Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಿಳಾ ವಿಶ್ವಕಪ್‌ ಫೈನಲ್: 138 ಎಸೆತಕ್ಕೆ 170 ರನ್ ಚಚ್ಚಿದ ಹೀಲಿ; ಇಂಗ್ಲೆಂಡ್‌ಗೆ ಕಠಿಣ ಗುರಿ ನೀಡಿದ ಆಸ್ಟ್ರೇಲಿಯಾ

Womens World Cup 2022 Final: Australia women set 357 runs target for England Women

ಮಾರ್ಚ್ 4ರಂದು ಆರಂಭವಾಗಿದ್ದ ಮಹಿಳಾ ವಿಶ್ವಕಪ್ ಟೂರ್ನಿ ಇಂದಿಗೆ ಕೊನೆಯಾಗುತ್ತಿದೆ. ಇಂದು ( ಏಪ್ರಿಲ್ 3 ) ಟೂರ್ನಿಯ ಫೈನಲ್ ಪಂದ್ಯ ನಡೆಯುತ್ತಿದ್ದು, ಎರಡು ಬಲಿಷ್ಠ ತಂಡಗಳಾದ ಇಂಗ್ಲೆಂಡ್ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳು ಸೆಣಸಾಟ ನಡೆಸುತ್ತಿವೆ.

ನ್ಯೂಜಿಲೆಂಡ್‌ನ ಕ್ರಿಸ್ಟ್ ಚರ್ಚ್ ಹ್ಯಾಗ್ಲೆ ಓವಲ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ವನಿತೆಯರ ತಂಡ ಬೌಲಿಂಗ್‌ ಆಯ್ದುಕೊಂಡಿದ್ದು, ಎದುರಾಳಿ ಆಸ್ಟ್ರೇಲಿಯಾ ವನಿತೆಯರ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು.

ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಅಲಿಸ್ಸಾ ಹೀಲಿ ಮತ್ತು ರಾಚೆಲ್ ಹೇಯ್ನ್ಸ್ ಉತ್ತಮ ಆರಂಭವನ್ನು ಮಾಡಿದರು. ರಾಚೆಲ್ ಹೇಯ್ನ್ಸ್ 68 ರನ್ ಗಳಿಸಿ ಔಟ್ ಆದರೆ, ಅಲಿಸ್ಸಾ ಹೀಲಿ 138 ಎಸೆತಗಳಲ್ಲಿ ಬರೋಬ್ಬರಿ 170 ರನ್ ಸಿಡಿಸಿ ಅಬ್ಬರಿಸಿದರು.

ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆತ್ ಮೂನಿ 68 ರನ್, ಗಾರ್ಡನರ್ 1 ರನ್, ನಾಯಕಿ ಮೆಗ್ ಲ್ಯಾನಿಂಗ್ 10 ರನ್, ತಹ್ಲಿಯಾ ಮೆಗ್ರಾ ಅಜೇಯ 8 ರನ್ ಮತ್ತು ಎಲ್ಲಿಸ್ ಪೆರ್ರಿ ಅಜೇಯ 17 ರನ್ ಬಾರಿಸಿದರು. ಈ ಮೂಲಕ ಆಸ್ಟ್ರೇಲಿಯಾ ವನಿತೆಯರ ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದ್ದು, ಎದುರಾಳಿ ಇಂಗ್ಲೆಂಡ್ ವನಿತೆಯರ ತಂಡಕ್ಕೆ ಗೆಲ್ಲಲು 357 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.

ಆಸ್ಟ್ರೇಲಿಯಾ ವನಿತೆಯರ ಆಡುವ ಬಳಗ: ರಾಚೆಲ್ ಹೇನ್ಸ್, ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಮೆಗ್ ಲ್ಯಾನಿಂಗ್ (ನಾಯಕಿ), ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್

ಇಂಗ್ಲೆಂಡ್ ವನಿತೆಯರ ಆಡುವ ಬಳಗ: ಟಮ್ಮಿ ಬ್ಯೂಮಾಂಟ್, ಡೇನಿಯಲ್ ವ್ಯಾಟ್, ಹೀದರ್ ನೈಟ್ (ನಾಯಕಿ), ನಟಾಲಿ ಸ್ಕೈವರ್, ಆಮಿ ಜೋನ್ಸ್ (ವಿಕೆಟ್ ಕೀಪರ್), ಸೋಫಿಯಾ ಡಂಕ್ಲಿ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಷಾರ್ಲೆಟ್ ಡೀನ್, ಅನ್ಯಾ ಶ್ರಬ್ಸೋಲ್

Story first published: Sunday, April 3, 2022, 11:07 [IST]
Other articles published on Apr 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+