ಮಹಿಳಾ ವಿಶ್ವಕಪ್: ಭಾರತ ವನಿತೆಯರಿಗೆ ಸತತ 4ನೇ ಜಯ
ಡರ್ಬಿ (ಇಂಗ್ಲೆಂಡ್), ಜುಲೈ 06 : ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ವನಿತೆಯರು ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಜಯದೊಂದಿಗೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದರು.
ಇಲ್ಲಿನ ಕೌಂಟಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಿಥಾಲಿರಾಜ್ ನೇತೃತ್ವದ ಭಾರತ ತಂಡ ಶ್ರೀಲಂಕಾವನ್ನು 16 ರನ್‌ಗಳಿಂದ ಮಣಿಸಿತು.

ಮೊದಲು ಬ್ಯಾಟ್ ಮಾಡಿ ಭಾರತ, ದೀಪ್ತಿ ಶರ್ಮ ಮತ್ತು ಮಿಥಾಲಿ ರಾಜ್ ಅವರ ಅರ್ಧಶತಕದ ನೆರವಿನಿಂದ 8 ವಿಕೆಟಿಗೆ 232 ರನ್ ಗಳ ಉತ್ತಮ ಮೊತ್ತ ಪೇರಿಸಿತು.
ಗೆಲುವಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ವಿಕೆಟಿಗೆ 217 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲವು ಸಾಧಿಸಿತು. ಈ ಮೊದಲು ನಡೆದ ಪಂದ್ಯಗಳಲ್ಲಿ ಭಾರತವು ಆತಿಥೇಯ ಇಂಗ್ಲೆಂಡ್, ವೆಸ್ಟ್‌ಇಂಡೀಸ್ ಮತ್ತು ಪಾಕಿಸ್ಥಾನವನ್ನು ಸೋಲಿಸಿತ್ತು.
ಸಂಕ್ಷಿಪ್ತ ಸ್ಕೋರು:
ಭಾರತ ವನಿತೆಯರು: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 232 (ದೀಪ್ತಿ ಶರ್ಮಾ 78, ಮಿಥಾಲಿ ರಾಜ್ 53, ಹರ್ಮನ್ ಪ್ರೀತ್ ಕೌರ್ 20, ವೇದಾ ಕೃಷ್ಣಮೂರ್ತಿ 29; ಶ್ರೀಪಾಲಿ ವೀರಕ್ಕೊಡಿ 28ಕ್ಕೆ3, ಇನೋಕ ರಣವೀರ 55ಕ್ಕೆ2).
ಶ್ರೀಲಂಕಾ ವನಿತೆಯರು: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 216 (ನಿಪುಣಿ ಹಂಸಿಕಾ 29, ಶಶಿಕಲಾ ಸಿರಿವರ್ಧನೆ 37, ದಿಲಾನಿ ಮನೋದರ 61, ಪ್ರಸಾದನಿ ವೀರಕ್ಕೋಡಿ 21; ಜೂಲನ್ ಗೋಸ್ವಾಮಿ 26ಕ್ಕೆ2, ಪೂನಮ್ ಯಾದವ್ 23ಕ್ಕೆ2). ಫಲಿತಾಂಶ-ಭಾರತ ವನಿತೆಯರಿಗೆ 16 ರನ್‌ಗಳ ಜಯ. ಪಂದ್ಯಶ್ರೇಷ್ಠ-ದೀಪ್ತಿ ಶರ್ಮಾ (ಭಾರತ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications