Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Women's T20 World Cup: ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆಗೈದ ಮೊದಲ ಭಾರತೀಯಳಾದ ದೀಪ್ತಿ ಶರ್ಮಾ!

Womens T20 World Cup: Deepti Sharma Become The 1st Indian Bowler To Take 100 Wickets In T20 Cricket

ಬುಧವಾರ, ಫೆಬ್ರವರಿ 15ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತರಿರುವ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನ ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಮುಖಾಮುಖಿಯಲ್ಲಿ ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ದೊಡ್ಡ ಮೈಲುಗಲ್ಲು ಸ್ಥಾಪಿಸಿದರು.

ದೀಪ್ತಿ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದರು. ಟೀಂ ಇಂಡಿಯಾದ ಆಫ್ ಬ್ರೇಕ್ ಬೌಲರ್ ದೀಪ್ತಿ ಶರ್ಮಾ 2023ರ ಭಾರತದ ಟಿ20 ವಿಶ್ವಕಪ್‌ನ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೇಯ್ಲಿ ಮ್ಯಾಥ್ಯೂಸ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಈ ಸಾಧನೆ ಮಾಡಿದರು.

ICC Test Rankings: ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತೀಯರದ್ದೇ ಪಾರುಪತ್ಯ; ಏರಿಕೆ ಕಂಡ ಅಕ್ಷರ್ ಪಟೇಲ್!

ಇದಕ್ಕೂ ಮುನ್ನ 72 ಪಂದ್ಯಗಳಿಂದ 98 ವಿಕೆಟ್‌ಗಳನ್ನು ಪಡೆದಿದ್ದ ಲೆಗ್ ಸ್ಪಿನ್ನರ್ ಪೂನಂ ಯಾದವ್ ಅವರನ್ನು ಹಿಂದಿಕ್ಕಿ, ದೀಪ್ತಿ ಶರ್ಮಾ ಭಾರತದ ಪರ ಹೊಸ ದಾಖಲೆ ನಿರ್ಮಿಸಿದರು.

ಟಿ20 ಕ್ರಿಕೆಟ್‌ನಲ್ಲಿ ದೀಪ್ತಿ ಶರ್ಮಾ 100 ವಿಕೆಟ್ ಸಾಧನೆ

ಟಿ20 ಕ್ರಿಕೆಟ್‌ನಲ್ಲಿ ದೀಪ್ತಿ ಶರ್ಮಾ 100 ವಿಕೆಟ್ ಸಾಧನೆ

ದೀಪ್ತಿ ಶರ್ಮಾ ಅವರು 100 ವಿಕೆಟ್ ಸಾಧನೆ ಮೂಲಕ ಪೂನಂ ಯಾದವ್ (98 ವಿಕೆಟ್), ರಾಧಾ ಯಾದವ್ (67 ವಿಕೆಟ್), ರಾಜೇಶ್ವರಿ ಗಾಯಕ್ವಾಡ್ (58 ವಿಕೆಟ್), ಜೂಲನ್ ಗೋಸ್ವಾಮಿ (56 ವಿಕೆಟ್) ಮತ್ತು ಏಕ್ತಾ ಬಿಸ್ಟ್ (53 ವಿಕೆಟ್) ಅವರನ್ನು ಹಿಂದಿಕ್ಕಿದರು.

ದೀಪ್ತಿ ಶರ್ಮಾ ಅವರು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿದರೆ, ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ಅನಿಸಾ ಮೊಹಮ್ಮದ್, ನಿದಾ ದಾರ್, ಎಲ್ಲಿಸ್ ಪೆರ್ರಿ, ಶಬ್ನಿಮ್ ಇಸ್ಮಾಯಿಲ್, ಮೇಗನ್ ಶುಟ್, ಕ್ಯಾಥರೀನ್ ಬ್ರಂಟ್, ಸೋಫಿ ಡಿವೈನ್ ಹಾಗೂ ಅನ್ಯಾ ಶ್ರಬ್ಸೋಲ್ ನಂತರ ಶತಕದ ವಿಕೆಟ್ ಸಾಧನೆ ಮಾಡಿದ ಒಂಬತ್ತನೇ ಬೌಲರ್ ಆದರು.

ಯುಜ್ವೇಂದ್ರ ಚಹಾಲ್ 75 ಪಂದ್ಯಗಳಿಂದ 91 ವಿಕೆಟ್‌

ಯುಜ್ವೇಂದ್ರ ಚಹಾಲ್ 75 ಪಂದ್ಯಗಳಿಂದ 91 ವಿಕೆಟ್‌

ಇನ್ನು ಭಾರತ ಪುರುಷರ ಕ್ರಿಕೆಟ್ ತಂಡದಲ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ 75 ಪಂದ್ಯಗಳಿಂದ 91 ವಿಕೆಟ್‌ಗಳೊಂದಿಗೆ ಭಾರತದ ಪರ ಮೊದಲ ಸ್ಥಾನದಲ್ಲಿದ್ದಾರೆ. ವೇಗಿ ಭುವನೇಶ್ವರ್ ಕುಮಾರ್ 87 ಪಂದ್ಯಗಳಿಂದ 90 ವಿಕೆಟ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಎರಡು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಹರಾಜಿನಲ್ಲಿ 25 ವರ್ಷದ ದೀಪ್ತಿ ಶರ್ಮಾ 2.6 ಕೋಟಿ ರೂ.ಗೆ ಯುಪಿ ವಾರಿಯರ್ಸ್ ಫ್ರಾಂಚೈಸ್ ತಂಡವನ್ನು ಸೇರಿದರು.

ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ವರದಿ

ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದ ವರದಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೀಲಿ ಮ್ಯಾಥ್ಯೂಸ್ ನಾಯಕತ್ವದ ವೆಸ್ಟ್ ಇಂಡೀಸ್ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದು, ಭಾರತ ಮಹಿಳಾ ತಂಡಕ್ಕೆ 119 ರನ್‌ಗಳ ಸಾಧಾರಣ ಗುರಿ ನೀಡಿದೆ.

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡದ ಬಿಗಿ ಬೌಲಿಂಗ್ ಪ್ರದರ್ಶನಕ್ಕೆ ನಿರುತ್ತರರಾದ ವೆಸ್ಟ್ ಇಂಡೀಸ್‌ ಬ್ಯಾಟರ್‌ಗಳು ಕಡಿಮೆ ಮೊತ್ತಕ್ಕೆ ನಿಯಂತ್ರಣಗೊಂಡರು.

ವೆಸ್ಟ್ ಇಂಡೀಸ್ ತಂಡದ ಪರ ಬ್ಯಾಟಿಂಗ್‌ನಲ್ಲಿ ಸ್ಟೆಫಾನಿ ಟೇಲರ್ (42 ರನ್), ಶೆಮೈನ್ ಕ್ಯಾಂಪ್‌ಬೆಲ್ಲೆ (30 ರನ್), ಚೆಡಿಯನ್ ನೇಷನ್ (21 ರನ್) ಮತ್ತು ಶಬಿಕಾ ಗಜ್ನಾಬಿ (15 ರನ್) ಗಳಿಸಿದ್ದು ಬಿಟ್ಟರೆ ಉಳಿದರಾರು ಎರಡಂಕಿ ಮೊತ್ತ ಗಳಿಸಲಿಲ್ಲ.

ಇನ್ನು ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಸ್ಪಿನ್ನರ್ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 15 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರೇಣುಕಾ ಸಿಂಗ್ ಠಾಕೂರ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Wednesday, February 15, 2023, 21:16 [IST]
Other articles published on Feb 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+