For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್: ರೋಚಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ ವನಿತೆಯರು

Womens World Cup 2022: South Africa women won by 6 runs against Pakistan women

ಮಹಿಳಾ ವಿಶ್ವಕಪ್‌ನಲ್ಲಿ ಇಂದು ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನವನಿತೆಯರು ಮುಖಾಮುಖಿಯಾಗಿದ್ದು ರೋಚಕ ಹಣಾಹಣಿ ನಡೆದಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ನ್ಯೂಜಿಲೆಂಡ್‌ನ ಮೌಂಟ್ ಮೌಂಗನ್ಯೂಯ್‌ನಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಿದೆ.

ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಆರಂಭ ಪಡೆಯಿತು. 21 ರನ್‌ಗಳಿಸುವಷ್ಟರಲ್ಲಿ ದಕ್ಷಿನ ಆಫ್ರಿಕಾದ ಎರಡು ವಿಕೆಟ್ ಪಡೆಯುವಲ್ಲಿ ಪಾಕ್ ವನಿತೆಯರು ಯಶಸ್ವುಯಾಗಿದ್ದರು. ಆದರೆ ಮೂರನೇ ವಿಕೆಟ್‌ಗೆ ವೊಲ್ವಾರ್ಡ್ ಹಾಗೂ ನಾಯಕಿ ಸ್ಯೂನ್ ಲೂಸ್ ದಕ್ಷಿಣ ಆಫ್ರಿಕಾಗೆ ಉತ್ತಮ ಜೊತೆಯಾಟವೊಂದನ್ನು ನೀಡಿದ್ದರು. ವೊಲ್ವಾರ್ಡ್ 75 ರನ್‌ಗಳ ಕೊಡುಗೆ ನೀಡಿದರೆ ಸ್ಯೂನ್ ಲೂಸ್ 62 ರನ್ ಬಾರಿಸಿದರು. ಅಂತಿಮವಾಗಿ ನಿಗದಿತ 50 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ 9 ವಿಕೆಟ್ ಕಳೆದುಕೊಂಡು 223 ರನ್ ಮಾತ್ರ ಗಳಿಸಲು ಯಶಸ್ವಿಯಾಗಿದ್ದರು.

ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಕೂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. 26 ರನ್‌ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ಆರಂಭಿಕ ಆಟಗಾರ್ತಿ ನಹಿದಾ ಖಾನ್ ಮಧ್ಯಮ ಕ್ರಮಾಂಕದ ಒಮೈಮಾ ಸೋಹೈಲ್ ಹಾಗೂ ನಿದಾ ದರ್ ಅವರಿಂದ ಉತ್ತಮ ಪ್ರದರ್ಶನ ಬಂದ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ನೀಡಿದ ಗುರಿಯನ್ನು ಬೆನ್ನಟ್ಟುತ್ತಾ ಸಾಗಿತ್ತು ಪಾಕಿಸ್ತಾನ.

ಆದರೆ ಈ ಆಟಗಾರ್ತಿಯರು ವಿಕೆಟ್ ಕಳೆದುಕೊಂಡ ನಂತರ ಪಾಕಿಸ್ತಾನ ಹಠಾತ್ ಕುಸಿತ ಕಾಣುತ್ತಾ ಸಾಗಿತ್ತು. ಈ ಮೂಲಕ ಪಾಕಿಸ್ತಾನ 49.5 ಓವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 6 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

ದಕ್ಷಿಣ ಆಫ್ರಿಕಾ ಪ್ಲೇಯಿಂಗ್ XI: ಲಿಜೆಲ್ಲೆ ಲೀ, ಲಾರಾ ವೊಲ್ವಾರ್ಡ್ಟ್, ತಜ್ಮಿನ್ ಬ್ರಿಟ್ಸ್, ಸುನೆ ಲೂಸ್ (ನಾಯಕಿ), ಮಿಗ್ನಾನ್ ಡು ಪ್ರೀಜ್, ಮರಿಜಾನ್ನೆ ಕಪ್, ಕ್ಲೋಯ್ ಟ್ರಯಾನ್, ತ್ರಿಶಾ ಚೆಟ್ಟಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಮಸಾಬಟಾ ಕ್ಲಾಸ್, ಅಯಾಬೊಂಗಾ ಖಾಕಾ
ಬೆಂಚ್: ಲಾರಾ ಗುಡಾಲ್, ಸಿನಾಲೋ ಜಫ್ತಾ, ತುಮಿ ಸೆಖುಖುನೆ, ನಾನ್ಕುಲುಲೆಕೊ ಮ್ಲಾಬಾ

ಪಾಕಿಸ್ತಾನ ಪ್ಲೇಯಿಂಗ್ ‍XI: ಸಿದ್ರಾ ಅಮೀನ್, ನಹಿದಾ ಖಾನ್, ಬಿಸ್ಮಾ ಮರೂಫ್ (ನಾಯಕ), ಒಮೈಮಾ ಸೊಹೈಲ್, ನಿದಾ ದಾರ್, ಅಲಿಯಾ ರಿಯಾಜ್, ಫಾತಿಮಾ ಸನಾ, ಸಿದ್ರಾ ನವಾಜ್ (ವಿಕೆಟ್ ಕೀಪರ್), ಡಯಾನಾ ಬೇಗ್, ನಶ್ರಾ ಸಂಧು, ಗುಲಾಮ್ ಫಾತಿಮಾ
ಬೆಂಚ್: ಅನಮ್ ಅಮೀನ್, ಜವೇರಿಯಾ ಖಾನ್, ಮುನೀಬಾ ಅಲಿ, ಐಮನ್ ಅನ್ವರ್

Story first published: Saturday, March 12, 2022, 10:36 [IST]
Other articles published on Mar 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+