Women's T20 World Cup 2023: ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ವನಿತೆಯರಿಗೆ 3 ರನ್‌ಗಳ ರೋಚಕ ಜಯ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಶ್ರೀಲಂಕಾ ಮಹಿಳಾ ತಂಡ ಆಘಾತ ನೀಡಿದ್ದು, 3 ರನ್‌ಗಳ ರೋಚಕ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 129 ರನ್ ಕಲೆಹಾಕಿತು. ನಂತರ 130 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಗಳಿಸಲಷ್ಟೆ ಶಕ್ತವಾಯಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ, ನಾಯಕಿ ಚಾಮರಿ ಅಥಾಪತ್ತು ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದರು. 50 ಎಸೆತಗಳಲ್ಲಿ 12 ಬೌಂಡರಿಗಳ ಸಮೇತ 68 ರನ್ ಗಳಿಸಿ ತಂಡಕ್ಕೆ ನೆರವಾದರು.
Women's T20 World Cup 2023: ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯಕ್ಕೆ ಸ್ಮೃತಿ ಮಂಧಾನ ಅನುಮಾನ!
ಇನ್ನು 17 ವರ್ಷದ ವಿಶ್ಮಿ ಗುಣರತ್ನೆ ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ಕೊಡುಗೆ ನೀಡಿದರು. 34 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ 35 ರನ್ ಬಾರಿಸಿದರು. ಚಾಮರಿ ಅಥಾಪತ್ತು ಮತ್ತು ವಿಶ್ಮಿ ಗುಣರತ್ನೆ ಜೋಡಿ ಎರಡನೇ ವಿಕೆಟ್‌ಗೆ 86 ರನ್‌ಗಳ ಜೊತೆಯಾಟ ನೀಡಿದರು.
ಉಳಿದಂತೆ ಆರಂಭಿಕ ಆಟಗಾರ್ತಿ ಮಾದವಿ 8 ರನ್ ಗಳಿಸಿದರೆ, ಅನುಷ್ಕಾ ಸಂಜೀವ್ 5 ರನ್, ನಿಲಾಕ್ಷಿ ಡಿ ಸಿಲ್ವಾ 4 ರನ್ ಮತ್ತು ಅಮಾ ಕಾಂಚನಾ 4 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಶಬ್ನಿಮ್ ಇಸ್ಮಾಯಿಲ್, ಮಾರಿಜಾನ್ನೆ ಕಾಪ್ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

130 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆತಿಥೇಯ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಪರ ಲಾರಾ ವೊಲ್ವಾರ್ಡ್ಟ್ 18 ರನ್, ತಜ್ಮಿನ್ ಬ್ರಿಟ್ಸ್ 12 ರನ್, ಅನ್ನೆಕೆ ಬಾಷ್ 0, ಸುನೆ ಲೂಸ್ 28 ರನ್, ಕ್ಲೋಯ್ ಟ್ರಯಾನ್ 10 ರನ್, ನಾಡಿನ್ ಡಿ ಕ್ಲರ್ಕ್ 7 ರನ್, ಸಿನಾಲೊ ಜಫ್ತಾ 15 ರನ್, ಮರಿಝನ್ನೆ ಕಾಪ್ 11 ರನ್, ಶಬ್ನಿಮ್ ಇಸ್ಮಾಯಿಲ್ 7 ರನ್, ಅಯಾಬೊಂಗಾ ಖಾಕಾ 1 ರನ್ ಗಳಿಸಿದರು. ಅಂತಿಮವಾಗಿ 3 ರನ್‌ಗಳಿಂದ ಆತಿಥೇಯ ತಂಡ ಶರಣಾಯಿತು.
ಶ್ರೀಲಂಕಾ ಪರ ಬೌಲಿಂಗ್‌ನಲ್ಲಿ ಇನೋಕಾ ರಣವೀರ 3 ವಿಕೆಟ್ ಪಡೆದು ಮಿಂಚಿದರೆ, ಸುಗಂದಿಕಾ ಕುಮಾರಿ ಮತ್ತು ಓಶಾದಿ ರಣಸಿಂಘೆ ತಲಾ ಎರಡು ವಿಕೆಟ್ ಪಡೆದರು. 68 ರನ್ ಗಳಿಸಿದ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಪತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಮೂಲಕ ಶ್ರೀಲಂಕಾ ತಂಡ ಅಮೂಲ್ಯ 2 ಅಂಕಗಳನ್ನು ಗಳಿಸಿ, ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications