ಮಹಿಳಾ ಏಷ್ಯಾಕಪ್ 2022: ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ

ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಇಂದು ಭಾರತ ತಂಡ ಥಾಯ್ಲೆಂಡ್ ವಿರುದ್ಧ ಸೆಣೆಸಾಟ ನಡೆಸಲಿದೆ. ಇದು ಲೀಗ್ ಹಂತದಲ್ಲಿ ಭಾರತ ಹಾಗೂ ಥಾಯ್ಲೆಂಡ್ ತಂಡಗಳಿಗೆ ಅಂತಿಮ ಪಂದ್ಯವಾಗಿದ್ದು ಕುತೂಹಲ ಮೂಡಿಸಿದೆ. ಅಂಕಪಟ್ಟಿಯಲ್ಲಿ ಸ್ಥಾನದಲ್ಲಿರುವ ಭಾರತ ತಂಡ ಇದೇ ಸ್ಥಾನದಲ್ಲಿದ್ದುಕೊಂಡು ಮುಂದಿನ ಹಂತಕ್ಕೇರುವ ವಿಶ್ವಾಸದಲ್ಲಿದೆ.
ಇನ್ನು ಥಾಯ್ಲೆಂಡ್ ತಂಡ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದೆ ಎಂಬುದನ್ನು ಮರೆಯುವಂತಿಲ್ಲ. ಆಡಿರುವ ಐದು ಪಂದ್ಯಗಳ ಪೈಕಿ ಥಾಯ್ಕೆಂಡ್ ಈವರೆಗೆ ಮೂರು ಗೆಲುವು ಸಾಧಿಸಿದೆ. ಇದರಲ್ಲಿ ಪಾಕಿಸ್ಥಾನ ತಂಡದ ವಿರುದ್ಧ ಸಾಧಿಸಿರುವ ಗೆಲುವು ಕೂಡ ಸೇರಿಕೊಂಡಿದೆ. ಇತ್ತ ಭಾರತ ತಂಡ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದೆ. ಹಾಗಿದ್ದರೂ ನೆಟ್‌ರನ್‌ರೇಟ್ ಆಧಾರದಲ್ಲಿ ಭಾರತ ಪಾಕಿಸ್ತಾನಕ್ಕಿಂತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಪಂದ್ಯದ ಸಮಯ ಹಾಗೂ ನೇರಪ್ರಸಾರ
ಭಾರತ ಹಾಗೂ ಥಾಯ್ಲೆಂಡ್ ಮಹಿಳಾ ತಂಡಗಳ ನಡುವಿನ ಕದನ ಸೋಮವಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ. 12:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಇನ್ನು ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ದೊರೆಯಲಿದ್ದು ಹಾಟ್‌ಸ್ಟಾರ್‌ನಲ್ಲಿ ಲೈವ್‌ಸ್ಟ್ರೀಮಿಂಗ್ ನಡೆಯಲಿದೆ.

ಉತ್ತಮ ಫಾರ್ಮ್‌ನಲ್ಲಿದೆ ಭಾರತ
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ ಉಳಿದಂತೆ ಅದ್ಭುತ ಪ್ರದರ್ಶನ ನೀಡಿದೆ. ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಈ ಪಂದ್ಯದಲ್ಲಿ ಆರಂಬಿಕರಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಮಂಧಾನ ಈ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜಮಿಮಾ ಡೋಡ್ರಿಗಸ್ ಅಮೋಘ ಫಾರ್ಮ್‌ನಲ್ಲಿದ್ದು ನಾಯಕಿ ಹರ್ಮನ್‌ಪ್ರೀತ್ ಕೂಡ ಉತ್ತಮ ಲಯದಲ್ಲಿದ್ದಾರೆ. ಪೂಜಾ ವಸ್ತ್ರಾಕರ್, ಸ್ನೇಹ್ ರಾಣಾ ಮತ್ತು ದೀಪ್ತಿ ಶರ್ಮಾ ಕೂಡ ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವಿರುವ ಆಟಗಾರ್ತಿಯರಾಗಿದ್ದಾರೆ.
T20 World Cup 2022: ಈ ಐದು ಪಂದ್ಯಗಳಿಗಾಗಿ ಕಾಯುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು

ಇತ್ತಂಡಗಳ ಸ್ಕ್ವಾಡ್
ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್(ವಿಕೆಟ್ ಕೀಪರ್), ಕಿರಣ್ ನವಗಿರೆ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಮೇಘನಾ ಸಿಂಗ್, ರಾಧಾ ಯಾದವ್, ದಯಾಳನ್ ಹೇಮಲತಾ
ಥೈಲ್ಯಾಂಡ್ ಮಹಿಳಾ ತಂಡ: ನನ್ನಪತ್ ಕೊಂಚರೊಯೆಂಕೈ(ವಿಕೆಟ್ ಕೀಪರ್), ನತ್ತಕನ್ ಚಂತಮ್, ನರುಮೊಲ್ ಚೈವಾಯ್(ನಾಯಕಿ), ಸೊರ್ನರಿನ್ ಟಿಪ್ಪೋಚ್, ಚನಿದಾ ಸುತ್ತಿರುಯಾಂಗ್, ರೋಸೆನನ್ ಕಾನೋ, ಫನ್ನಿತಾ ಮಾಯಾ, ನಟ್ಟಾಯ ಬೂಚತಮ್, ಒನ್ನಿಚಾ ಕಮ್ಚೊಂಫು, ಬಂಥಿದ ಲೀಫತ್ಥಾನ, ತಿಪಟಚಾ ಪುಟ್ಟವಾಂಗ್, ಸುಲೀಪೋರ್ನ್ ಲಾವೋಮಿ, ಸುವಾನನ್ ಖಿಯಾಟೊ, ಅಫೀಸರ ಸುವಾಂಚೋನ್ರತಿ, ಸುನೀದ ಚತುರೋಗ್ರತ್ತಾನ, ನಂತಿತ ಬೂಂಸುಖಂ

ಸಂಭಾವ್ಯ ಆಡುವ ಬಳಗ
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಥಾಯ್ಲೆಂಡ್: ನರುಯೆಮೊಲ್ ಚೈವಾಯ್ (ನಾಯಕಿ), ನನ್ನಪಟ್ ಕೊಂಚರೊಯೆಂಕೈ (ವಿಕೆಟ್ ಕೀಪರ್), ನತ್ತಕನ್ ಚಂತಮ್, ಚನಿದಾ ಸುತ್ತಿರುವಾಂಗ್, ಸೊರ್ನರಿನ್ ಟಿಪ್ಪೊಚ್, ಫನ್ನಿತಾ ಮಾಯಾ, ನಟ್ಟಾಯ ಬೂಚತಮ್, ರೋಸೆನನ್ ಕಾನೋ, ಒನ್ನಿಚಾ ಕಮ್ಚೊಂಫು, ತಿಪಾಟ್ಚಾ ಪುಟ್ಟವಾಂಗ್, ನಂತಿತ ಬೂನ್ಸುಖಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications