Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup 2023 Final: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಪಂದ್ಯದ ವಿವರ, ಸಂಭಾವ್ಯ ಆಡುವ ಬಳಗ

Womens T20 World Cup 2023 Final: Australia vs South Africa Match Details, Probable Playing 11 And Live Streaming

ಕಳೆದ ಎರಡು ವಾರಗಳಿಂದ ನಿರಂತರವಾಗಿ ನಡೆಯುತ್ತಿರುವ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯು ಅಂತಿಮ ಘಟ್ಟಕ್ಕೆ ತಲುಪಿದ್ದು, ಭಾನುವಾರ, ಫೆಬ್ರವರಿ 26ರಂದು ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಮೆಗ್ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯಾ ಮಹಿಳಾ ತಂಡ 2018 ಮತ್ತು 2022ರಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬಾರಿಯ ಐಸಿಸಿ ಪಂದ್ಯಾವಳಿ ಗೆದ್ದು, ಸತತ ಮೂರನೇ ಬಾರಿ ಹಾಗೂ ಒಟ್ಟಾರೆ ಆರನೇ ಬಾರಿಗೆ ಟ್ರೋಫಿಯನ್ನು ಗೆಲ್ಲಲು ಎದುರು ನೋಡುತ್ತಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯು 2009ರಲ್ಲಿ ಪ್ರಾರಂಭವಾಯಿತು. ಆಸ್ಟ್ರೇಲಿಯಾ ತಂಡ ಐದು ಬಾರಿ ಚಾಂಪಿಯನ್ ಆದ ದಾಖಲೆಯನ್ನು ಹೊಂದಿದೆ. ಈ ಬಾರಿ ದಕ್ಷಿಣ ಆಫ್ರಿಕಾ ಆತಿಥೇಯ ರಾಷ್ಟ್ರವಾಗಿದ್ದು, ತವರಿನ ಅನುಕೂಲವನ್ನು ಪಡೆಯಲು ಯತ್ನಿಸಲಿದೆ. ಇದೇ ವೇಳೆ, ಫೈನಲ್ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿ ಆಸ್ಟ್ರೇಲಿಯಾ ಕಣಕ್ಕಿಳಿಯಲಿದೆ.

ಮತ್ತೊಂದೆಡೆ, ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಹಂತ ತಲುಪಲು ದಕ್ಷಿಣ ಆಫ್ರಿಕಾ ಉತ್ತಮವಾಗಿ ಆಡಿದೆ. ಆತಿಥೇಯ ಮಹಿಳೆಯರು ಪಂದ್ಯಾವಳಿಯಲ್ಲಿ ಮಿಶ್ರ ಪದರ್ಶನ ನೀಡಿ ಬಂದಿದ್ದಾರೆ. ತಮ್ಮ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಎದುರು ಆಘಾತಕಾರಿ ಸೋಲಿನೊಂದಿಗೆ ಟೂರ್ನಿಯನ್ನು ಕೆಟ್ಟದಾಗಿ ಪ್ರಾರಂಭಿಸಿತ್ತು. ನಂತರದ ಪಂದ್ಯಗಳಲ್ಲಿ ಅದ್ಭುತವಾಗಿ ಕಂ-ಬ್ಯಾಕ್ ಮಾಡಿದರು.

ಪಂದ್ಯಾವಳಿಯ 2ನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು 6 ರನ್‌ಗಳಿಂದ ಸೋಲಿಸಿ ಆತಿಥೇಯ ದಕ್ಷಿಣ ಆಫ್ರಿಕಾ ಫೈನಲ್ ತಲುಪುವಲ್ಲಿ ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಟೂರ್ನಿಯಲ್ಲಿ ಫೈನಲ್‌ ಆಡಿದ ಆಫ್ರಿಕಾ ಖಂಡದ ಮೊದಲ ಮತ್ತು ಏಕೈಕ ಕ್ರಿಕೆಟ್ ತಂಡವಾಗಿದೆ. ದಕ್ಷಿಣ ಆಫ್ರಿಕಾ ಪುರುಷರ ತಂಡವು ಸೆಮಿಫೈನಲ್‌ಗೆ ತಲುಪಿರುವುದು ದೊಡ್ಡ ಸಾಧನೆಯಾಗಿದೆ.

ಲೀಗ್ ಹಂತದಲ್ಲಿ ಅಜೇಯವಾಗಿ ನಾಕೌಟ್ ಹಂತ ತಲುಪಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ, 1ನೇ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ.

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯದ ವಿವರ
ಸ್ಥಳ ಮತ್ತು ದಿನಾಂಕ: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯವು ಭಾನುವಾರ, ಫೆಬ್ರವರಿ 26ರಂದು ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಪಂದ್ಯದ ಸಮಯ: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಪ್ರಾರಂಭವಾಗುತ್ತದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್: ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಫೈನಲ್ ಪಂದ್ಯವು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಾಗಲಿದ್ದರೆ, ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ಸಂಭಾವ್ಯ ಆಡುವ 11ರ ಬಳಗ
ಆಸ್ಟ್ರೇಲಿಯಾ ತಂಡ: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಆಶ್ಲೀಗ್ ಗಾರ್ಡ್ನರ್, ಎಲ್ಲಿಸ್ ಪೆರ್ರಿ, ತಾಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೇರ್‌ಹ್ಯಾಮ್, ಜೆಸ್ ಜೊನಾಸೆನ್, ಮೇಗನ್ ಶುಟ್, ಡಾರ್ಸಿ ಬ್ರೌನ್.

ದಕ್ಷಿಣ ಆಫ್ರಿಕಾದ ತಂಡ: ಲಾರಾ ವೊಲ್ವಾರ್ಡ್ಟ್, ತಜ್ಮಿನ್ ಬ್ರಿಟ್ಸ್, ಮರಿಜಾನ್ನೆ ಕಪ್, ಸುನೆ ಲೂಸ್ (ನಾಯಕಿ), ಕ್ಲೋಯ್ ಟ್ರಯಾನ್, ಡೆಲ್ಮಿ ಟಕರ್, ನಾಡಿನ್ ಡಿ ಕ್ಲರ್ಕ್, ಸಿನಾಲೊ ಜಫ್ತಾ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಅಯಾಬೊಂಗಾ ಖಾಕಾ, ನಾನ್ಕುಲುಲೆಕೊ ಮ್ಲಾಬಾ.

Story first published: Sunday, February 26, 2023, 11:37 [IST]
Other articles published on Feb 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+