For Quick Alerts
ALLOW NOTIFICATIONS  
For Daily Alerts
 

Womens Asia Cup 2024: ಭಾರತ ವನಿತೆಯರ ಉರಿ ಬೌಲಿಂಗ್‌ ದಾಳಿಗೆ ಬೆಚ್ಚಿದ ಪಾಕಿಸ್ತಾನ; ಕೌರ್‌ ಪಡೆಗೆ ಸುಲಭ ಗುರಿ!

ಜುಲೈ 19 ಶುಕ್ರವಾರ, ಶ್ರೀಲಂಕಾದ ಡಂಬುಲ್ಲಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಮಹಿಳಾ ಏಷ್ಯಾಕಪ್‌ ಟೂರ್ನಿಯ ಎ ಗುಂಪಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ವನಿತೆಯರು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಭರ್ಜರಿ ಬೌಲಿಂಗ್‌ ದಾಳಿ ನಡೆಸಿ ಭಾರತ ಮಹಿಳಾ ತಂಡದ ಬೌಲರ್ಸ್‌ ಪಾಕಿಸ್ತಾನವನ್ನು ಆಲೌಟ್‌ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನ 19.2 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್ ಆಗಿದೆ.

Womens Asia Cup 2024 India vs Pakistan Match first innings Reports

ಪಾಕಿಸ್ತಾನ ಪರ ಗುಲ್ ಫಿರೋಜಾ ಮತ್ತು ಮುನಿಬಾ ಅಲಿ ಇನ್ನಿಂಗ್ಸ್‌ ಶುರು ಮಾಡಿದರು. ಆದರೇ 5 ರನ್‌ ಗಳಿಸಿದ ಗುಲ್ ಫಿರೋಜಾ ತಂಡಕ್ಕೆ ಉತ್ತಮ ಅಡಿಪಾಯ ಹಾಕದೆ ಔಟಾದರೆ, ಮುನಿಬಾ ಅಲಿ ಕೂಡ 11 ರನ್‌ಗಳಿಗೆ ವಿಕೆಟ್‌ ಕಳೆದುಕೊಂಡರು.

ಬಳಿಕ ಬಂದ ಸಿದ್ರಾ ಅಮೀನ್ (25) ಪಾಕಿಸ್ತಾನ ಪರ ಹೆಚ್ಚು ಸ್ಕೋರರ್‌ ಆಗಿ ಔಟಾದರು. ಇನ್ನು ಪಾಕ್‌ ನಾಯಕ
ನಿದಾ ದಾರ್(8), ಅಲಿಯಾ ರಿಯಾಜ್ (6), ಇರಾಮ್ ಜಾವೇದ್ (0), ತುಬಾ ಹಸನ್ (22) ಬಹುಬೇಗ ವಿಕೆಟ್‌ ಕಳೆದುಕೊಂಡು ಪೆವಲಿಯನ್‌ ಪರೇಡ್‌ ನಡೆಸಿದರು.

ಕೊನೆಯಲ್ಲಿ ಪಾಕ್‌ ತಂಡಕ್ಕೆ ಆಸರೆಯಾದ ಫಾತಿಮಾ ಸನಾ ಅಜೇಯ 22 ರನ್‌ ಗಳಿಸಿದರೆ, ಸಾದಿಯಾ ಇಕ್ಬಾಲ್ (2), ನಶ್ರಾ ಸಂಧು (0) ಹಾಗು ಸೈಯದಾ ಅರೂಬ್ ಶಾ (೦) ಯಾವುದೇ ರನ್‌ ಕಲೆ ಹಾಕದೆ ಟೀಮ್‌ ಇಂಡಿಯಾ ಬೌಲರ್ಸ್‌ಗೆ ವಿಕೆಟ್‌ ಒಪ್ಪಿಸಿದರು.

ಟೀಮ್‌ ಇಂಡಿಯಾ ಪರ ದೀಪ್ತಿ ಶರ್ಮಾ 3 ವಿಕೆಟ್‌ ಕಬಳಿಸಿ ಮಿಂಚಿದರು. ಇನ್ನೊಂದೆಡೆ ಪೂಜಾ ವಸ್ತ್ರಾಕರ್, ಶ್ರೇಯಾಂಕ ಪಾಟೀಲ್ ಮತ್ತು ರೇಣುಕಾ ಠಾಕೂರ್ ಸಿಂಗ್ ತಲಾ 2 ವಿಕೆಟ್‌ ಪಡೆದರು.

ಭಾರತ vs ಪಾಕಿಸ್ತಾನ ಪ್ಲೇಯಿಂಗ್‌-11

ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದಯಾಳನ್ ಹೇಮಲತಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್‌), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ರೇಣುಕಾ ಠಾಕೂರ್ ಸಿಂಗ್.

ಪಾಕಿಸ್ತಾನ ತಂಡ: ಸಿದ್ರಾ ಅಮೀನ್, ಗುಲ್ ಫಿರೋಜಾ, ಮುನೀಬಾ ಅಲಿ(ವಿಕೆಟ್‌ಕೀಪರ್‌), ನಿದಾ ದಾರ್(ನಾಯಕಿ), ಅಲಿಯಾ ರಿಯಾಜ್, ಇರಾಮ್ ಜಾವೇದ್, ಫಾತಿಮಾ ಸನಾ, ತುಬಾ ಹಸನ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಸೈಯದಾ ಅರೂಬ್ ಶಾ.

Story first published: Friday, July 19, 2024, 20:37 [IST]
Other articles published on Jul 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+