ಇಂಗ್ಲೆಂಡ್ ಪ್ರವಾಸಕ್ಕೆ ಯಾವ ಆಟಗಾರನನ್ನೂ ಒತ್ತಾಯಿಸುವುದಿಲ್ಲ: ಹೋಲ್ಡರ್

ಪೋರ್ಟ್ ಆಫ್ ಸ್ಪೇನ್, ಮೇ 19: ಇಂಗ್ಲೆಂಡ್‌ಗೆ ಪ್ರವಾಸಕ್ಕೆ ನಾನು ನನ್ನ ತಂಡದ ಯಾವುದೇ ಆಟಗಾರನನ್ನೂ ಒತ್ತಾಯಿಸುವುದಿಲ್ಲ ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ. ಈ ಮಳೆಗಾಲದ ವೇಳೆಗೆ ವೆಸ್ಟ್ ಇಂಡೀಸ್-ಇಂಗ್ಲೆಂಡ್ ತಂಡಗಳಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ವೇಳಾಪಟ್ಟಿ ನಿಗದಿಯಾಗಿತ್ತು.
ಬಿಬಿಸಿ ಜೊತೆ ಮಾತನಾಡಿದ ಜೇಸನ್ ಹೋಲ್ಡರ್, 'ಪ್ರತಿಯೊಬ್ಬ ಆಟಗಾರನಿಗೂ ಪ್ರವಾಸದ ಬಗ್ಗೆ ನಿರ್ಧಾರ ತಾಳಲು ಅವಕಾಶವಿದೆ. ಯಾರನ್ನೂ ಒತ್ತಾಯಿಸಲಾಗುವುದಿಲ್ಲ,' ಎಂದು ಪ್ರತಿಕ್ರಿಯಿಸಿದ್ದಾರೆ. ಜೂನ್ 4ರಿಂದ ಜೂನ್ 29ರ ವರೆಗೆ ಇಂಗ್ಲೆಂಡ್‌ಗೆ ವೆಸ್ಟ್ ಇಂಡೀಸ್ ಪ್ರವಾಸ ನಡೆಯಲಿತ್ತಾದರೂ ಕೊರೊನಾ ಕಾರಣ ಈ ಸರಣಿ ಮುಂದೂಡಲ್ಪಟ್ಟಿದೆ.
'ನಾವೊಂದು ವೇಳೆ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲು ಯೋಚಿಸಿದ್ದೇ ಆದರೆ ಆ ಪ್ರವಾಸ ಖಂಡಿತಾ ಸುರಕ್ಷಿತವಾಗಿತ್ತದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಖಂಡಿತವಾಗಿಯೂ ನನ್ನ ದೃಷ್ಟಿಕೋನದಿಂದ, ನಾನು ಯಾರನ್ನೂ ಎಲ್ಲಿಯೂ ಹೋಗುವಂತೆ ಒತ್ತಾಯಿಸುವುದಿಲ್ಲ,' ಎಂದು ಜೇಸನ್ ಹೇಳಿದ್ದಾರೆ.
ಜೂನ್ 4ರಿಂದ ಆರಂಭಗೊಳ್ಳಬೇಕಿದ್ದ ಇಂಗ್ಲೆಂಡ್‌ಗೆ ವೆಸ್ಟ್ ಇಂಡೀಸ್ ಪ್ರವಾಸ ಸರಣಿ ಕೋವಿಡ್-19ನಿಂದಾಗಿ ಜುಲೈ ಬಳಿಕ ಮುಂದೂಡಲ್ಪಟ್ಟಿದೆ. ಈ ಸರಣಿಗೆ ಸಂಬಂಧಿಸಿ ಬದಲಿ ವೇಳಾಪಟ್ಟಿ ಈ ತಿಂಗಳಲ್ಲಿ ಘೋಷಿಸಲ್ಪಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications