Women's T20 World Cup 2023: ರೇಣುಕಾ ಸಿಂಗ್‌ಗೆ 5 ವಿಕೆಟ್; ಭಾರತಕ್ಕೆ ಸವಾಲಿನ ಗುರಿ ನೀಡಿದ ಇಂಗ್ಲೆಂಡ್

ದಕ್ಷಿಣ ಆಫ್ರಿಕಾದ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ 2023ರ ಮಹಿಳಾ ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಬಲಿಷ್ಠ ಇಂಗ್ಲೆಂಡ್ ಮಹಿಳಾ ತಂಡವನ್ನು ಎದುರಿಸುತ್ತಿದೆ.
ಮಹಿಳಾ ಟಿ20 ವಿಶ್ವಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೀಥರ್ ನೈಟ್ ನಾಯಕತ್ವದ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದ್ದು, ಭಾರತೀಯ ಮಹಿಳಾ ತಂಡಕ್ಕೆ 152 ರನ್‌ಗಳ ಗುರಿ ನೀಡಿದೆ.
ಇಂಗ್ಲೆಂಡ್ ತಂಡದ ಪರ ಬ್ಯಾಟಿಂಗ್‌ನಲ್ಲಿ ನ್ಯಾಟ್ ಸ್ಕೈವರ್-ಬ್ರಂಟ್ 42 ಎಸೆತಗಳಲ್ಲಿ 50 ರನ್ ಬಾರಿಸಿದರೆ, ಆಮಿ ಜೋನ್ಸ್ 27 ಎಸೆತಗಳಲ್ಲಿ 40 ರನ್ ಗಳಿಸಿದರು. ನಾಯಕಿ ಹೀಥರ್ ನೈಟ್ 23 ಎಸೆತಗಳಲ್ಲಿ 28 ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು.

ಇನ್ನು ಭಾರತದ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ತಮ್ಮ ಕೋಟಾದ 4 ಓವರ್‌ಗಳಲ್ಲಿ 15 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತೀಯ ರೇಣುಕಾ ಸಿಂಗ್ ಠಾಕೂರ್ ಅವರು ಪವರ್‌ಪ್ಲೇ ಒಳಗೆ ಕ್ರಮವಾಗಿ ಡ್ಯಾನಿ ವ್ಯಾಟ್ (0), ಆಲಿಸ್ ಕ್ಯಾಪ್ಸೆ (3 ರನ್) ಮತ್ತು ಸೋಫಿ ಡಂಕ್ಲೆ (10 ರನ್) ಅವರನ್ನು ರೇಣುಕಾ ಔಟ್ ಮಾಡಿದರು.
ನಂತರ ಆಮಿ ಜೋನ್ಸ್ ಮತ್ತು ಕ್ಯಾಥರೀನ್ ಸ್ಕಿವರ್-ಬ್ರಂಟ್ ಅವರನ್ನು ಅಂತಿಮ ಓವರ್‌ನಲ್ಲಿ ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿ ಇಂಗ್ಲೆಂಡ್‌ಗೆ ಹಿನ್ನಡೆ ತಂದಿತ್ತರು.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಡುವ 11ರ ಬಳಗ
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ರಾಧಾ ಯಾದವ್, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್.
ಇಂಗ್ಲೆಂಡ್: ಸೋಫಿಯಾ ಡಂಕ್ಲಿ, ಡ್ಯಾನಿ ವ್ಯಾಟ್, ಆಲಿಸ್ ಕ್ಯಾಪ್ಸೆ, ನ್ಯಾಟ್ ಸ್ಕೈವರ್-ಬ್ರಂಟ್, ಹೀಥರ್ ನೈಟ್ (ನಾಯಕಿ), ಆಮಿ ಜೋನ್ಸ್ (ವಿಕೆಟ್ ಕೀಪರ್), ಕ್ಯಾಥರೀನ್ ಸ್ಕೈವರ್-ಬ್ರಂಟ್, ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್, ಸಾರಾ ಗ್ಲೆನ್, ಲಾರೆನ್ ಬೆಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications