ಕೆಪಿಎಲ್ ಮಹಿಳಾ ಪಂದ್ಯ: ಶಿವಮೊಗ್ಗ ವಿರುದ್ಧ ಮೈಸೂರಿಗೆ 4 ವಿಕೆಟ್ ಜಯ

ಮೈಸೂರು, ಸೆಪ್ಟೆಂಬರ್ 4: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಮೊದಲ ಕೆಪಿಎಲ್ ಮಹಿಳಾ ಪ್ರದರ್ಶನ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 4 ವಿಕೆಟ್ ಜಯ ಸಾಧಿಸಿದೆ. ಒಟ್ಟು ಎರಡು ಪ್ರದರ್ಶನ ಪಂದ್ಯಗಳಲ್ಲಿ ಒಂದು ಮುಕ್ತಾಯಗೊಂಡಿದೆ.
ಅಂತಿಮ ಓವರ್ ನಲ್ಲಿ ಮೈಸೂರು ಗೆಲ್ಲಲು 7 ರನ್ ಗಳ ಅವಶ್ಯಕತೆಯಿತ್ತು. ಶಿವಮೊಗ್ಗ ಬೌಲರ್ ಮೋನಿಕಾ ಪಟೇಲ್ ಓವರ್ ನಲ್ಲಿ ಮೊದಲ ಎಸೆತಕ್ಕೆ ಮೈಸೂರಿನ ಆಕಾಂಕ್ಷಾ ಕೊಹ್ಲಿ ಸಿಕ್ಸ್ ಹೊಡೆದುಬಿಟ್ಟರು. ಬಳಿಕ ಒಂದು ರನ್ ಸೇರಿಸಿ ಮೈಸೂರು ಸುಲಭವಾಗಿ ಗೆಲುವಿನ ಗೆರೆ ದಾಟಿತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಶಿವಮೊಗ್ಗ ಲಯನ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದು 93 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ 19.2 ಓವರ್ ಗಳಲ್ಲಿ 6 ವಿಕೆಟ್ ಕಳೆದು 94 ರನ್ ಪೇರಿಸಿತು. ಆಕಾಂಕ್ಷಾ ಅವರು ಅಜೇಯ 34 ರನ್ ಪೇರಿಸಿ ತಂಡದ ಗೆಲುವಿಗೆ ಕಾರಣರಾದರು.
ಬುಧವಾರ (ಸೆಪ್ಟೆಂಬರ್ 5) ಮಹಿಳಾ ಎರಡನೇ ಪ್ರದರ್ಶನ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ. ಬೆಳಗ್ಗೆ 11ಕ್ಕೆ ಈ ಪಂದ್ಯ ಮೈಸೂರು ಎಸ್ಡಿಎನ್ಆರ್ ಮೈದಾನದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications