For Quick Alerts
ALLOW NOTIFICATIONS  
For Daily Alerts
 

Womens Asia Cup 2024: ಭಾರತ vs ಪಾಕಿಸ್ತಾನ ಕಾದಾಟದಲ್ಲಿ ಯಾರಿಗೆ ಮೇಲುಗೈ?; ಉಭಯ ತಂಡಗಳ ಬಗ್ಗೆ ತಿಳಿಯಿರಿ

ಜುಲೈ 19 ಶುಕ್ರವಾರ, 2024ರ ಮಹಿಳೆಯರ ಟಿ20 ಏಷ್ಯಾ ಕಪ್ ಟೂರ್ನಿ ಇಂದು ಶ್ರೀಲಂಕಾದಲ್ಲಿ ಅಬ್ಬರದಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ದಿನವಾದ ಇಂದು ಭಾರತ ಮಹಿಳಾ ತಂಡ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ನಡುವೆ ಡಂಬುಲ್ಲಾದಲ್ಲಿ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.

ಹರ್ಮನ್‌ಪ್ರೀತ್ ಕೌರ್‌ ನೇತೃತ್ವದ ಭಾರತ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಅಭಿಯಾನ ಶುರು ಮಾಡಲು ಎದುರು ನೋಡುತ್ತಿದೆ. ಈ ಮೆಗಾ ಫೈಟ್‌ಗೂ ಮೊದಲು ಉಭಯ ತಂಡಗಳ ದಾಖಲೆಗಳು ಮತ್ತು ಪಂದ್ಯಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಗಳು ಇಲ್ಲಿದೆ.

Womens Asia Cup 2024 India-Pakistan Match Updates

ಭಾರತ vs ಪಾಕಿಸ್ತಾನ ಹೆಡ್‌-ಟು-ಹೆಡ್‌

ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಡ್ ಟು ಹೆಡ್ ನೋಡುವುದಾರೆ, ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 14 ಅಂತರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಅದರಲ್ಲಿ ಭಾರತದ ವನಿತೆಯರು ಪ್ರಾಬಲ್ಯ ಸಾಧಿಸಿದ್ದಾರೆ.

ಭಾರತ 14 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ಕೇವಲ 3 ಬಾರಿ ಮಾತ್ರ ಜಯ ಕಂಡಿದೆ. ಉಭಯ ತಂಡಗಳ ನಡುವೆ ಕಳೆದ 5 ಟಿ20 ಪಂದ್ಯಗಳಲ್ಲಿ ಭಾರತ 4 ಬಾರಿ ಗೆದ್ದು ಬೀಗಿದೆ.

ಟೀಮ್ ಇಂಡಿಯಾ ವನಿತೆಯರ ಇತ್ತೀಚಿನ ಪ್ರದರ್ಶನ

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾ ವನಿತೆಯರ ತಂಡ 17 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 10ರಲ್ಲಿ ಗೆದ್ದು 5ರಲ್ಲಿ ಸೋತಿದೆ. 2 ಪಂದ್ಯಗಳು ಯಾವುದೇ ಫಲಿತಾಂಶಗಳು ಕಂಡಿಲ್ಲ.

ಏಷ್ಯನ್ ಗೇಮ್ಸ್‌ನ ಫೈನಲ್‌ನಲ್ಲಿ ಶ್ರೀಲಂಕಾವನ್ನು 19 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಚಿನ್ನದ ಪದಕಕ್ಕೆ ಮುತ್ತಿಕ್ಕಿತ್ತು . ಬಳಿಕ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸತತ ಎರಡು ಸ್ವದೇಶಿ ಸರಣಿಗಳಲ್ಲಿ ಭಾರತ ಸೋಲನ್ನು ಎದುರಿಸಬೇಕಾಯಿತು.

ಆದರೆ ಇದಾದ ಬಳಿಕ ಭಾರತ ತವರಿನಲ್ಲಿ ಬಾಂಗ್ಲಾದೇಶವನ್ನು 5-0 ಅಂತರದಿಂದ ಸೋಲಿಸಿತು. ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯು 1-1 ಡ್ರಾದಲ್ಲಿ ಅಂತ್ಯಗೊಂಡಿದ್ದು, ಸರಣಿಯ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಪಾಕಿಸ್ತಾನದ ಇತ್ತೀಚಿನ ಪ್ರದರ್ಶನ

ಪಾಕಿಸ್ತಾನ ತಂಡವು ಕಳೆದ 1 ವರ್ಷದಲ್ಲಿ ಭಾರತಕ್ಕಿಂತ ಹೆಚ್ಚು ಟಿ20 (19) ಗಳನ್ನು ಆಡಿದೆ. ಆದರೆ, ಇದರಲ್ಲಿ 7ರಲ್ಲಿ ಮಾತ್ರ ಗೆದ್ದಿದ್ದು, 12ರಲ್ಲಿ ಸೋಲು ಕಂಡಿದೆ.

ಏಷ್ಯನ್ ಗೇಮ್ಸ್‌ಗೂ ಮುನ್ನ ಪಾಕಿಸ್ತಾನವು ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ 3-0 ಗೋಲುಗಳಿಂದ ಸೋಲಿಸಿತ್ತು. ಏಷ್ಯನ್ ಗೇಮ್ಸ್ ಪಾಕಿಸ್ತಾನಕ್ಕೆ ಹೆಚ್ಚು ವಿಶೇಷವಾಗಿರಲಿಲ್ಲ. ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿತ್ತು.

ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲೂ ಬಾಂಗ್ಲಾದೇಶದ ಎದುರು ಹೀನಾಯ ಸೋಲನುಭವಿಸಬೇಕಾಯಿತು. ಇದಾದ ಬಳಿಕ ಪಾಕಿಸ್ತಾನ ತಂಡವು ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ಸರಣಿಯನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಕಳೆದ ವರ್ಷ ನ್ಯೂಜಿಲೆಂಡ್‌ನಲ್ಲಿ ಆಡಿದ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು.

ಭಾರತದ ಸ್ಟ್ರಾಂಗ್‌ ಆರಂಭಿಕ ಜೋಡಿ

ಭಾರತ ತಂಡವು ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ರೂಪದಲ್ಲಿ ಪ್ರಬಲ ಆರಂಭಿಕ ಜೋಡಿಯನ್ನು ಹೊಂದಿದೆ. ಮಂಧಾನ ಟಿ20ಯಲ್ಲಿ 28.13 ಸರಾಸರಿ ಮತ್ತು 121.83 ಸ್ಟ್ರೈಕ್ ರೇಟ್‌ನಲ್ಲಿ 3320 ರನ್ ಗಳಿಸಿದ್ದರೆ, ಶೆಫಾಲಿ 129.48 ಸ್ಟ್ರೈಕ್ ರೇಟ್ ಮತ್ತು 24.27 ಸರಾಸರಿಯಲ್ಲಿ 1748 ರನ್ ಗಳಿಸಿದ್ದಾರೆ. ಪಾಕಿಸ್ತಾನದ ನಾಯಕಿ ನಿದಾ ದಾರ್ ಅವರು ಕೂಡ ಈ ಪಂದ್ಯದ ಪ್ರಮುಖ ಕೇಂದ್ರ ಬಿಂದುವಾಗಿದ್ದಾರೆ.

ಮಹಿಳೆಯರ ಏಷ್ಯಾಕಪ್‌ನಲ್ಲಿ ಭಾರತದ ಪ್ರಾಬಲ್ಯ

ಭಾರತ ತಂಡ ಮಹಿಳೆಯರ ಏಷ್ಯಾಕಪ್‌ ಟೂರ್ನಿಯಲ್ಲಿ ಇಲ್ಲಿಯವರೆಗೆ ಸತತವಾಗಿ ಪ್ರಾಬಲ್ಯ ಮೆರೆದಿದೆ. ಭಾರತ 8 ರಲ್ಲಿ 7 ಬಾರಿ ಏಷ್ಯಾಕಪ್‌ ಚಾಂಪಿಯನ್‌ ಆಗಿದೆ.

ಭಾರತ ತಂಡವು ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಲಿದೆ. 2022ರ ಹಿಂದಿನ ಆವೃತ್ತಿಯಲ್ಲಿ ಭಾರತ ಈ ಟ್ರೋಫಿಯನ್ನು 7ನೇ ಬಾರಿಗೆ ಗೆದ್ದಿತ್ತು. ಫೈನಲ್‌ನಲ್ಲಿ ಭಾರತ 8 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು.

ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಮಹಿಳೆಯರ ಏಪ್ಯಾಕಪ್‌ 2024ರ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಆದರೆ ಅದರ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ಲೈವ್‌ ಪ್ರಸಾರ ಮಾಡಲಾಗುತ್ತದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭವಾಗಲಿದೆ.

ಭಾರತ vs ಪಾಕಿಸ್ತಾನ ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಅರುಂಧತಿ ರೆಡ್ಡಿ, ಶೋಭಾನಾ ಆಶಾ, ರಿಚಾ ಘೋಷ್, ಉಮಾ ಛೆಟ್ರಿ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಾಧಾ ಯಾದವ್, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್, ಶೆಫಾಲಿ ವರ್ಮಾ, ಶ್ರೇಯಾಂಕಾ ಪಾಟೀಲ್, ಸಂಜೆ ಸಜ್ನಾ, ದಯಾಳನ್ ಹೇಮಲತಾ.

ಪಾಕಿಸ್ತಾನ: ನಿದಾ ದಾರ್ (ನಾಯಕ), ತಸ್ಮಿಯಾ ರುಬಾಬ್, ಇರಾಮ್ ಜಾವೇದ್, ಒಮೈಮಾ ಸೊಹೈಲ್, ಗುಲ್ ಫಿರುಜಾ, ಡಯಾನಾ ಬೇಗ್, ತುಬಾ ಹಸನ್, ನಶ್ರಾ ಸಂಧು, ನಜಿಹಾ ಅಲ್ವಿ, ಫಾತಿಮಾ ಸನಾ, ಮುನಿಬಾ ಅಲಿ, ಅಲಿಯಾ ರಿಯಾಜ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸೈಯದಾ ಅರುಬ್ ಶಾ .

Story first published: Friday, July 19, 2024, 8:29 [IST]
Other articles published on Jul 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+