ಮಹಿಳಾ ಟಿ20 ಚಾಲೆಂಜ್: ಮೂರನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಸೂಪರ್‌ನೋವಾಸ್

ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ತಂಡ ಮಹಿಳಾ ಟಿ20 ಚಾಲೆಂಜ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ 4 ರನ್‌ಗಳಿಂದ ಜಯಗಳಿಸಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೂಪರ್‌ನೋವಾಸ್ ಪ್ರಿಯಾ ಪುನಿಯ 23, ಡಿಯಾಂಡ್ರಾ ಡಾಟಿನ್ 62, ನಾಯಕಿ ಹರ್ಮನ್‌ಪ್ರೀತ್ ಕೌರ್ 43 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಗುರಿ ಬೆನ್ನತ್ತಿದ ದೀಪ್ತಿ ಶರ್ಮಾ ನಾಯಕತ್ವದ ವೆಲಾಸಿಟಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 161 ರನ್ ಗಳಿಸಿ ಸೋಲನುಭವಿಸಿತು.
ಲಾರಾ ವೊಲ್ವಾರ್ಡ್ (40 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಔಟಾಗದೆ 65) ಕೊನೆಯವರೆಗೂ ಹೋರಾಟ ನಡೆಸಿದರು. ಕೊನೆಯಲ್ಲಿ ಗೆಲುವಿಗೆ 12 ಎಸೆತಗಳಲ್ಲಿ 34 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಆದಾಗ್ಯೂ, ವೆಲಾಸಿಟಿಯ ಗುರಿಯನ್ನ ತಲುಪಲಾಗದೇ ನಾಲ್ಕು ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು.
ಕೊನೆಯ ಎಸೆತದಲ್ಲಿ ಗೆಲುವಿಗೆ ಸಿಕ್ಸರ್ ಬೇಕಿದ್ದ ಸಂದರ್ಭದಲ್ಲಿ ವೆಲಾಸಿಟಿ ಕೇವಲ ಒಂದು ರನ್‌ಗಳಿಗೆ ತೃಪ್ತಿಪಟ್ಟಿತು. ಪರಿಣಾಮ ಸೂಪರ್ ನೋವಾಸ್ 4ರನ್‌ಗಳಿಂದ ಪಂದ್ಯ ಗೆದ್ದು ಮೂರನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ತಂಡದ ಸೋಫಿ ಮತ್ತು ಡಿಯಾಂಡ್ರಾ ತಲಾ ಎರಡು ವಿಕೆಟ್ ಪಡೆದರು. ಅಲಾನಾ ಕಿಂಗ್ ಮೂರು ವಿಕೆಟ್ ಪಡೆದರು.
ಉಭಯ ತಂಡಗಳ ಪ್ಲೇಯಿಂಗ್ 11
ಸೂಪರ್‌ನೋವಾಸ್ ಪ್ಲೇಯಿಂಗ್ 11
ಪ್ರಿಯಾ ಪುನಿಯಾ, ಡಿಯಾಂಡ್ರಾ ಡಾಟಿನ್, ಹರ್ಲೀನ್ ಡಿಯೋಲ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸುನೆ ಲೂಸ್, ಪೂಜಾ ವಸ್ತ್ರಾಕರ್, ಅಲಾನಾ ಕಿಂಗ್, ಸೋಫಿ ಎಕ್ಲೆಸ್ಟೋನ್, ಮಾನ್ಸಿ ಜೋಶಿ, ರಾಶಿ ಕನೋಜಿಯಾ
ವೆಲಾಸಿಟಿ ಪ್ಲೇಯಿಂಗ್ 11
ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಕಿರಣ್ ನವಗಿರೆ, ಲಾರಾ ವೊಲ್ವಾರ್ಡ್ಟ್, ದೀಪ್ತಿ ಶರ್ಮಾ (ನಾಯಕಿ), ಸ್ನೇಹ ರಾಣಾ, ರಾಧಾ ಯಾದವ್, ಸಿಮ್ರಾನ್ ಬಹದ್ದೂರ್, ಕೇಟ್ ಕ್ರಾಸ್, ನತ್ತಕನ್ ಚಂತಮ್, ಅಯಾಬೊಂಗಾ ಖಾಕಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications