Women's T20 World Cup: ಭಾರತ vs ಐರ್ಲೆಂಡ್ ಪಂದ್ಯದ ಟಾಸ್ ವಿವರ, ಆಡುವ 11ರ ಬಳಗ & ಲೈವ್ ಸ್ಕೋರ್

2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನ ಲೀಗ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಮತ್ತು ಐರ್ಲೆಂಡ್ ಮಹಿಳಾ ತಂಡಗಳು ಸೋಮವಾರ, ಫೆಬ್ರವರಿ 20ರಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಸೆಣಸಾಡುತ್ತಿವೆ.
ಟಾಸ್ ಗೆದ್ದು ಭಾರತ ಮಹಿಳಾ ತಂಡದ ನಾಯಕಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಹೀಗಾಗಿ ಲಾರಾ ಡೆಲಾನಿ ನಾಯಕತ್ವದ ಐರ್ಲೆಂಡ್ ತಂಡ ಮೊದಲು ಬೌಲಿಂಗ್ ಮಾಡಲಿದೆ.
ಭಾರತದ ಅಜೇಯ ಗೆಲುವಿನ ಓಟಕ್ಕೆ ಇಂಗ್ಲೆಂಡ್ ಮಹಿಳೆಯರು ಬ್ರೇಕ್ ಹಾಕಿದರು. ಇದೀಗ ಐರ್ಲೆಂಡ್ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.

15 ರನ್‌ಗಳಿಗೆ 5 ವಿಕೆಟ್ ಕಬಳಿಸಿದ ರೇಣುಕಾ ಸಿಂಗ್ ಠಾಕೂರ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಇಂಗ್ಲೆಂಡ್ ಮಹಿಳಾ ತಂಡ, ಆರಂಭದಲ್ಲಿ ಮೂರು ವಿಕೆಟ್‌ಗೆ 29 ರನ್‌ಗಳಿಗೆ ಕುಸಿತದ ನಡುವೆಯೂ, ಭಾರತ ಮಹಿಳಾ ತಂಡ ಆಂಗ್ಲ ಮಹಿಳೆಯರ ರಕ್ಷಣಾತ್ಮಕ ಆಟ ತಡೆಯಲಾಗಲಿಲ್ಲ ಮತ್ತು ಭಾರತಕ್ಕೆ 152 ರನ್‌ಗಳ ಸವಾಲಿನ ಗುರಿ ನೀಡಿತು.
ಪ್ರತ್ಯುತ್ತರವಾಗಿ, ಭಾರತ ತಂಡದ ಮಹಿಳೆಯರು 140 ರನ್ ಮಾತ್ರ ಗಳಿಸಲಷ್ಟೆ ಶಕ್ತರಾದರು ಮತ್ತು 11 ರನ್‌ಗಳ ಸೋಲು ಕಂಡರು. ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಅವರ ಆಟ ವ್ಯರ್ಥವಾಯಿತು. ಮತ್ತೊಂದು ತುದಿಯಿಂದ ಅವರಿಗೆ ಉತ್ತಮ ಬೆಂಬಲ ದೊರೆತಿರಲಿಲ್ಲ.
ಭಾರತ vs ಐರ್ಲೆಂಡ್ ಮಹಿಳಾ ತಂಡಗಳ ಆಡುವ 11ರ ಬಳಗ
ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ಐರ್ಲೆಂಡ್ ತಂಡ: ಆಮಿ ಹಂಟರ್, ಗೇಬಿ ಲೆವಿಸ್, ಓರ್ಲಾ ಪ್ರೆಂಡರ್‌ಗಾಸ್ಟ್, ಐಮಿಯರ್ ರಿಚರ್ಡ್‌ಸನ್, ಲೂಯಿಸ್ ಲಿಟಲ್, ಲಾರಾ ಡೆಲಾನಿ(ನಾಯಕಿ), ಅರ್ಲೀನ್ ಕೆಲ್ಲಿ, ಮೇರಿ ವಾಲ್ಡ್ರಾನ್(ವಿಕೆಟ್ ಕೀಪರ್), ಲೇಹ್ ಪಾಲ್, ಕಾರಾ ಮುರ್ರೆ, ಜಾರ್ಜಿನಾ ಡೆಂಪ್ಸೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications