ ಸೇರಬೇಕಾಯಿತು.

ಪೂಜಾ ವಸ್ತ್ರಾಕರ್‌ ರನೌಟ್‌ ಕುರಿತು ಭಾರೀ ವಿವಾದ

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ವನಿತೆಯರು ಇನಿಂಗ್ಸ್‌ನ ಕೊನೆಯ ಎಸೆತಕ್ಕೆ ಪೂಜಾ ಭಾಸ್ತ್ರಕರ್ ರನೌಟ್ ಆಗಿದ್ದು, ಈ ಬಗ್ಗೆ ವಿವಾದ ಎದ್ದಿದೆ. ಆಫ್‌ಸೈಡ್‌ನಲ್ಲಿ ಆಡಿದ ಪೂಜಾ ಡಬಲ್ ರನ್‌ಗಾಗಿ ಓಡಿದರು. ಎರಡನೇ ರನ್ ಪೂರೈಸಿದ ನಂತರ ಸ್ಟ್ರೈಕಿಂಗ್ ಎಂಡ್‌ಗೆ ಮರಳುತ್ತಿದ್ದಾಗ ಶ್ರೀಲಂಕಾದ ವಿಕೆಟ್‌ಕೀಪರ್ ಅನುಷ್ಕಾ ಸಂಜೀವನಿ ಅವರು ಔಟ್ ಮಾಡಲು ಪ್ರಯತ್ನಿಸಿದರು.

ಮೈದಾನದಲ್ಲಿರುವ ಅಂಪೈರ್‌ಗಳು ಮೂರನೇ ಅಂಪೈರ್‌ಗೆ ನಿರ್ಧರಿಸಲು ಸಿಗ್ನಲ್ ಮಾಡಿದರು. ಆದ್ರೆ ಸ್ಕ್ರೀನ್‌ನಲ್ಲಿ ಅನೇಕ ಬಾರಿ ನೋಡಿದ ನಂತರವೂ ಥರ್ಡ್‌ ಅಂಪೈರ್‌ ಶಿವಾನಿ ಕುರುಡು ನಿರ್ಧಾರ ತೆಗೆದುಕೊಂಡಿದ್ದಾರೆ. ಬ್ಯಾಟ್‌ನ ತಳ ಭಾಗ ಕ್ರೀಸ್‌ಗೆ ಪ್ರವೇಶಿಸಿರುವುದು ಸ್ಪಷ್ಟವಾಗಿದ್ದರೂ ಅಂಪೈರ್ ಪೂಜಾ ಅವರನ್ನು ಔಟ್‌ ಎಂದು ನಿರ್ಧಾರ ನೀಡುವ ಮೂಲಕ ಹೊರಗೆ ಕಳುಹಿಸಿದರು. ಈ ದೃಶ್ಯದ ಕುರಿತಾಗಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಎಸಿಸಿ ಸ್ಪರ್ಧೆಯಲ್ಲಿ ಅಂಪೈರಿಂಗ್‌ನ ಕಳಪೆ ಗುಣಮಟ್ಟದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಥರ್ಡ್ ಅಂಪೈರ್ ನಿರ್ಧಾರ ಬರುವವರೆಗೂ, ಬ್ಯಾಟ್ಸ್‌ಮನ್ ಕ್ರೀಸ್‌ಗೆ ಪ್ರವೇಶಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಕಾಮೆಂಟೇಟರ್ಸ್ ಹೇಳುತ್ತಿದ್ರು. ಆದ್ರೆ ದೈತ್ಯ ಪರದೆಯ ಮೇಲೆ ಔಟ್ ಎಂದು ಬಿತ್ತರಿಸಿದಾಗ ಸ್ವತಃ ಕಾಮೇಂಟೇಟರ್ಸ್‌ಗೆ ನಂಬಲು ಸಾಧ್ಯವಾಗಲಿಲ್ಲ. ''ಔಟ್! ಓಹ್ ಮೈ ಗಾಡ್. ನನಗೆ ನಂಬಲಾಗುತ್ತಿಲ್ಲ. ಬ್ಯಾಟರ್ ಒಳಗೆ ಹೋಗಿದ್ದಾರೆ ಎಂದು ನಾನು ಭಾವಿಸುತ್ತೇನೆ." ಎಂದು ಕಾಮೆಂಟೇಟರ್‌ ಹೇಳಿದ್ದಾರೆ.

ಥರ್ಡ್ ಅಂಪೈರ್ ನಿರ್ಧಾರಕ್ಕೆ ಯುವರಾಜ್ ಅಸಮಾಧಾನ!

ಥರ್ಡ್ ಅಂಪೈರ್‌ನ ಭಯಾನಕ ನಿರ್ಧಾರದ ವಿರುದ್ಧ ಯುವರಾಜ್ ಸಿಂಗ್ ಟ್ವಿಟ್ಟರ್‌ನಲ್ಲಿ ತಮ್ಮದೇ ಆದ ಆಕ್ರೋಶವನ್ನು ಹೊರಹಾಕಿದರು. "ಇದು ಥರ್ಡ್‌ ಅಂಪೈರ್‌ನ ಅತ್ಯಂತ ಕಳಪೆ ನಿರ್ಧಾರ! ಪೂಜಾ ವಸ್ತ್ರಾಕರ್‌ಗೆ ಅನುಮಾನದ ಲಾಭವನ್ನು ನೀಡಬೇಕಾಗಿತ್ತು." ಎಂದು ಯುವಿ ಟ್ವೀಟ್ ಮಾಡಿದ್ದಾರೆ.

ವಿವಾದಾತ್ಮಕ ರನೌಟ್ ಕುರಿತು ಕಿಡಿಕಾರಿದ ಅಭಿಮಾನಿಗಳು

ಇನ್ನು ಪೂಜಾ ವಿವಾದಾತ್ಮಕ ರನೌಟ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಾಕಷ್ಟು ಕಿಡಿಕಾರಿದ್ದಾರೆ. ಥರ್ಡ್ ಅಂಪೈರ್ ಶಿವಾನಿ ಮಿಶ್ರಾ ಕುರುಡು ನಿರ್ಧಾರ, ಮೂರ್ಖತನದ ಪರವಾವಧಿ ಎಂದೆಲ್ಲಾ ಟೀಕಿಸಿದ್ದಾರೆ. ಜೊತೆಗೆ ಥರ್ಡ್‌ ಅಂಪೈರ್ ನಿರ್ಧಾರದ ಜೊತೆಗೆ 4ನೇ ಅಂಪೈರ್ ನಿರ್ಧಾರವನ್ನು ಪ್ರಾರಂಭಿಸಬೇಕಾಗಿದೆ ಎಂದು ಅಭಿಮಾನಿಗಳು ನಿರ್ಧಾರದ ಕುರಿತು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡದ ಪ್ರದರ್ಶನ

ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡದ ಪ್ರದರ್ಶನ

ಮಹಿಳಾ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 41 ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 150ರನ್ ಗಳಿಸಿತು. ಭಾರತದ ಪರ ಜೆಮಿಮಾ ರೋಡ್ರಿಗಸ್ 53 ಎಸೆತಗಳಲ್ಲಿ 76 ರನ್ ಗಳಿಸಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 18.2 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ಆಲೌಟ್‌ ಆಗಿದೆ.

ಭಾರತ ಮಹಿಳಾ ತಂಡದ ಪರ ದಯಾಲನ್ ಹೇಮಲತಾ 3, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ ಪಡೆದರು. ರಾಧಾ ಯಾದವ್ 3 ಓವರ್‌ಗೆ 15ರನ್ ನೀಡಿದ 1 ವಿಕೆಟ್ ಪಡೆದರು.

Story first published: Sunday, October 2, 2022, 14:11 [IST]
Other articles published on Oct 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+