Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL Auction 2023: 1.50 ಕೋಟಿ ರೂ.ಗೆ ಆರ್‌ಸಿಬಿ ತಂಡದ ಪಾಲಾದ ಮಾರಕ ವೇಗಿ!

Womens IPL 2023 Auction: Renuka Singh Thakur Sold To RCB At Rs 1.50 cr

ಸೋಮವಾರ, ಫೆಬ್ರವರಿ 13ರಂದು 2023ರ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ಗಾಗಿ ಮುಂಬೈನಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಭಾರತ ಮಹಿಳಾ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಖರೀದಿಸಿದೆ.

ಮಾರಕ ವೇಗಿಯಾಗಿರುವ ರೇಣುಕಾ ಸಿಂಗ್ ಠಾಕರ್ ಅವರನ್ನು 1.50 ಕೋಟಿ ರೂ. ನೀಡಿ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿತು. ಸ್ಮೃತಿ ಮಂಧಾನ, ಎಲ್ಲಿಸಿ ಪೆರ್ರಿ ನಂತರ ಮತ್ತೊಬ್ಬ ಸ್ಟಾರ್ ಆಟಗಾರ್ತಿ ತಂಡವನ್ನು ಸೇರಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದಕ್ಕೂ ಮುನ್ನ ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಉದ್ಘಾಟನಾ ಆವೃತ್ತಿಯ ಹರಾಜಿನಲ್ಲಿ ದಾಖಲೆಯೆ ಮಾರಾಟವಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾದರು. ಭಾರತದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿ ಆಗಿರುವ ಸ್ಮೃತಿ ಮಂಧಾನ ಅವರನ್ನು 3.40 ಕೋಟಿ ರೂ. ಬೆಲೆಗೆ ಆರ್‌ಸಿಬಿ ತಂಡಕ್ಕೆ ಮಾರಾಟವಾಗಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 18 ನಂಬರ್ ಜೆರ್ಸಿ ಧರಿಸಲಿದ್ದರೆ, ಮಹಿಳಾ ಐಪಿಎಲ್‌ನಲ್ಲಿ ಸ್ಮೃತಿ ಮಂಧಾನ ಕೂಡ ಆರ್‌ಸಿಬಿ ಪರ 18 ನಂಬರ್ ಜೆರ್ಸಿ ಧರಿಸಿ ಆಡಲಿದ್ದಾರೆ.

Womens IPL 2023 Auction: Renuka Singh Thakur Sold To RCB At Rs 1.50 cr

ಆರ್‌ಸಿಬಿ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ?
ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಆದರೆ ಇದೇ ವೇಳೆ ತಂಡಕ್ಕೆ ಆಸ್ಟ್ರೇಲಿಯಾ ಆಲ್‌ರೌಂಡರ್ ಎಲ್ಲಿಸಿ ಪೆರ್ರಿ ಬಂದಿರುವುದು, ತುಸು ಸ್ಪರ್ಧೆ ಹೆಚ್ಚಾಗಿರಲಿದೆ. ಸ್ಮೃತಿ ಮಂಧಾನ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ.

Story first published: Monday, February 13, 2023, 15:49 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+