Womens Asia Cup 2024: ಈ 4 ತಂಡಗಳ ನಡುವೆ ಸೆಮಿಸ್ ಕದನ; ಭಾರತ vs ಪಾಕಿಸ್ತಾನ ಫೈನಲ್?
ಜುಲೈ 25 ಗುರುವಾರ, 2024ರ ಮಹಿಳೆಯರ ಏಷ್ಯಾಕಪ್‌ನ 4 ತಂಡಗಳು ಅಂತಿಮವಾಗಿ ಸೆಮಿಫೈನಲ್‌ಗೆ ಆರ್ಹತೆ ಪಡೆದಿವೆ. ಜುಲೈ 26 ರಂದು ನಡೆಯುವ ಈ ಮೆಗಾ ಟೂರ್ನಿಯಲ್ಲಿ ಡಬಲ್ ಡೋಸ್ ಥ್ರಿಲ್ ಅನ್ನು ನೋಸಬಹುದಾಗಿದೆ.
ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದು, ಅವರ ಕನಸು ನನಸಾಗುವ ಸಾಧ್ಯತೆ ಇದೆ. ಎ ಗುಂಪಿನಿಂದ ಭಾರತ ಮತ್ತು ಪಾಕಿಸ್ತಾನ ಆರ್ಹತೆ ಪಡೆದರೆ, ಬಿ ಗುಂಪಿನಿಂದ ಶ್ರೀಲಂಕಾ ಹಾಗು ಬಾಂಗ್ಲಾದೇಶ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ.

ಶ್ರೀಲಂಕಾ ಭಾರತದೊಂದಿಗೆ ಫೈನಲ್ ಆಡುವ ಕನಸು ಕಾಣುತ್ತಿದೆ. ಎರಡೂ ತಂಡಗಳು ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದಿವೆ. ಇನ್ನೊಂದೆಡೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಪರಿಸ್ಥಿತಿಯೂ ಇದೇ ಆಗಿದೆ. ಉಭಯ ತಂಡಗಳು ತಲಾ 2 ಪಂದ್ಯ ಗೆದ್ದು ದ್ವಿತೀಯ ಸ್ಥಾನ ಪಡೆದಿವೆ.
ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಶ್ರೀಲಂಕಾ ಫೈನಲ್ ಆಡುವುದು ಎಂದು ಊಹಿಸಬಹುದು. ಆದರೆ, ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ಎದುರು ಭಾರತದ ವನಿತೆಯರು ಫೈನಲ್ ಆಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.
ಇದು ಸಾಧ್ಯವಾಗ ಬೇಕಾದರೆ, ಬಾಂಗ್ಲಾದೇಶ ಎದುರು ಭಾರತ ಮೊದಲು ಗೆದ್ದು ಫೈನಲ್ ಟಿಕೆಟ್ ಪಡೆದುಕೊಳ್ಳಬೇಕು. ಇತ್ತ ಪಾಕಿಸ್ತಾನ ತಂಡವು ಶ್ರೀಲಂಕಾವನ್ನು ಸೋಲಿಸಬೇಕು.
ಆದರೆ ಶ್ರೀಲಂಕಾ ವನಿತೆಯರನ್ನು ಸೋಲಿಸುವುದು ಪಾಕಿಸ್ತಾನಕ್ಕೆ ಸವಾಲಿನ ಕೆಲಸವಾಗಿದೆ. ಒಂದು ವೇಳೆ ಶ್ರೀಲಂಕಾವನ್ನು ಪಾಕಿಸ್ತಾನ ಬಗ್ಗು ಬಡಿದರೆ, 2024ರ ಮಹಿಳೆಯರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ನೋಡುವ ಭಾಗ್ಯ ಉಭಯ ತಂಡದ ಅಭಿಮಾನಿಗಳಿಗೆ ಸಿಗಲಿದೆ.
ಸೆಮಿಫೈನಲ್ ವೇಳಾಪಟ್ಟಿ
2024ರ ಮಹಿಳೆಯರ ವಿಶ್ವಕಪ್ ಸೆಮಿಫೈನಲ್‌ನ ವೇಳಾಪಟ್ಟಿ ಹೀಗಿದೆ. ಗುಂಪು-1 ರಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ಗುಂಪು-2 ರ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಬೇಕು. ಈ ಗುಂಪಿನಲ್ಲಿ ಬಾಂಗ್ಲಾದೇಶ ಎರಡನೇ ಅರ್ಹತೆ ಪಡೆದಿದೆ, ಆದ್ದರಿಂದ ಭಾರತ ತಂಡವು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.
ಎರಡೂ ಸೆಮಿಫೈನಲ್ ಪಂದ್ಯಗಳು ಜುಲೈ 26 ರಂದು ಒಂದೇ ದಿನ ನಡೆಯಲಿವೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂತಿಮ ಕದನ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನದ ಪಂದ್ಯ ಸಂಜೆ 6.30ಕ್ಕೆ ನಡೆಯಲಿದೆ.
ಜುಲೈ 28 ರಂದು ಫೈನಲ್
ಜುಲೈ 28ರಂದು ಮಹಿಳೆಯರ ಏಷ್ಯಾಕಪ್ 2024ರ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಮೇಲುಗೈ ತೋರುತ್ತಿದೆ. ಶ್ರೀಲಂಕಾ ಪಾಕಿಸ್ತಾನಕ್ಕೆ ದೊಡ್ಡ ಸವಾಲನ್ನು ಒಡ್ಡಬಹುದು.
ಆದರೆ, ಭಾರತ ವಿರುದ್ಧ ಸೋತ ನಂತರ ಪಾಕಿಸ್ತಾನ ಅದ್ಭುತ ಪುನರಾಗಮನ ಮಾಡಿದೆ. ಇದೀಗ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ನಡುವೆ ಪ್ರಶಸ್ತಿ ಸಮರ ನಡೆಯಲಿದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications