Women's T20 World Cup 2023: ಭಾರತ vs ಐರ್ಲೆಂಡ್ ಪಂದ್ಯದ ವಿವರ, ಆಡುವ 11ರ ಬಳಗ, ನೇರಪ್ರಸಾರ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಅಜೇಯ ಗೆಲುವಿನ ಓಟಕ್ಕೆ ಇಂಗ್ಲೆಂಡ್ ಮಹಿಳೆಯರು ಬ್ರೇಕ್ ಹಾಕಿದರು. ಇದೀಗ ಸೋಮವಾರ, ಫೆಬ್ರವರಿ 20ರಂದು ನಡೆಯಲಿರುವ ಐರ್ಲೆಂಡ್ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.
15 ರನ್‌ಗಳಿಗೆ 5 ವಿಕೆಟ್ ಕಬಳಿಸಿದ ರೇಣುಕಾ ಸಿಂಗ್ ಠಾಕೂರ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಇಂಗ್ಲೆಂಡ್ ಮಹಿಳಾ ತಂಡ, ಆರಂಭದಲ್ಲಿ ಮೂರು ವಿಕೆಟ್‌ಗೆ 29 ರನ್‌ಗಳಿಗೆ ಕುಸಿತ ಕಂಡಿದ್ದರೂ, ಭಾರತ ಮಹಿಳಾ ತಂಡ ಆಂಗ್ಲ ಮಹಿಳೆಯರ ರಕ್ಷಣಾತ್ಮಕ ಆಟ ತಡೆಯಲು ಸಾಧ್ಯವಾಗಲಿಲ್ಲ. ಭಾರತಕ್ಕೆ 152 ರನ್‌ಗಳ ಸವಾಲಿನ ಗುರಿ ನೀಡಿತು.
ಪ್ರತ್ಯುತ್ತರವಾಗಿ, ಭಾರತ ತಂಡದ ಮಹಿಳೆಯರು 140 ರನ್ ಮಾತ್ರ ಗಳಿಸಲಷ್ಟೆ ಶಕ್ತರಾದರು ಮತ್ತು 11 ರನ್‌ಗಳ ಸೋಲು ಕಂಡರು. ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರ ಆಟ ವ್ಯರ್ಥವಾಯಿತು. ಮತ್ತೊಂದು ತುದಿಯಿಂದ ಅವರಿಗೆ ಉತ್ತಮ ಬೆಂಬಲ ದೊರೆಯಲಿಲ್ಲ.
ಭಾರತ ಮಹಿಳಾ ತಂಡದ ಫೀಲ್ಡಿಂಗ್ ಕೋಚ್ ಸುಭದೀಪ್ ಘೋಷ್ ಅವರು ಯಾವುದೇ ಭಯ ಅಥವಾ ದೊಡ್ಡ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
"ಇಂಗ್ಲೆಂಡ್ ವಿರುದ್ಧದ ಪಂದ್ಯವು ಉತ್ತಮ ಪಂದ್ಯವಾಗಿತ್ತು. ಎರಡೂ ತಂಡಗಳು ಉತ್ತಮವಾಗಿ ಆಡಿದವು ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ 150 ರನ್ ಚೇಸ್ ಮಾಡಬಹುದಾಗಿತ್ತು ಮತ್ತು ನಾವು 20 ಓವರ್‌ಗಳ ಆಟ ಆಡಿದೆವು. ಒಂದು ಅಥವಾ ಎರಡು ಸಿಕ್ಸರ್ ಬಂದಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು," ಎಂದು ಶುಭದೀಪ್ ಘೋಷ್ ಭಾನುವಾರ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇತ್ತ ಐರ್ಲೆಂಡ್ ತಂಡದ ನಾಯಕಿ ಲಾರಾ ಡೆಲಾನಿ ಅವರು ಸೋಮವಾರ ಭಾರತದ ವಿರುದ್ಧ ಆಡುವುದರ ಮೂಲಕ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023 ಅಭಿಯಾನವನ್ನು ಕೊನೆಗೊಳಿಸುವುದರಿಂದ ತಮ್ಮ ಕಡೆಯಿಂದ ಉತ್ತಮ ಪ್ರದರ್ಶನ ಬರಲಿದೆ ಎಂದು ಭರವಸೆ ನೀಡಿದ್ದಾರೆ.
ಭಾರತ vs ಐರ್ಲೆಂಡ್ ಪಂದ್ಯದ ವಿವರ
ಸ್ಥಳ ಮತ್ತು ದಿನಾಂಕ: ಭಾರತ ಮಹಿಳಾ ತಂಡ ಮತ್ತು ಐರ್ಲೆಂಡ್ ಮಹಿಳಾ ತಂಡದ ಟಿ20 ವಿಶ್ವಕಪ್ 2023 ಪಂದ್ಯವು ಫೆಬ್ರವರಿ 20, ಸೋಮವಾರದಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆಯಲಿದೆ.
ಪಂದ್ಯದ ಸಮಯ: ಭಾರತ vs ಐರ್ಲೆಂಡ್ ಟಿ20 ವಿಶ್ವಕಪ್ 2023 ಪಂದ್ಯವು ಭಾರತೀಯ ಕಾಲಮಾನ ಸಂಜೆ 6.30 ಕ್ಕೆ ಪ್ರಾರಂಭವಾಗುತ್ತದೆ. ಸಂಜೆ 6 ಗಂಟೆಗೆ ಟಾಸ್ ನಡೆಯಲಿದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್: ಭಾರತ vs ಐರ್ಲೆಂಡ್ ಟಿ20 ವಿಶ್ವಕಪ್ 2023 ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದ್ದರೆ, ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.
ಭಾರತ vs ಐರ್ಲೆಂಡ್ ಮಹಿಳಾ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್.
ಐರ್ಲೆಂಡ್ ತಂಡ: ಆಮಿ ಹಂಟರ್, ಜಿಎಚ್ ಲೆವಿಸ್, ಎಲ್ ಲಿಟಲ್, ಒ ಪ್ರೆಂಡರ್‌ಗಾಸ್ಟ್, ಇಎಜೆ ರಿಚರ್ಡ್‌ಸನ್, ಎಎನ್ ಕೆಲ್ಲಿ, ಲಾರಾ ಡೆಲಾನಿ (ನಾಯಕಿ), ಎಲ್ ಪಾಲ್, ಎಂವಿ ವಾಲ್ಡ್ರಾನ್, ಕಾರಾ ಮರ್ರೆ, ಜೇನ್ ಮ್ಯಾಗೈರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications