Women's T20 World Cup 2023: ಸ್ಮೃತಿ, ರಿಚಾ ಆಟ ವ್ಯರ್ಥ; ಭಾರತ ವನಿತೆಯರ ವಿರುದ್ಧ ಆಂಗ್ಲರಿಗೆ ಜಯ

ದಕ್ಷಿಣ ಆಫ್ರಿಕಾದ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ 2023ರ ಮಹಿಳಾ ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಇಂಗ್ಲೆಂಡ್ ಮಹಿಳಾ ತಂಡಕ್ಕೆ ಶರಣಾಗಿದೆ.
ಇಂಗ್ಲೆಂಡ್ ಮಹಿಳಾ ತಂಡ ನೀಡಿದ್ದ 152 ರನ್‌ಗಳ ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 ರನ್ ಮಾತ್ರ ಗಳಿಸಿತು. ಅಂತಿಮ ಓವರ್‌ನಲ್ಲಿ ಗೆಲುವಿಗೆ 31 ರನ್ ಬೇಕಿದ್ದಾಗ ರಿಚಾ ಘೋಚ್ ಮತ್ತು ಪೂಜಾ ವಸ್ತ್ರಾಕರ್ ಜೋಡಿ 19 ರನ್ ಕಲೆ ಹಾಕಿ, 11 ರನ್‌ಗಳಿಂದ ಸೋಲೊಪ್ಪಿಕೊಂಡರು.
ಭಾರತದ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 41 ಎಸೆತಗಳಲ್ಲಿ 52 ರನ್ ಬಾರಿಸಿ ಸರಾಹ್ ಗ್ಲೆನ್ ಬೌಲಿಂಗ್‌ನಲ್ಲಿ ಔಟಾದರು. ನಂತರ ಕೊನೆಯಲ್ಲಿ ಅಬ್ಬರಿಸಿದ ರಿಚಾ ಘೋಷ್ 34 ಎಸೆತಗಳಲ್ಲಿ 47 ರನ್ ಗಳಿಸಿದರು. ಆದರೆ ಗೆಲುವಿನ ಗಡಿ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಇವರಿಬ್ಬರಿಗೆ ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ದೊರಕಲಿಲ್ಲ. ಏಕೆಂದರೆ, ಇನ್ನೊಬ್ಬ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 8 ರನ್, ಜೆಮಿಮಾ ರೋಡ್ರಿಗಸ್ 13 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 4 ರನ್, ದೀಪ್ತಿ ಶರ್ಮಾ 7 ರನ್, ಪೂಜಾ ವಸ್ತ್ರಾಕರ್ 2 ರನ್ ಮಾತ್ರ ಗಳಿಸಿದರು.

ಬೌಲಿಂಗ್‌ನಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಪರ ಸರಾಹ್ ಗ್ಲೆನ್ 27 ರನ್ ನೀಡಿ 2 ವಿಕೆಟ್ ಪಡೆದರೆ, ಸೋಫಿ ಎಕ್ಲೆಸ್ಟೋನ್ ಮತ್ತು ಲಾರೆನ್ ಬೆಲ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ನಿರ್ಣಾಯಕ 50 ರನ್ ಗಳಿಸಿದ್ದ ನ್ಯಾಟ್ ಸ್ಕೈವರ್-ಬ್ರಂಟ್ ಪಂದ್ಯಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಇಂಗ್ಲೆಂಡ್ ಮಹಿಳಾ ತಂಡ ಬಿ ಗುಂಪಿನಲ್ಲಿ 6 ಅಂಕ ಗಳಿಸಿ ಅಗ್ರಸ್ಥಾನದಲ್ಲಿದೆ. ಭಾರತ ಮಹಿಳಾ ತಂಡ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೀಥರ್ ನೈಟ್ ನಾಯಕತ್ವದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತ್ತು.
ಇಂಗ್ಲೆಂಡ್ ತಂಡದ ಪರ ಬ್ಯಾಟಿಂಗ್‌ನಲ್ಲಿ ನ್ಯಾಟ್ ಸ್ಕೈವರ್-ಬ್ರಂಟ್ 42 ಎಸೆತಗಳಲ್ಲಿ 50 ರನ್ ಬಾರಿಸಿದರೆ, ಆಮಿ ಜೋನ್ಸ್ 27 ಎಸೆತಗಳಲ್ಲಿ 40 ರನ್ ಗಳಿಸಿದರು. ನಾಯಕಿ ಹೀಥರ್ ನೈಟ್ 23 ಎಸೆತಗಳಲ್ಲಿ 28 ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು.

ಇನ್ನು ಭಾರತದ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ತಮ್ಮ ಕೋಟಾದ 4 ಓವರ್‌ಗಳಲ್ಲಿ 15 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತೀಯ ರೇಣುಕಾ ಸಿಂಗ್ ಠಾಕೂರ್ ಅವರು ಪವರ್‌ಪ್ಲೇ ಒಳಗೆ ಕ್ರಮವಾಗಿ ಡ್ಯಾನಿ ವ್ಯಾಟ್ (0), ಆಲಿಸ್ ಕ್ಯಾಪ್ಸೆ (3 ರನ್) ಮತ್ತು ಸೋಫಿ ಡಂಕ್ಲೆ (10 ರನ್) ಅವರನ್ನು ರೇಣುಕಾ ಸಿಂಗ್ ಔಟ್ ಮಾಡಿದರು.
ನಂತರ, ಅಂತಿಮ ಓವರ್‌ನಲ್ಲಿ ಆಮಿ ಜೋನ್ಸ್ ಮತ್ತು ಕ್ಯಾಥರೀನ್ ಸ್ಕಿವರ್-ಬ್ರಂಟ್ ಅವರನ್ನು ರೇಣುಕಾ ಸಿಂಗ್ ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications