Womens Asia Cup 2024: ಭಾರತ-ಪಾಕಿಸ್ತಾನ ಕದನಕ್ಕೆ ಕ್ಷಣಗಣನೆ; ಪಂದ್ಯ ಎಷ್ಟು ಗಂಟೆಗೆ, ಯಾವ ಚಾನೆಲ್‌ನಲ್ಲಿ ನೇರಪ್ರಸಾರ?
ಜುಲೈ 18 ಗುರುವಾರ, ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ನಡುವಿನ ಟಿ20 ಏಷ್ಯಾ ಕಪ್ 2024ರ ಪಂದ್ಯವು ಶುಕ್ರವಾರ (ಜುಲೈ 19) ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯಲಿದೆ.
ಭಾರತ ತಂಡವು ಪಾಕಿಸ್ತಾನ, ಯುಎಇ ಮತ್ತು ನೇಪಾಳದೊಂದಿಗೆ ಎ ಗುಂಪಿನಲ್ಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಜುಲೈ 21 ರಂದು ಯುಎಇ ವಿರುದ್ಧ ಆಡಲಿದೆ.

ಇದಾದ ಬಳಿಕ 23ರಂದು ನೇಪಾಳದೊಂದಿಗೆ ಆಡಲಿದೆ. ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಗ್ರೂಪ್ ಸುತ್ತಿನಲ್ಲಿ ಡಂಬುಲಾದಲ್ಲಿ ಮಾತ್ರ ಆಡಲಿದೆ.
ಪಾಕಿಸ್ತಾನಕ್ಕಿಂತ ಭಾರತದ ಫಾರ್ಮ್ ಉತ್ತಮ
ಕಳೆದ ಒಂದು ವರ್ಷದಲ್ಲಿ ಭಾರತ ಮಹಿಳಾ ತಂಡ 17 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 10 ಪಂದ್ಯಗಳನ್ನು ಗೆದ್ದಿದೆ. 5 ಪಂದ್ಯಗಳಲ್ಲಿ ಸೋಲು ಕಂಡಿದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಮತ್ತೊಂದೆಡೆ, ಪಾಕಿಸ್ತಾನ ಮಹಿಳಾ ತಂಡ ಕಳೆದ ಒಂದು ವರ್ಷದಲ್ಲಿ 19 ಟಿ20 ಪಂದ್ಯಗಳನ್ನು ಆಡಿದೆ. ಭಾರತಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದರೂ, ಪಾಕಿಸ್ತಾನ ಮಹಿಳೆಯರು ಕೇವಲ 7 ಪಂದ್ಯಗಳನ್ನು ಗೆದ್ದು 12ರಲ್ಲಿ ಸೋತಿದ್ದಾರೆ.
ಹೆಡ್-ಟು-ಹೆಡ್
ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು 14 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 11 ರಲ್ಲಿ ಗೆದ್ದಿದ್ದರೆ, ಪಾಕಿಸ್ತಾನ 3 ರಲ್ಲಿ ಗೆದ್ದಿದೆ. ಈ ಪೈಪೋಟಿಯಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ.
ಮಹಿಳಾ ಏಷ್ಯಾಕಪ್‌ನಲ್ಲಿ ಉಭಯ ತಂಡಗಳ ನಡುವೆ ಇದುವರೆಗೆ 6 ಪಂದ್ಯಗಳು ನಡೆದಿವೆ. ಭಾರತ 5 ಪಂದ್ಯಗಳನ್ನು ಗೆದ್ದಿದೆ. 2022ರಲ್ಲಿ ನಡೆದ ಏಕೈಕ ಪಂದ್ಯವನ್ನು ಪಾಕಿಸ್ತಾನ ಗೆದ್ದಿತ್ತು.
ಏಷ್ಯಾಕಪ್ ಟಿ20ಯಲ್ಲಿ ಭಾರತವು ಪಾಕಿಸ್ತಾನ ವಿರುದ್ಧದ 5 ಗೆಲುವುಗಳಲ್ಲಿ 4 ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಬಂದಿರುವುದು ಗಮನಾರ್ಹ. ಮಾಜಿ ನಾಯಕಿ ಮಿಥಾಲಿ ರಾಜ್ ಅವರು 2012ರ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ ತಂದುಕೊಟ್ಟಿದ್ದರು.
ಲೈವ್ ಸ್ಟ್ರೀಮಿಂಗ್ ವಿವರಗಳು
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾ ಕಪ್ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಭಾರತದಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ಜೊತೆಗೆ ನೇರ ಪ್ರಸಾರವು ಭಾರತದಲ್ಲಿನ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಸಂಜೆ 7 ಗಂಟೆಯಿಂದ ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications