For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್: ಭಾರತ vs ದ.ಆಫ್ರಿಕಾ ಪಂದ್ಯ ಆರಂಭ; ಸೆಮಿ ಫೈನಲ್ ಪ್ರವೇಶಿಸಲು ಇದೊಂದೇ ದಾರಿ!

Womens World cup 2022: India women vs South Africa women playing XI and live score

ಮಾರ್ಚ್ 4ರಿಂದ ಆರಂಭವಾಗಿರುವ ಐಸಿಸಿ ಮಹಿಳಾ ವಿಶ್ವಕಪ್ 2022ರ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಈಗಾಗಲೇ ಲೀಗ್ ಸುತ್ತಿನ ಎಲ್ಲಾ ಪಂದ್ಯಗಳನ್ನೂ ಗೆದ್ದಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಯಶಸ್ವಿಯಾಗಿ ಸೆಮಿ ಫೈನಲ್ ಪ್ರವೇಶಿಸಿದೆ. ಹಾಗೂ ದ. ಆಫ್ರಿಕಾ ವನಿತೆಯರ ತಂಡ ಕೂಡ ಸೆಮಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿಯ ವನಿತೆಯರ ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಎರಡನೇ ತಂಡ ಎನಿಸಿಕೊಂಡಿದೆ. ಹೀಗೆ ಈ ಎರಡು ತಂಡಗಳು ಸೆಮಿ ಫೈನಲ್ ಸುತ್ತಿಗೆ ಪ್ರವೇಶ ಪಡೆದುಕೊಂಡರೆ, ಈ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿರುವ ಮೂರು ಮತ್ತು ನಾಲ್ಕನೇ ತಂಡಗಳು ಯಾವುವು ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಸದ್ಯ ಲೀಗ್ ಹಂತದಲ್ಲಿ ತನ್ನ ಎಲ್ಲಾ ಏಳು ಪಂದ್ಯಗಳನ್ನು ಆಡಿ ಮುಗಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ವನಿತೆಯರ ತಂಡ ಹಾಗೂ ಟೂರ್ನಿಯಲ್ಲಿ ಇನ್ನೂ ತಲಾ ಒಂದೊಂದು ಪಂದ್ಯ ಆಡಬೇಕಿರುವ ಭಾರತ ವನಿತೆಯರ ತಂಡ ಮತ್ತು ಇಂಗ್ಲೆಂಡ್ ವನಿತೆಯರ ತಂಡಗಳ ನಡುವೆ ಉಳಿದಿರುವ ಎರಡು ಸೆಮಿ ಫೈನಲ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ.

ಹೀಗೆ ಸೆಮಿ ಫೈನಲ್ ಪ್ರವೇಶಿಸಲು ಉಳಿದಿರುವ ತನ್ನ ಉಳಿದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಭಾರತ ವನಿತೆಯರ ತಂಡ ಹಾಗೂ ಇಂಗ್ಲೆಂಡ್ ವನಿತೆಯರ ತಂಡಗಳಿದ್ದು, ಈ ಎರಡೂ ತಂಡಗಳು ತಮ್ಮ ಉಳಿದಿರುವ ಪಂದ್ಯದಲ್ಲಿ ಗೆದ್ದರೆ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಲಿವೆ ಹಾಗೂ ವೆಸ್ಟ್ ಇಂಡೀಸ್ ವನಿತೆಯರ ತಂಡ ಸೆಮಿ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಲಿದೆ. ಹೀಗಾಗಿ ಭಾರತ ವನಿತೆಯರ ತಂಡ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಈ ಪಂದ್ಯದಲ್ಲಿ ಈಗಾಗಲೇ ಯಶಸ್ವಿಯಾಗಿ ಸೆಮಿ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ವನಿತೆಯರ ತಂಡದ ವಿರುದ್ಧ ಸೆಣಸಾಟ ನಡೆಸುತ್ತಿದೆ. ಇನ್ನು ಇತ್ತಂಡಗಳ ನಡುವಿನ ಈ ಪಂದ್ಯ ಇಂದು ( ಮಾರ್ಚ್ 27 ) ನ್ಯೂಜಿಲೆಂಡ್‌ನ ಕ್ರಿಸ್ಟ್‌ಚರ್ಚ್‌ನ ಹಾಗ್ಲೆ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ವನಿತೆಯರ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ಹೀಗೆ ಬ್ಯಾಟಿಂಗ್ ಆಯ್ದುಕೊಂಡ ಭಾರತ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಸ್ಮೃತಿ ಮಂಧಾನ ಹಾಗೂ ಶೆಫಾಲಿ ವರ್ಮಾ ಕಣಕ್ಕಿಳಿದು, ಶೆಫಾಲಿ ವರ್ಮಾ 46 ಎಸೆತಗಳಲ್ಲಿ 53 ರನ್ ಚಚ್ಚಿ ರನ್ಔಟ್ ಆಗಿದ್ದರೆ, ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಮೂವತ್ತರ ಗಡಿ ದಾಟಿ ಅಜೇಯರಾಗಿ ಉಳಿದಿದ್ದಾರೆ. ಇತ್ತ ಶೆಫಾಲಿ ವರ್ಮಾ ಔಟ್ ಆದ ಬೆನ್ನಲ್ಲೇ ಕಣಕ್ಕಿಳಿದ ಯಸ್ತಿಕಾ ಭಾಟಿಯಾ ಕೂಡ 2 ರನ್‌ಗಳಿಗೆ ಔಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದು, ನಾಲ್ಕನೇ ಕ್ರಮಾಂಕದಲ್ಲಿ ನಾಯಕಿ ಮಿಥಾಲಿ ರಾಜ್ ಕಣಕ್ಕಿಳಿದಿದ್ದಾರೆ. ಹೀಗೆ ಉತ್ತಮ ಅರಂಭವನ್ನು ಪಡೆದುಕೊಂಡಿದ್ದ ಭಾರತ ವನಿತೆಯರ ತಂಡ ಇದೀಗ ಸ್ವಲ್ಪ ಎಡವಿದ್ದು, ಈ ಮಹತ್ವದ ಪಂದ್ಯದಲ್ಲಿ ಮುಂದೆ ಯಾವ ರೀತಿಯ ಪ್ರದರ್ಶನ ನೀಡುತ್ತೋ ಕಾದು ನೋಡಬೇಕಿದೆ.

ಭಾರತ ವನಿತೆಯರ ತಂಡ ಹಾಗೂ ದಕ್ಷಿಣ ಆಫ್ರಿಕಾ ವನಿತೆಯರ ತಂಡಗಳ ನಡುವಿನ ಲೈವ್ ಸ್ಕೋರ್ ಈ ಕೆಳಕಂಡಂತಿದೆ.

1
9909-nonopta-49827

ಭಾರತ ವನಿತೆಯರ ತಂಡದ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್

ದಕ್ಷಿಣ ಆಫ್ರಿಕಾ ವನಿತೆಯರ ತಂಡದ ಆಡುವ ಬಳಗ: ಲಿಜೆಲ್ಲೆ ಲೀ, ಲಾರಾ ವೊಲ್ವಾರ್ಡ್ಟ್, ಲಾರಾ ಗುಡಾಲ್, ಸುನೆ ಲೂಸ್ (ನಾಯಕಿ), ಮಿಗ್ನಾನ್ ಡು ಪ್ರೀಜ್, ಮರಿಜಾನ್ನೆ ಕಪ್, ಕ್ಲೋಯ್ ಟ್ರಯಾನ್, ತ್ರಿಶಾ ಚೆಟ್ಟಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಮಸಾಬಟಾ ಕ್ಲಾಸ್, ಅಯಾಬೊಂಗಾ ಖಾಕಾ

Story first published: Sunday, March 27, 2022, 7:57 [IST]
Other articles published on Mar 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+