
ಪುರುಷರ ಟಿ20 ವಿಶ್ವಕಪ್ ಬಳಿಕ ಮತ್ತೊಂದು ಅಂತರಾಷ್ಟ್ರೀಯ ಟೂರ್ನಿ ಯೋಜನೆಗೆ ಐಸಿಸಿ ರೆಡಿಯಾಗಿದ್ದು, 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನ ಪ್ರಕಟಿಸಿದೆ. ನ್ಯೂಜಿಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ಟೂರ್ನಿಗೆ ವೇದಿಕೆ ಸಿದ್ಧಗೊಂಡಿದ್ದು, ಮಾರ್ಚ್ 4, 2022ರಂದು ಬೇ ಓವಲ್‌ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಮಾರ್ಚ್ 4ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ , ಲಿಮಿಟೆಡ್ ಓವರ್‌ನ ಬಲಿಷ್ಠ ತಂಡ ವೆಸ್ಟ್ ಇಂಡೀಸ್ ವಿರುದ್ಧ ಕಾದಾಟ ನಡೆಸಲಿದೆ. ಮೊದಲ ಪಂದ್ಯದ ನಂತರದಲ್ಲಿ ಮಾರ್ಚ್ 5ರಂದು ಎರಡು ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡವು ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಮುಖಾಮುಖಿಯಾಗಲಿವೆ.
ಇದಾದ ನಂತರ ಮಾರ್ಚ್ 6ರಂದು ಮೌಂಟ್ ಮೌಂಗನುಯಿನಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ.
ಒಟ್ಟು 31 ದಿನಗಳು ನಡೆಯಲಿರುವ ಐಸಿಸಿ ಟೂರ್ನಮೆಂಟ್‌ನಲ್ಲಿ ಒಟ್ಟು 31 ಪಂದ್ಯಗಳನ್ನು ಆಯೋಜಿಸಲಾಗಿದೆ. ಎಂಟು ತಂಡಗಳು ವಿಶ್ವಕಪ್ ಟ್ರೋಫಿಗಾಗಿ ಹೋರಾಡಲಿವೆ. ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ಡ್ಯುನೆಡಿನ್, ಹ್ಯಾಮಿಲ್ಟನ್, ಟೌರಂಗಾ ಮತ್ತು ವೆಲ್ಲಿಂಗ್‌ಟನ್ ನಗರಗಳಲ್ಲಿ ಪಂದ್ಯಾವಳಿ ನಡೆಯಲಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತವು ಈಗಾಗಲೇ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ 2017-20 ರಲ್ಲಿ ತಮ್ಮ ಸ್ಥಾನದ ಆಧಾರದ ಮೇಲೆ ಈವೆಂಟ್‌ಗೆ ಅರ್ಹತೆ ಪಡೆದರೆ, ನ್ಯೂಜಿಲೆಂಡ್ ಆತಿಥೇಯರಾಗಿರುವುದರಿಂದ ಸ್ವಯಂಚಾಲಿತವಾಗಿ ಅರ್ಹತೆ ಪಡೆಯಿತು.
ಓಡಿಐ ತಂಡಗಳ ಶ್ರೇಯಾಂಕಗಳ ಆಧಾರದ ಮೇಲೆ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ 2021 ರ ನಂತರ ವಿಶ್ವಕಪ್‌ಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿದ ಅಂತಿಮ ಮೂರು ತಂಡಗಳಾಗಿವೆ, ಕೋವಿಡ್-ಸಂಬಂಧಿತ ಅನಿಶ್ಚಿತತೆಯ ಕಾರಣದಿಂದಾಗಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯವನ್ನು ರದ್ದುಗೊಳಿಸಲಾಯಿತು.
ಟೂರ್ನಿ ಯಾವ ರೀತಿಯಲ್ಲಿ ನಡೆಯಲಿದೆ?
ಪಂದ್ಯಾವಳಿಯನ್ನು ಲೀಗ್ ಮಾದರಿಯಲ್ಲಿ ಆಡಲಾಗುತ್ತದೆ, ಅಲ್ಲಿ ಎಲ್ಲಾ ಎಂಟು ತಂಡಗಳು ಒಮ್ಮೆ ಮುಖಾಮುಖಿಯಾಗುತ್ತವೆ, ಅದರ ಕೊನೆಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಮೊದಲ ಸೆಮಿಫೈನಲ್ ಪಂದ್ಯವನ್ನು ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ಮಾರ್ಚ್ 30 ರಂದು ಆಡಲಾಗುತ್ತದೆ ಮತ್ತು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಎರಡನೇ ಸೆಮಿ-ಫೈನಲ್ (ಮಾರ್ಚ್ 31) ನಡೆಯಲಿದೆ. ಇನ್ನು ಫೈನಲ್ (3 ಏಪ್ರಿಲ್) ಕೂಡ ಅದೇ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು, ಸೆಮಿಫೈನಲ್ ಮತ್ತು ಫೈನಲ್‌ಗಳೆರಡೂ ಮೀಸಲು ದಿನವನ್ನು ಹೊಂದಿವೆ.
ICC ಮಹಿಳಾ ಏಕದಿನ ವಿಶ್ವಕಪ್ 2022ರ ವೇಳಾಪಟ್ಟಿ
ಮಾರ್ಚ್ 4: ನ್ಯೂಜಿಲೆಂಡ್ V/S ವೆಸ್ಟ್ ಇಂಡೀಸ್, ಮೌಂಟ್ ಮೌಂಗನುಯಿ
ಮಾರ್ಚ್ 5: ಬಾಂಗ್ಲಾದೇಶ V/S ದಕ್ಷಿಣ ಆಫ್ರಿಕಾ, ಡ್ಯುನೆಡಿನ್
ಮಾರ್ಚ್ 5: ಆಸ್ಟ್ರೇಲಿಯಾ V/S ಇಂಗ್ಲೆಂಡ್, ಹ್ಯಾಮಿಲ್ಟನ್
ಮಾರ್ಚ್ 6: ಪಾಕಿಸ್ತಾನ V/S ಭಾರತ, ಮೌಂಟ್ ಮೌಂಗನುಯಿ
ಮಾರ್ಚ್ 7: ನ್ಯೂಜಿಲೆಂಡ್ V/S ಬಾಂಗ್ಲಾದೇಶ, ಡ್ಯುನೆಡಿನ್
ಮಾರ್ಚ್ 8: ಆಸ್ಟ್ರೇಲಿಯಾ V/S ಪಾಕಿಸ್ತಾನ, ಮೌಂಟ್ ಮೌಂಗನುಯಿ
ಮಾರ್ಚ್ 9: ವೆಸ್ಟ್ ಇಂಡೀಸ್ V/S ಇಂಗ್ಲೆಂಡ್, ಡ್ಯುನೆಡಿನ್
ಮಾರ್ಚ್ 10: ನ್ಯೂಜಿಲೆಂಡ್ V/S ಭಾರತ, ಹ್ಯಾಮಿಲ್ಟನ್
ಮಾರ್ಚ್ 11: ಪಾಕಿಸ್ತಾನ V/S ದಕ್ಷಿಣ ಆಫ್ರಿಕಾ, ಮೌಂಟ್ ಮೌಂಗನುಯಿ
ಮಾರ್ಚ್ 12: ವೆಸ್ಟ್ ಇಂಡೀಸ್ V/S ಭಾರತ, ಹ್ಯಾಮಿಲ್ಟನ್
ಮಾರ್ಚ್ 13: ನ್ಯೂಜಿಲೆಂಡ್ V/S ಆಸ್ಟ್ರೇಲಿಯಾ, ವೆಲ್ಲಿಂಗ್ಟನ್
ಮಾರ್ಚ್ 14: ಪಾಕಿಸ್ತಾನ V/S ಬಾಂಗ್ಲಾದೇಶ, ಹ್ಯಾಮಿಲ್ಟನ್
ಮಾರ್ಚ್ 14: ದಕ್ಷಿಣ ಆಫ್ರಿಕಾ V/S ಇಂಗ್ಲೆಂಡ್, ಮೌಂಟ್ ಮೌಂಗನುಯಿ
ಮಾರ್ಚ್ 15: ಆಸ್ಟ್ರೇಲಿಯಾ V/S ವೆಸ್ಟ್ ಇಂಡೀಸ್, ವೆಲ್ಲಿಂಗ್ಟನ್ (ಬೇಸಿನ್ ರಿಸರ್ವ್)
ಮಾರ್ಚ್ 16: ಇಂಗ್ಲೆಂಡ್ V/S ಭಾರತ, ಮೌಂಟ್ ಮೌಂಗನುಯಿ
ಮಾರ್ಚ್ 17: ನ್ಯೂಜಿಲೆಂಡ್ V/S ದಕ್ಷಿಣ ಆಫ್ರಿಕಾ, ಹ್ಯಾಮಿಲ್ಟನ್
ಮಾರ್ಚ್ 18: ಬಾಂಗ್ಲಾದೇಶ V/S ವೆಸ್ಟ್ ಇಂಡೀಸ್, ಮೌಂಟ್ ಮೌಂಗನುಯಿ
ಮಾರ್ಚ್ 19: ಭಾರತ V/S ಆಸ್ಟ್ರೇಲಿಯಾ, ಆಕ್ಲೆಂಡ್
ಮಾರ್ಚ್ 20: ನ್ಯೂಜಿಲೆಂಡ್ V/S ಇಂಗ್ಲೆಂಡ್, ಆಕ್ಲೆಂಡ್
ಮಾರ್ಚ್ 21: ವೆಸ್ಟ್ ಇಂಡೀಸ್ V/S ಪಾಕಿಸ್ತಾನ, ಹ್ಯಾಮಿಲ್ಟನ್
ಮಾರ್ಚ್ 22: ದಕ್ಷಿಣ ಆಫ್ರಿಕಾ V/S ಆಸ್ಟ್ರೇಲಿಯಾ, ವೆಲ್ಲಿಂಗ್ಟನ್
ಮಾರ್ಚ್ 22: ಭಾರತ V/S ಬಾಂಗ್ಲಾದೇಶ, ಹ್ಯಾಮಿಲ್ಟನ್
ಮಾರ್ಚ್ 24: ದಕ್ಷಿಣ ಆಫ್ರಿಕಾ V/S ವೆಸ್ಟ್ ಇಂಡೀಸ್, ವೆಲ್ಲಿಂಗ್ಟನ್ (ಬೇಸಿನ್ ರಿಸರ್ವ್)
ಮಾರ್ಚ್ 24: ಇಂಗ್ಲೆಂಡ್ V/S ಪಾಕಿಸ್ತಾನ, ಕ್ರೈಸ್ಟ್‌ಚರ್ಚ್
ಮಾರ್ಚ್ 25: ಬಾಂಗ್ಲಾದೇಶ V/S ಆಸ್ಟ್ರೇಲಿಯಾ, ವೆಲ್ಲಿಂಗ್ಟನ್ (ಬೇಸಿನ್ ರಿಸರ್ವ್)
ಮಾರ್ಚ್ 26: ನ್ಯೂಜಿಲೆಂಡ್ V/S ಪಾಕಿಸ್ತಾನ, ಕ್ರೈಸ್ಟ್‌ಚರ್ಚ್
ಮಾರ್ಚ್ 27: ಇಂಗ್ಲೆಂಡ್ V/S ಬಾಂಗ್ಲಾದೇಶ, ವೆಲ್ಲಿಂಗ್ಟನ್ (ಬೇಸಿನ್ ರಿಸರ್ವ್)
ಮಾರ್ಚ್ 27: ಭಾರತ V/S ದಕ್ಷಿಣ ಆಫ್ರಿಕಾ, ಕ್ರೈಸ್ಟ್‌ಚರ್ಚ್
ಮಾರ್ಚ್ 30: ಮೊದಲ ಸೆಮಿಫೈನಲ್, ವೆಲ್ಲಿಂಗ್ಟನ್ (ಬೇಸಿನ್ ರಿಸರ್ವ್)
ಮಾರ್ಚ್ 31: ಎರಡನೇ ಸೆಮಿಫೈನಲ್, ಕ್ರೈಸ್ಟ್‌ಚರ್ಚ್
ಏಪ್ರಿಲ್ 3: ಫೈನಲ್, ಕ್ರೈಸ್ಟ್‌ಚರ್ಚ್