For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್: ಸ್ಟಫಾನಿ ಟೇಲರ್ ಆಟಕ್ಕೆ ಶರಣಾದ ಥೈಲ್ಯಾಂಡ್

Womens T20 World Cup: West Indies vs Thailand, 2nd Match report

ಪರ್ತ್, ಫೆಬ್ರವರಿ 22: ಪರ್ತ್‌ನಲ್ಲಿ ಶನಿವಾರ (ಫೆಬ್ರವರಿ 22) ನಡೆದ ಮಹಿಳಾ ಟಿ20 ವಿಶ್ವಕಪ್ ದ್ವಿತೀಯ ಪಂದ್ಯದಲ್ಲಿ ದುರ್ಬಲ ತೈಲ್ಯಾಂಡ್‌ ವಿರುದ್ಧ ವೆಸ್ಟ್ ಇಂಡೀಸ್ ವನಿತಾ ತಂಡ 7 ವಿಕೆಟ್ ಸುಲಭ ಜಯ ಗಳಿಸಿದೆ. ವಿಂಡೀಸ್ ನಾಯಕಿ ಸ್ಟಫಾನಿ ಟೇಲರ್ ಅಜೇಯ 26 ರನ್, 3 ವಿಕೆಟ್‌ ಕೂಡ ಪಡೆದು ಆಲ್ ರೌಂಡರ್ ಆಟ ಪ್ರದರ್ಶಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಥೈಲ್ಯಾಂಡ್ ಮಹಿಳಾ ತಂಡ, ನನ್ನಪತ್ ಕೊಂಚರೋಯೆಂಕೈ 33, ನರುಮೋಲ್ ಚೈವಾಯಿ 13, ನಟ್ಟಕನ್ ಚಾಂಟಮ್ ಗಮನಾರ್ಹ 9 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 9 ವಿಕೆಟ್‌ ಕಳೆದು ಕೇವಲ 78 ರನ್ ಕಲೆ ಹಾಕಲಷ್ಟೇ ಶಕ್ತವಾಯ್ತು.

ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್ ಮಹಿಳಾ ತಂಡ, ಹೇಲಿ ಮ್ಯಾಥ್ಯೂಸ್ 16, ಸ್ಟಫಾನಿ ಟೇಲರ್ ಅಜೇಯ 26, ಶೆಮೈನ್ ಕ್ಯಾಂಪ್ಬೆಲ್ಲೆ ಅಜೇಯ 25 ರನ್‌ ಸೇರ್ಪಡೆಯೊಂದಿಗೆ 16.4ನೇ ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 80 ರನ್ ಪೇರಿಸಿ ಗೆಲುವನ್ನಾಚರಿಸಿತು.

ಥೈಲ್ಯಾಂಡ್ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ನ ಸ್ಟಫಾನಿ ಟೇಲರ್ ಕೇವಲ 13 ರನ್‌ಗೆ 3 ವಿಕೆಟ್‌ ಮುರಿದು ಎದುರಾಳಿ ತಂಡದ ಸೋಲಿಗೆ ಕಾರಣರಾದರು. ಸ್ಟಫಾನಿ ಪಂದ್ಯಶ್ರೇಷ್ಠೆ ಪ್ರಶಸ್ತಿಗೂ ಭಾಜನರಾದರು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಡಿತ್ತು. ಇದರಲ್ಲಿ ಟೀಮ್ ಇಂಡಿಯಾ ವನಿತೆಯರು 17 ರನ್‌ ಗೆಲುವಿನೊಂದಿಗೆ ಶುಭಾರಂಭ ಕಂಡಿದ್ದರು.

Story first published: Saturday, February 22, 2020, 17:20 [IST]
Other articles published on Feb 22, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+