ಟೌಂಟಾನ್, ಜೂನ್ 30 : ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ(106) ಅವರ ಅಮೋಘ ಶತಕದ ಬಲದಿಂದ ಭಾರತ ತಂಡ ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯಗಳಿಸಿತು.
ಗುರುವಾರ ಕೌಂಟಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಕೆರಿಬಿಯನ್ ವನಿತೆಯರು 50 ಓವರ್‌ಗಳಲ್ಲಿ 8 ವಿಕೆಟ್ ಗೆ 183ರನ್ ಕಲೆಹಾಕಿತು. ಸುಲಭ ಗುರಿಯನ್ನು ಬೆನ್ನಟ್ಟಿದ ಮಿಥಾಲಿ ರಾಜ್ ಪಡೆ 42.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

184 ರನ್ ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಬೇಕಾಯಿತು. ಟೀಂ ರನ್ ಶುಭಾರಂಭ ಮಾಡುವಷ್ಟರಲ್ಲೇ ಶೂನ್ಯಕ್ಕೆ ಪೂನಂ ರಾವತ್ ಔಟಾದರು.
ಇದಾದ ನಂತರ ಬ್ಯಾಟಿಂಗ್ ಮಾಡಲು ಆಗಮಿಸಿದ ದೀಪ್ತಿ ಶರ್ಮಾ ಕೇವಲ 6 ರನ್ ಗಳಿಸಿ ಔಟಾದರು. ನಂತರ ಆಗಮಿಸಿದ ನಾಯಕಿ ಮಿಥಾಲಿ ರಾಜ್ ಆರಂಭಿಕ ಆಟಗಾರ್ತಿ ಸ್ಮಿತಾ ಮಂಧನ ಜೊತೆಗೆ ಉತ್ತಮ ಜೊತೆಯಾಟ ನೀಡಿದರು.
ಸ್ಮಿತಾ ಮಂಧನ 108 ಎಸೆತಗಳಲ್ಲಿ 13ಬೌಂಡರಿ ಮತ್ತು 2ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ವಿಂಡೀಸ್ ತಂಡ ದೀಪ್ತಿ ಶರ್ಮಾ (27ಕ್ಕೆ2), ಪೂನಂ ಯಾದವ್ (19ಕ್ಕೆ2) ಮತ್ತು ಹರ್ಮನ್ ಪ್ರೀತ್ ಕೌರ್ (42ಕ್ಕೆ2) ಅವರ ದಾಳಿಗೆ ಕಂಗೆಟ್ಟಿತು.
ಹೇಲಿ ಮ್ಯಾಥ್ಯೂಸ್ 43, ಶಾನೆಲ್ ಡೆಲೆ 33 ಮತ್ತು ಆಯಫಿ ಫ್ಲೆಚರ್ ಔಟಾಗದೆ 36 ರನ್ ನೆರವನಿಂದ ಅಂತಿಮವಾಗಿ ವಿಂಡೀಸ್ 183 ರನ್ ಗಳ ಸಾಧಾರಣ ಮೊತ್ತದ ಗೆಲುವಿನ ಗುರಿ ನೀಡಿತು.
ಸ್ಕೋರ್
ವೆಸ್ಟ್ ಇಂಡೀಸ್ 8ಕ್ಕೆ 183 (50 ಓವರ್‌ಗಳಲ್ಲಿ)
ಭಾರತ 3ಕ್ಕೆ186 (42.3 ಓವರ್‌ಗಳಲ್ಲಿ)
ಫಲಿತಾಂಶ: ಭಾರತಕ್ಕೆ 7 ವಿಕೆಟ್ ಗೆಲುವು.