For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್ ಟಿ20: ಹರ್ಮನ್ ಪ್ರೀತ್ ಅಬ್ಬರಕ್ಕೆ ಬೆಚ್ಚಿದ ಕಿವೀಸ್

women world t20 india vs new zealand india won harmanpreet kaur century

ಗಯಾನಾ, ನವೆಂಬರ್ 10: ಮಹಿಳಾ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಭಾರತದ ವನಿತೆಯರು ಶುಭಾರಂಭ ಮಾಡಿದ್ದಾರೆ. ಶುಕ್ರವಾರ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿಯುವ ಮೂಲಕ ಅಮೋಘ ಆರಂಭ ಪಡೆದುಕೊಂಡಿತು.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಭಾರತದ ವನಿತೆಯರು, ಕಿವೀಸ್ ಬಳಗದ ವಿರುದ್ಧ 34 ರನ್‌ಗಳ ಗೆಲುವು ಪಡೆದುಕೊಂಡಿತು.

ಭಾರತದ ಪರ ಟಿ20ಯಲ್ಲಿ ಮೊದಲ ಶತಕ ಬಾರಿಸಿದ ಆಟಗಾರ್ತಿ ಎಂಬ ಕೀರ್ತಿಗೆ ನಾಯಕಿ ಹರ್ಮನ್ ಪ್ರೀತ್ ಕೌರ್ ಪಾತ್ರರಾದರು.

ಟಿ20ಗೆ ಪಾದಾರ್ಪಣೆ ಮಾಡಿದ ಜೆಮಿಮಹ್ ರೋಡ್ರಿಗಸ್ ಮೊದಲ ಪಂದ್ಯದಲ್ಲಿಯೇ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದರು. ವಿರಾಟ್ ಕೊಹ್ಲಿ ಸಹ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅರ್ಧಶತಕ ದಾಖಲಿಸಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಮಹಿಳಾ ಟಿ20 ಇತಿಹಾಸಲ್ಲಿಯೇ ಇದು ಅತ್ಯಂತ ಗರಿಷ್ಠ ಮೊತ್ತವಾಗಿದೆ.

ಟಾಸ್ ಗೆದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಭಾರತಕ್ಕೆ ನಿರೀಕ್ಷತ ಆರಂಭ ಸಿಗಲಿಲ್ಲ.

ಆರಂಭಿಕ ಆಟಗಾರ್ತಿಯರಾದ ತಾನಿಯಾ ಭಾಟಿಯಾ ಮತ್ತು ಸ್ಮೃತಿ ಮಂದಾನ ಕ್ರಮವಾಗಿ ಕೇವಲ 9 ಮತ್ತು 2 ರನ್ ಗಳಿಸಿ ಲೀ ತಹುಹುಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

ನಾಲ್ಕನೆಯ ಕ್ರಮಾಂಕದಲ್ಲಿ ಬಂದ ದಯಾಳನ್ ಹೇಮಲತಾ ಕೂಡ 15 ರನ್ ಗಳಿಸಿ ಔಟಾದರು. 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿತ್ತು. ಆದರೆ, ನಂತರ ಕ್ರೀಸ್‌ಗೆ ಇಳಿದ ನಾಯಕಿ ಹರ್ಮನ್ ಪ್ರೀತ್, ಪಂದ್ಯದ ಗತಿಯನ್ನೇ ಬದಲಿಸಿದರು.

ಆರಂಭದಿಂದಲೇ ಅಬ್ಬರದ ಆಟಕ್ಕೆ ಮುಂದಾದ ಅವರು ಮೈದಾನದೆಲ್ಲಡೆ ಚೆಂಡನ್ನು ಅಟ್ಟಿದರು. ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿದರು. ಇದರಲ್ಲಿ ಏಳು ಬೌಂಡರಿಗಳಿದ್ದರೆ, ಎಂಟು ಭರ್ಜರಿ ಸಿಕ್ಸರ್‌ಗಳಿದ್ದವು.

ಅವರಿಗೆ ಉತ್ತಮ ಸಾತ್ ನೀಡಿದ ರೋಡ್ರಿಗಸ್, 45 ಎಸೆತಗಳಲ್ಲಿ 59 ರನ್ ಬಾರಿಸಿದರು. ಇಬ್ಬರೂ ನಾಲ್ಕನೆಯ ವಿಕೆಟ್‌ಗೆ 134 ರನ್‌ಗಳನ್ನು ಸೇರಿಸಿದರು. ತಂಡದ ಮೊತ್ತ 174 ಆಗಿದ್ದಾಗ ರೋಡ್ರಿಗಸ್ ಔಟಾದರು. ಇನ್ನಿಂಗ್ಸ್ ಮುಗಿಯಲು ಒಂದು ಎಸೆತ ಬಾಕಿ ಇರುವಾಗ ಹರ್ಮನ್ ಪ್ರೀತ್, ತಮ್ಮ ಅದ್ಭುತ ಇನ್ನಿಂಗ್ಸ್‌ ಅಂತ್ಯಗೊಳಿಸಿದರು.

ಬೃಹತ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ದೊರಕಿತು. ಮೊದಲ ವಿಕೆಟ್‌ಗೆ ಆರು ಓವರ್‌ಗಳಲ್ಲಿ 52 ರನ್ ಪೇರಿಸಿತು. ಆದರೆ, ನಂತರ ಒಂದೊಂದಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಹೋಯಿತು.

ಆರಂಭಿಕ ಆಟಗಾರ್ತಿ ಸುಜಿ ಬೇಟ್ಸ್ 50 ಎಸೆತಗಳಲ್ಲಿ 67 ರನ್ ಬಾರಿಸಿ ಹೋರಾಟ ನಡೆಸಿದರು. ಕೊನೆಯಲ್ಲಿ ವಿಕೆಟ್ ಕೀಪರ್ ಕೇಟಿ ಮಾರ್ಟಿನ್ 25 ಎಸೆತಗಳಲ್ಲಿ 39 ರನ್ ಗಳಿಸಿದರು. ಆದರೆ, ಇಬ್ಬರಿಗೂ ಸೂಕ್ತ ಬೆಂಬಲ ಇತರೆ ಆಟಗಾರ್ತಿಯರಿಂದ ದೊರಕಲಿಲ್ಲ.

ಹೀಗಾಗಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 160 ರನ್ ಗಳಿಸಲಷ್ಟೇ ನ್ಯೂಜಿಲೆಂಡ್ ಶಕ್ತವಾಯಿತು.

ಭಾರತದ ಪರ ಪೂನಂ ಯಾದವ್ ಮತ್ತು ದಯಾಳನ್ ಹೇಮಲತಾ ತಲಾ ಮೂರು ವಿಕೆಟ್ ಪಡೆದರೆ, ರಾಧಾ ಯಾದವ್ ಎರಡು ವಿಕೆಟ್ ಕಬಳಿಸಿದರು.

ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಹರ್ಮನ್ ಪ್ರೀತ್ ಕೌರ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Story first published: Monday, November 12, 2018, 19:21 [IST]
Other articles published on Nov 12, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+